ಬೆಂಗಳೂರು | ಗುಂಡಿ ಮುಚ್ಚಿಲ್ಲ, ಹೂಳು ತೆಗೆದಿಲ್ಲ: ಎಲ್ಲಿ ಹೋಯಿತು ₹1.5ಲಕ್ಷ ಕೋಟಿ

ಬೆಂಗಳೂರು | ಗುಂಡಿ ಮುಚ್ಚಿಲ್ಲ, ಹೂಳು ತೆಗೆದಿಲ್ಲ: ಎಲ್ಲಿ ಹೋಯಿತು ₹1.5ಲಕ್ಷ ಕೋಟಿ

ಬೆಂಗಳೂರು | ಗುಂಡಿ ಮುಚ್ಚಿಲ್ಲ, ಹೂಳು ತೆಗೆದಿಲ್ಲ: ಎಲ್ಲಿ ಹೋಯಿತು ₹1.5ಲಕ್ಷ ಕೋಟಿ

ಬೆಂಗಳೂರು: ನಗರದ ರಸ್ತೆಗಳಿಗೆ ಮೂರು ವರ್ಷದಿಂದ ಡಾಂಬರು ಹಾಕಿಲ್ಲ, ಗುಂಡಿಗಳನ್ನು ಮುಚ್ಚಿಲ್ಲ, ರಾಜಕಾಲುವೆಗಳ ಹೂಳು ತೆಗೆದಿಲ್ಲ, ಬೃಹತ್‌ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿಲ್ಲ. ಆದರೂ, ಮೂರು ವರ್ಷಗಳಿಂದ ₹50 ಸಾವಿರ ಕೋಟಿ, ₹1 ಲಕ್ಷ ಕೋಟಿ, ಕೊನೆಗೆ ₹1.5 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಬಗ್ಗೆ ಹೇಳಲಾಗುತ್ತಿದೆ. ಇವು ಕಿಂಚಿತ್ತೂ ವಾಸ್ತವಕ್ಕೆ ಬಂದಿಲ್ಲ, ಹೇಳಿಕೆ, ಘೋಷಣೆಯಲ್ಲಷ್ಟೇ ಉಳಿದಿದೆ.

ಬಿಬಿಎಂಪಿ ಇದ್ದಾಗ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿರುವ ಮುಖಂಡರ ಮಾತುಗಳಿವು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ‘ಬ್ರ್ಯಾಂಡ್‌ ಬೆಂಗಳೂರು’ ಚಾಲ್ತಿಯಲ್ಲಿದೆ. ಬಿಬಿಎಂಪಿಯಾಗಿದ್ದಾಗಲೇ ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಲ್ಲಿ 2025–26ರ ಬಜೆಟ್‌ ಮಂಡಿಸಿ, ಸುರಂಗ ರಸ್ತೆ, ಮೇಲ್ಸೇತುವೆ, ಗ್ರೇಡ್‌ ಸೆಪರೇಟರ್‌ ಸೇರಿದಂತೆ 21 ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಆದರೆ, ಅವುಗಳನ್ನು ವರ್ಷಗಳ ಹಿಂದೆಯೇ ಡಿ.ಕೆ. ಶಿವಕುಮಾರ್‌ ಅವರು ಆಗಾಗ್ಗೆ ಪ್ರಕಟಿಸಿದ್ದರು. ಇವುಗಳಲ್ಲಿ ಯಾವ ಯೋಜನೆಯೂ ಪ್ರಾರಂಭವಾಗಿಲ್ಲ.

2017ರಲ್ಲಿ ಆರಂಭವಾಗಿರುವ ಈಜಿಪುರ ಮೇಲ್ಸೇತುವೆ ಸೇರಿದಂತೆ ಐದಾರು ವರ್ಷಗಳಿಂದ ಕಾಮಗಾರಿ ಹಂತದಲ್ಲೇ ಇರುವ ಯಲಹಂಕ ಮೇಲ್ಸೇತುವೆ, ಮಾಗಡಿ ಹೊರ ವರ್ತುಲ ರಸ್ತೆಯ ಎರಡು ಗ್ರೇಟರ್ ಸೆಪರೇಟರ್‌, ಎಚ್‌ಎಂಟಿ ಗ್ರೇಡ್‌ ಸೆಪರೇಟರ್‌ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹಣ ಬಿಡುಗಡೆ ಆಗದೆ ಇರುವುದೇ ಇದಕ್ಕೆ ಕಾರಣ’ ಎಂದು ಮುಖಂಡರು ಹೇಳುತ್ತಾರೆ.

‘ವಿಶ್ವವೇ ಬೆರಗಾಗುವಷ್ಟು ಎತ್ತರದ ಸ್ಕೈಡೆಕ್‌ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಲೇ ಇದ್ದಾರೆ. ಆದರೆ, ಒಂದು ಸಣ್ಣ ಕಲ್ಲು ಕೂಡ ಅಲುಗಾಡಿಲ್ಲ. ಕಳೆದ ವರ್ಷದಿಂದ ನಗರಕ್ಕೆ ಮೂರರ ಜೊತೆಗೆ ನಾಲ್ಕು ಸಾವಿರ ಕೋಟಿ ಸೇರಿದಂತೆ ₹7 ಸಾವಿರ ಕೋಟಿ ನೀಡುತ್ತೇವೆ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ.  ಹಿಂದಿನ ಸರ್ಕಾರ ಘೋಷಿಸಿದ್ದಷ್ಟೇ (₹3 ಸಾವಿರ ಕೋಟಿ) ಬಿಡುಗಡೆ ಆಗಿದ್ದು. ಈ ವರ್ಷವೂ ಬಜೆಟ್‌ ಹೇಳಿಕೆಯಲ್ಲಿ ₹7 ಸಾವಿರ ಕೋಟಿ ಇದ್ದರೂ, ಅಂದಾಜು ವ್ಯಯದಲ್ಲಿರುವುದು ₹3 ಸಾವಿರ ಕೋಟಿ’ ಎಂದು ಪದ್ಮನಾಭರೆಡ್ಡಿ ಹೇಳಿದರು.

‘ಈ ವರ್ಷ ಮಳೆ ಬಾರದ್ದರಿಂದ ಪ್ರವಾಹ ಸೃಷ್ಟಿಯಾಗಿಲ್ಲ. ಎರಡು ವರ್ಷದ ಹಿಂದಿನ ಮಳೆಯಾಗಿದ್ದರೆ ಪ್ರವಾಹ ಬರುತ್ತಿತ್ತು. ವಿಶ್ವಬ್ಯಾಂಕ್‌ನಿಂದ ₹2,000 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಹಾಗೂ ಪ್ರವಾಹ ನಿಯಂತ್ರಣಕ್ಕೆ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇಂದಿಗೂ ಕೆಲಸವೇ ಪ್ರಾರಂಭ ಆಗಿಲ್ಲ’ ಎಂದು ಎನ್‌.ಆರ್‌. ರಮೇಶ್‌ ದೂರಿದರು.

₹1.5 ಲಕ್ಷ ಕೋಟಿ ವೆಚ್ಚ: ಡಿ.ಕೆ.ಶಿವಕುಮಾರ್‌

‘ಬೆಂಗಳೂರಿನ ಪ್ರಗತಿಗೆ ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜುಲೈ 8ರಂದು ತಿಳಿಸಿದ್ದರು.

‘ಹೆಬ್ಬಾಳ ಬಳಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಣ್ಣ ಸುರಂಗ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಜೊತೆಗೆ ಬೆಂಗಳೂರಿನಲ್ಲಿ 40 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು. ಇವುಗಳ ಜೊತೆಗೆ 44 ಕಿ.ಮೀ. ಉದ್ದದ ಡಬಲ್ ಡೆಕರ್ ಯೋಜನೆ ರೂಪಿಸಿದ್ದೇವೆ. 133 ಕಿ.ಮೀ. ಉದ್ದದ ಮೇಲ್ಸೇತುವೆ ಯೋಜನೆ ರೂಪಿಸಿದ್ದೇವೆ. ಜೊತೆಗೆ 123 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಮಾಡುತ್ತಿದ್ದೇವೆ. ಮೊದಲ ಹಂತಕ್ಕೆ ನಾವು ₹26 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಹೀಗೆ, ಬೆಂಗಳೂರಿನ ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದರು.

ಬಿಬಿಎಂಪಿಯ ಮಾಜಿ ಆಡಳಿತ/ವಿರೋಧ ಪಕ್ಷದ ನಾಯಕರ ಮಾತು

‘ಪೇಪರ್‌ ಟೈಗರ್‌’ ಎಂಬುದಕ್ಕೆ ಈಗಿನ ಕಾಂಗ್ರೆಸ್‌ ಸರ್ಕಾರ ಸ್ಪಷ್ಟ ಉದಾಹರಣೆ. ಹೇಳೋದು ಹತ್ತು–ನೂರಾದರೆ ಮಾಡುವುದು ಏನೂ ಇಲ್ಲ. ಲಕ್ಷಾಂತರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ತಂದಿಲ್ಲ. ಸಂವಿಧಾನದ ವಿರೋಧಿಯಾಗಿಯೇ ಕೆಲಸ ಮಾಡುತ್ತಿದ್ದಾರೆ.

ಹೆಸರಿಗಷ್ಟೇ ಐದು ನಗರ ಪಾಲಿಕೆಗಳಾಗಿವೆ. ಹತ್ತಾರು ಐಎಎಸ್‌ ಅಧಿಕಾರಿಗಳು, 50ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳಿಗೆ ವೇತನ ನೀಡಿ, ಕಚೇರಿ ನಿರ್ವಹಣೆ ಮಾಡಿ, ನಿತ್ಯದ ವೆಚ್ಚಗಳನ್ನು ಸರಿದೂಗಿಸಲು ಪಾಲಿಕೆಗಳಲ್ಲಿ ಹಣ ಇಲ್ಲ. ಇನ್ನು ಅಭಿವೃದ್ಧಿ ಕಾರ್ಯ, ಹೊಸ ಯೋಜನೆ, ಬೃಹತ್‌ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ?

ಬೃಹತ್‌ ನಗರದಲ್ಲಿ ಒಬ್ಬ ಮೇಯರ್‌, ಒಬ್ಬ ಕಮಿಷನರ್‌ನಿಂದ ಜನರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಐದು ನಗರ ಪಾಲಿಕೆಗಳನ್ನು ಮಾಡಲಾಗಿದೆ. ಬಜೆಟ್‌ ಅನ್ನು ಮಾಡಲಾಗಿದ್ದು, ಅದರ ಅನುಷ್ಠಾನದಲ್ಲಿ ಅಧಿಕಾರಿಗಳಿದ್ದಾರೆ. ನಮ್ಮ ಸಚಿವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ನಡೆದು ಜನಪ್ರತಿನಿಧಿಗಳೂ ಬಂದರೆ ಒಳ್ಳೆಯದು.

ಐದು ನಗರ ಪಾಲಿಕೆಗಳನ್ನು ಮಾಡಿದ್ದೇ ಅವೈಜ್ಞಾನಿಕ. ಅದಕ್ಕೆ ಬೇಕಾದ ಅಧಿಕಾರಿಗಳಿಲ್ಲ, ಅನುದಾನ ಕೊಟ್ಟಿಲ್ಲ. ಇನ್ನು ಅಭಿವೃದ್ಧಿ ಹೇಗಾಗುತ್ತದೆ. ಕೆಂಪೇಗೌಡರು ಕಟ್ಟಿದ ನಗರವನ್ನು ಛಿದ್ರ ಮಾಡಿದರು. ಕಾಂಗ್ರೆಸ್‌ ಸರ್ಕಾರಕ್ಕೆ ಕೆಂಪೇಗೌಡರ ಮೇಲೆ ಸಿಟ್ಟೋ, ನಮಗೆ ಮತ ಹಾಕೊಲ್ಲ ಎಂದು ಜನರ ಮೇಲೆ ಸಿಟ್ಟೋ ಗೊತ್ತಿಲ್ಲ, ಚುನಾವಣೆಯನ್ನೂ ಮಾಡುತ್ತಿಲ್ಲ. ಕೆಲಸವನ್ನೂ ಮಾಡುತ್ತಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ