
ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಚಕ್ಕುಲಿ ವಿತರಣೆ
ಉಡುಪಿ: ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸವಿ ನೆನಪಿಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರತೀ ವರ್ಷದಂತೆ ಈ ವರ್ಷವೂ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಿಸಿದೆ.
ನಾಗರಿಕ ಸಮಿತಿ ಕಚೇರಿ ಮುಂಭಾಗದಲ್ಲಿ ಚಕ್ಕುಲಿ ವಿತರಣೆಗೆ ಚಾಲನೆ ನೀಡಲಾಯಿತು.
ಲಕ್ಷೀವರ ತೀರ್ಥ ಶ್ರೀಪಾದರ ಸಹೋದರ ಲಾತವ್ಯ ಆಚಾರ್ಯ ಮಾತನಾಡಿದರು. ಸಹಕಾರಿ ಧುರೀಣ ಜಯಕರಶೆಟ್ಟಿ ಇಂದ್ರಾಳಿ, ನಾಗರಿಕ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿದರು. ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಶ್ ಶೆಟ್ಟಿ, ಗಂಗಾಧರ್ , ವಾಸುದೇವ , ಶಂಕರ್ ನಾಯಕ್, ಸುಮಾ ಆಚಾರ್, ದೇವಕಿ ಬಾರ್ಕೂರು ಉಪಸ್ಥಿತರಿದ್ದರು. ಬಳಿಕ ಸುಮಾರು 10 ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಶಂಕರ್ ನಾಯಕ್ ಅವರ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿತು.