ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಗಾಳ: ಆಪ್ತರ ಮನೆಗಳಲ್ಲೂ ಶೋಧ

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಗಾಳ: ಆಪ್ತರ ಮನೆಗಳಲ್ಲೂ ಶೋಧ

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಗಾಳ: ಆಪ್ತರ ಮನೆಗಳಲ್ಲೂ ಶೋಧ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಸಂಬಂಧಿಕರು, ಆಪ್ತರಿಗೆ ಸೇರಿದ 15 ಮನೆಗಳ ಮೇಲೆ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ ವಾಸವಿರುವ ಹಾಗೂ ವಿವಿಧ ಉದ್ಯಮಗಳಲ್ಲಿ ಪಾಲುದಾರರಾದ ಸತೀಶ ಅವರ ಆಪ್ತರಿಗೂ ಇ.ಡಿ ಗಾಳ ಹಾಕಿದೆ.

ಬೆಳಗಾವಿ ನಗರದಲ್ಲಿರುವ ಸತೀಶ ಅವರ ಭಾಮೈದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ ಮನೆ ಮೇಲೆ ಎರಡನೇ ಬಾರಿ ದಾಳಿ ಮಾಡಲಾಗಿದೆ.

ಇದೇ ಜೂನ್ 24ರಂದು ಮಂಜುನಾಥ ಮನೆ, ಕಚೇರಿ ಮೇಲೆ ದಾಳಿ ನಡೆದಿತ್ತು. ಆಗ ₹13.3 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿತ್ತು. ₹5.5 ಕೋಟಿ ನಗದು, ₹7.8 ಕೋಟಿ ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ, ಆಸ್ತಿಪತ್ರಗಳು ಪತ್ತೆಯಾಗಿದ್ದವು. ಮಂಜುನಾಥ ಹಾಗೂ ಸತೀಶ ಅವರ ಪುತ್ರ ರಾಹುಲ್ ಜಾರಕಿಹೊಳಿ ಹಲವು ಉದ್ಯಮಗಳಲ್ಲಿ ಪಾಲುದಾರ ಆಗಿದ್ದಾರೆ ಎಂಬ ವಿಷಯವೂ ದಾಖಲೆ‌ ಪರಿಶೀಲನೆ ವೇಳೆ‌ ಗೊತ್ತಾಗಿತ್ತು. ಮತ್ತೊಮ್ಮೆ ಅವರದೇ ಮನೆ ಮೇಲೆ ದಾಳಿ ಮಾಡಲಾಗಿದೆ.

ನಗರದ ಲಕ್ಷ್ಮೀಟೇಕಡಿ ಪ್ರದೇಶದಲ್ಲಿರುವ ಸತೀಶ ಅವರ ಆಪ್ತ ಡಾ.ಗಿರೀಶ ಸೋನವಾಲ್ಕರ ಮನೆ ಮೇಲೂ ದಾಳಿ ನಡೆಸಿದ್ದು, ಪರಿಶೀಲನೆ ಶುರುವಾಗಿದೆ.

ಬೆಳಗಾವಿಯ ರಾಜು ಧರಗಶೆಟ್ಟಿ, ವಿಠ್ಠಲ್ ಪರಸಣ್ಣವರ್ ಮನೆಗಳನ್ನೂ ಜಾಲಾಡಲಾಗಿದೆ. ಈ ಇಬ್ಬರೂ ಉದ್ಯಮಿಗಳು ಸಚಿವ ಸತೀಶ ಆಪ್ತರಾಗಿದ್ದಾರೆ.

ಇನ್ನೊಂದೆಡೆ, ಸತೀಶ ಅವರ ಮೂಲ‌ ನೆಲೆ ಗೋಕಾಕ ನಗರದ ಹಿಲ್ ಗಾರ್ಡನ್ನಿನಲ್ಲಿರುವ ಅವರ ಸ್ವಂತ ಮನೆ ಮೇಲೂ ದಾಳಿ ಮುಂದುವರಿದಿದೆ. ಗೋಕಾಕ ನಗರದ ಅವರ ಇಬ್ಬರು ಆಪ್ತರಿಗೂ ಗಾಳ ಹಾಕಲಾಗಿದೆ.

ದಾಳಿಯಲ್ಲಿ ಬೆಂಗಳೂರು ಹಾಗೂ ಗೋವಾದ ಇ.ಡಿ ಅಧಿಕಾರಿಗಳ ತಂಡವಿದೆ. ಅರೆಸೇನಾ ತುಕಡಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ