ಮುಂಬೈ: ಖ್ಯಾತ ನಟಿ ಹಾಗೂ ಕ್ರೀಡಾ ವರದಿಗಾರ್ತಿಯಾಗಿರುವ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ನಿಧನಹೊಂದಿದ್ದಾರೆ.
ಇಂದು ಮುಂಜಾನೆ ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದರು. 1998ರಲ್ಲಿ ಜಾಹೀರಾತು ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದರು.
ಆಂಥೋನಿ ಕೌನ್ ಹೇ, ಪ್ಯಾರ್ ಮೈ ನೇ ಕಬಿ ಕಬಿ ಚಿತ್ರಗಳನ್ನು ನಿರ್ದೇಶಿಸಿದ್ದರು.
