ಪತ್ರಿಕಾ ವಿತರಕರ ದಿನ: ಜ್ಞಾನ ಹಂಚುವ ಪತ್ರಿಕಾ ಸೇನಾನಿಗಳು

ಪತ್ರಿಕಾ ವಿತರಕರ ದಿನ: ಜ್ಞಾನ ಹಂಚುವ ಪತ್ರಿಕಾ ಸೇನಾನಿಗಳು

ಪತ್ರಿಕಾ ವಿತರಕರ ದಿನ: ಜ್ಞಾನ ಹಂಚುವ ಪತ್ರಿಕಾ ಸೇನಾನಿಗಳು

ಮಳವಳ್ಳಿ: ಮಳೆ, ಚಳಿ, ಗಾಳಿ ಎನ್ನದೇ ಪ್ರತಿದಿನ ಬೆಳಿಗ್ಗೆ ತಮ್ಮ ಕಾಯಕವನ್ನು ನಿಲ್ಲಿಸದೆ ಪತ್ರಿಕೋದ್ಯಮದ ಬೆನ್ನೆಲುಬಾಗಿ ಮತ್ತು ಓದುಗರಿಗೂ ಹಾಗೂ ಮಾಧ್ಯಮಕ್ಕೂ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರ ಕಾಯಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಇವರ ಕಾಯಕ ಗೌರವಿಸುವುದಕ್ಕಾಗಿ ಸೆಪ್ಟೆಂಬರ್ 4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತಿದೆ. ಸೂರ್ಯ ಉದಯಿಸುವ ಮುನ್ನವೇ ನಗರ, ಪಟ್ಟಣಗಳ ಬಸ್ ನಿಲ್ದಾಣ, ಮಾರುಕಟ್ಟೆ, ರೈಲು ನಿಲ್ದಾಣ, ಪ್ರಮುಖ ವೃತ್ತಗಳಿಗೆ ಬರುವ ಪತ್ರಿಕೆಗಳ ಜೋಡಿಸಿ ಸೈಕಲ್, ಬೈಕ್ ಮೇಲೆ ಬ್ಯಾಗ್ ಏರಿಸಿ ಎಲ್ಲೆಡೆ ತಲುಪಿಸುವ ಇವರು ಪ್ರಸ್ತುತದ ಮೊಬೈಲ್, ಟಿ.ವಿ.ಗಳ ಹಾವಳಿ ನಡುವೆಯೂ ನಿತ್ಯ ಮನೆ-ಕಚೇರಿಗಳಿಗೆ ದೇಶ-ವಿದೇಶ, ರಾಜ್ಯ-ಸ್ಥಳೀಯ ಸಮಾಚಾರಗಳನ್ನು ಒಳಗೊಂಡಿರುವ ಪತ್ರಿಕೆಗಳನ್ನು ವಿತರಿಸುತ್ತಾರೆ.

ಪತ್ರಿಕೆಗಳು ಹುಟ್ಟಿಕೊಂಡ ಕಾಲದಿಂದಲೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವ ಸಮುದಾಯ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಾ ಅನೇಕರು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಅನೇಕ ಹಿರಿಯರು ಆರೇಳು ದಶಕಗಳಿಂದ ವಿತರಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

55 ವರ್ಷದ ಸಂತೆಬಾಚನಹಳ್ಳಿಯ ನಾಗೇಶ್ ಅವರು ಕಳೆದ ನಾಲ್ಕು ದಶಕಗಳಿಂದ ಪತ್ರಿಕಾ ಏಜೆಂಟರಾಗಿ ಕೆಲಸ ಮಾಡಿಕೊಂಡಿದ್ದಾರೆ. ಸಹೋದರರು ಬೆಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ತಂದೆಯ ಆಸೆಯಂತೆ ಜೀವನ ನಿರ್ವಹಣೆಗಾಗಿ ವಿತರಣೆ ಮಾಡುತ್ತಾ ಜೀವನ ಮಾಡುತ್ತಿದ್ದಾರೆ.

‘ಸಾಮಾಜಿಕ ಮಾಧ್ಯಮಗಳ ನಡುವೆ ಓದುಗರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಆದರೂ ಇನ್ನೂ ಪತ್ರಿಕೆಗಳಿಂದಲೇ ಸಮಾಜದ ಆಗು ಹೋಗುಗಳನ್ನು, ನೈಜ ವರದಿಗಳನ್ನು ತಿಳಿಯಬಯಸುವವರು ಇದ್ದಾರೆ’ ಎನ್ನುತ್ತಾರೆ ಕೀಲಾರದ ವಿತರಕ ಡಿ.ಶಿವರಾಮು.

‘ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಒಳಗೊಂಡಂತೆ ಓದುಗರ ನೆಚ್ಚಿನ ಪತ್ರಿಕೆಯಾಗಿರುವ ಪ್ರಜಾವಾಣಿ ತಮ್ಮ ಕೈಯಲ್ಲಿ ಟೀ-ಕಾಫಿ ಕುಡಿಯುವ ಮುನ್ನ ಕೈಯಲ್ಲಿ ಇರಲಿ ಎನ್ನುವ ಸಾವಿರಾರು ಮಂದಿ ಇದ್ದಾರೆ’ ಎನ್ನುತ್ತಾರೆ ದುದ್ದ ಗ್ರಾಮದ ಶಶಿಧರ್. ‘ಸಮಾಜದಲ್ಲಿನ ಅನೇಕ ಅಂಕು-ಡೊಂಕುಗಳನ್ನು ತಿದ್ದಿ, ಸುಂದರ, ಸದೃಢ ಸಮಾಜ ನಿರ್ಮಾಣದತ್ತ ಸಾಗುವ ಪತ್ರಿಕೆ ಕಾಯಕದ ಬಗ್ಗೆ ಓದುಗರ ಮೆಚ್ಚುಗೆ ತೃಪ್ತಿ ತಂದಿದೆ’ ಎನ್ನುವ ಅರಳಕುಪ್ಪೆ ವಿತರಕ ಎ.ಆರ್.ಹರೀಶ್.

‘ಸಾಮಾಜಿಕ ಜಾಲತಾಣಗಳ ಹಾವಳಿ ನಡುವೆಯೂ ಪತ್ರಿಕೆಗಳ ಓದುಗರ ಸಂಖ್ಯೆ ಕ್ಷೀಣಿಸದಂತೆ ಕೆಲಸ ಮಾಡುವ ಸವಾಲು ನಮಗಿದೆ. ಆ ಕಾಯಕವನ್ನು ಯಶಸ್ವಿಯಾಗಿ ನಿಭಾಯಿಸುವ ಕೆಲಸ ತೃಪ್ತಿ ತಂದಿದೆ’ ಎನ್ನುತ್ತಾರೆ ಬಿ.ಜಿ ನಗರದ ನಾರಾಯಣಸ್ವಾಮಿ.

‘ಆರೋಗ್ಯದ ಜತೆಗೆ ಆರ್ಥಿಕ ಪ್ರಬಲತೆಗಾಗಿ ಪತ್ರಿಕಾ ವಿತರಣೆ ಕಾಯಕ ಮುಖ್ಯವಾಗಿದೆ. 57 ವರ್ಷಗಳಿಂದ ಬೆಳಿಗ್ಗೆ ಪತ್ರಿಕೆ ವಿತರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ’ ಎನ್ನುತ್ತಾರೆ ಮಳವಳ್ಳಿಯ ಎ.ಎಸ್. ಪ್ರಭಾಕರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-40-1493668313

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ