ಕಲಬುರಗಿ | ಪಡಿತರ ಮರು ಇ–ಕೆವೈಸಿ: 9.64 ಲಕ್ಷ ಬಾಕಿ

ಕಲಬುರಗಿ | ಪಡಿತರ ಮರು ಇ–ಕೆವೈಸಿ: 9.64 ಲಕ್ಷ ಬಾಕಿ

ಕಲಬುರಗಿ | ಪಡಿತರ ಮರು ಇ–ಕೆವೈಸಿ: 9.64 ಲಕ್ಷ ಬಾಕಿ

ಕಲಬುರಗಿ: ಕೆಲವರು ಮೃತಪಟ್ಟಿದ್ದರೂ ಅವರ ಕುಟುಂಬದ ಸದಸ್ಯರು ಹೆಬ್ಬೆಟ್ಟಿನ ಗುರುತು ನೀಡಿ, ಪಡಿತರ ತೆಗೆದುಕೊಂಡು ಹೋಗುವುದನ್ನು ತಡೆಯುವ ಹಾಗೂ ಅರ್ಹರಿಗೆ ಯೋಜನೆ ತಲುಪಿಸುವ ಉದ್ದೇಶದಿಂದ 5 ವರ್ಷಗಳ ಹಿಂದೆ ಕೆವೈಸಿ ಮಾಡಿಸಿದ ಫಲಾನುಭವಿಗಳ ಇ–ಕೆವೈಸಿಯನ್ನು ಮತ್ತೆ ತೆಗೆದುಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 4,27,593 ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ 11,68,842 ಫಲಾನುಭವಿಗಳು ಕಡ್ಡಾಯವಾಗಿ ಮತ್ತೆ ಇ–ಕೆವೈಸಿ ಮಾಡಿಸಬೇಕಿದೆ. ಇಲ್ಲದಿದ್ದರೆ ಪಡಿತರ ಚೀಟಿಯಲ್ಲಿಯ ಅವರ ಹೆಸರು ತೆಗೆಯಲಾಗುತ್ತದೆ.

ಅದಕ್ಕೆ ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ನೀಡಲಾಗಿದೆ. ಆದರೆ, ಸರ್ವರ್ ಸಮಸ್ಯೆ ಸೇರಿದಂತೆ ಇತರ ತಾಂತ್ರಿಕ ಕಾರಣಗಳಿಗಾಗಿ ಈ ಕಾರ್ಯ ವಿಳಂಬವಾಗುತ್ತಿದೆ. ಆದ್ದರಿಂದಾಗಿ ಸೆಪ್ಟೆಂಬರ್ 7 ರವರೆಗೂ ಜಿಲ್ಲೆಯಲ್ಲಿ 2,04,477 ಜನರ ಇ–ಕೆ–ವೈಸಿ ಮಾಡಲಾಗಿದ್ದು, ಇನ್ನೂ 9,64,365 ಜನರ ಇ–ಕೆವೈಸಿ ತೆಗೆದುಕೊಳ್ಳುವುದು ಬಾಕಿ ಇದೆ.

ಬೆರಳಚ್ಚು ಸಮಸ್ಯೆ: ಇ–ಕೆವೈಸಿ ಪ್ರಕ್ರಿಯೆ ವಿಳಂಬಕ್ಕೆ ಬೆರಳಚ್ಚು ಬಾರದಿರುವುದೂ ಕಾರಣ. ವೃದ್ಧರು ಸೇರಿ ಕೆಲವರ ಬೆರಳಚ್ಚು ಸವೆದಿರುವುದರಿಂದ ಯಂತ್ರ ಗ್ರಹಿಸುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ಎಡತಾಕಿ ಜನರು ಬೇಸತ್ತು ಹೋಗಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಬೇಕು. ಇ–ಕೆವೈಸಿ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸುತ್ತಾರೆ.

ಸರ್ವರ್ ಸಮಸ್ಯೆ: ‘ಇ–ಕೆವೈಸಿ ಪ್ರಕ್ರಿಯೆಗೆ ಸರ್ವರ್ ಬಹಳ ಮುಖ್ಯ. ಆದರೆ, ನಿರಂತರವಾಗಿ ತಾಂತ್ರಿಕ ಅಡಚಣೆ ಉಂಟಾಗುತ್ತಿದೆ. ತುಂಬಾ ಸಮಯವೂ ಹಿಡಿಯುತ್ತಿದೆ. ಸರ್ವರ್ ಬಲ ಪಡಿಸಬೇಕು. ಬಳಿಕ ಇ–ಕೆವೈಸಿ ಮಾಡಲು ಸೂಚಿಸಬೇಕು’ ಎಂದು ಪಡಿತರ ವಿತರಕರು ಒತ್ತಾಯ ಮಾಡುತ್ತಾರೆ.

ಅಂಗಡಿಯವರಿಗೆ ಬಾರದ ಕಮಿಷನ್: ‘5 ವರ್ಷಗಳ ಹಿಂದೆ ಕೆವೈಸಿ ಮಾಡಲಾಗಿದೆ. ಆಗ ಪ್ರತಿ ಪಡಿತರ ಚೀಟಿಗೆ ₹20 ಕಮಿಷನ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೂ ಅದನ್ನು ಬಿಡುಗಡೆ ಮಾಡಿಲ್ಲ. ಮತ್ತೆ ಈಗ ಇ–ಕೆವೈಸಿ ಮಾಡುವ ಜವಾಬ್ದಾರಿ ಹೆಗಲಿಗೇರಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಬೇಕಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಡಿತರ ವಿತರಕರೊಬ್ಬರು ತಿಳಿಸಿದರು.

‘ಜಿಲ್ಲೆಯಲ್ಲಿ ಮರು ಇ–ಕೆವೈಸಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದಿರುವ ಫಲಾನುಭವಿಗಳ ಪ್ರಕ್ರಿಯೆಯನ್ನೂ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿಗದಿತ ಅವಧಿಯೊಳಗಾಗಿ ಶೇ 100ರಷ್ಟು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಾರುತಿ ಬ್ಯಾಕೋಡ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ