Karnataka Rains: ಬೆಂಗಳೂರು ಭಾಗದಲ್ಲೇ ಹೆಚ್ಚಿನ ಮಳೆ, ಯಾವ ಭಾಗದಲ್ಲಿ ಎಷ್ಟು?

Karnataka Rains: ಬೆಂಗಳೂರು ಭಾಗದಲ್ಲೇ ಹೆಚ್ಚಿನ ಮಳೆ, ಯಾವ ಭಾಗದಲ್ಲಿ ಎಷ್ಟು?

Karnataka Rains: ಬೆಂಗಳೂರು ಭಾಗದಲ್ಲೇ ಹೆಚ್ಚಿನ ಮಳೆ, ಯಾವ ಭಾಗದಲ್ಲಿ ಎಷ್ಟು?

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆಯಲ್ಲಿ ಅತ್ಯಧಿಕ 75 ಮಿ.ಮೀ ಮಳೆಯಾಗಿದೆ. ಇದಲ್ಲದೇ ಇದೇ ತಾಲ್ಲೂಕಿನ ವಗಾತ ಗ್ರಾಮದಲ್ಲೂ 59 ಮಿ.ಮೀ ಮಳೆಯಾದ ವರದಿಯಾಗಿದೆ.

ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲ್ಲೂಕಿನ ಅವಲಹಳ್ಳಿಯಲ್ಲಿ 47.5 ಮಿ.ಮೀ, ದೊಡ್ಡಬನ್ನಹಳ್ಳಿಯಲ್ಲಿ 43.5 ಮಿ.ಮೀ, ಮಂಡೂರಿನಲ್ಲಿ 34 ಮಿ.ಮೀ ಮಳೆಯಾಗಿದೆ.

ಉಡುಪಿ ಜಿಲ್ಲೆ ಪಾಂಡೇಶ್ವರದಲ್ಲಿ 30 ಮಿ.ಮೀ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಗೊನ್ನಾಗರದಲ್ಲಿ 27 ಮಿ.ಮೀ, ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಚೆಂಡಿಯೇದಲ್ಲಿ 26.5 ಮಿ.ಮೀ, ಬೆಂಗಳೂರು ನಗರ ಜಿಲ್ಲೆಯ ಸೋಮನಹಳ್ಳಿ ಹಾಗೂ ಶೀಗೇಹಳ್ಳಿಯಲ್ಲಿ ತಲಾ 24 ಮಿ.ಮೀ ಮಳೆಯಾಗಿದೆ.

ಹೊಸಕೋಟೆ ತಾಲ್ಲೂಕಿನ ಖಾಜಿ ಹೊಸಹಳ್ಳಿಯಲ್ಲಿ 23.5 ಮಿ.ಮೀ, ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಹಾಗೂ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿಯಲ್ಲಿ ತಲಾ 23 ಮಿ.ಮೀ, ಬೆಂಗಳೂರು ನಗರದ ದೊಡ್ಡಗುಬ್ಬಿ ಹಾಗೂ ಅಂಕೋಲಾ ತಾಲ್ಲೂಕಿನ ಬೇಲಿಕೇರಿಯಲ್ಲಿ ತಲಾ 22.5 ಮಿ.ಮೀ ಮಳೆಯಾಗಿದೆ.

ಪುತ್ತೂರು ತಾಲ್ಲೂಕಿನ ಪಾಣಾಜೆಯಲ್ಲಿ 22 ಮಿ.ಮೀ, ಬೆಂಗಳೂರು ನಗರದ ಹೆಮ್ಮಿಗೆಪುರ ಹಾಗೂ ಭಟ್ಕಳ ತಾಲ್ಲೂಕಿನ ಮಾವಿನ ಕುರ್ವೆಯಲ್ಲಿ 31.5 ಮಿ.ಮೀ ಮಳೆಯಾಗಿದೆ.

ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ 20.57 ಮಿ.ಮೀ, ಧಾರವಾಡ ಜಿಲ್ಲೆ ಅಳ್ನಾವರ ತಾಲ್ಲೂಕಿನ ಹೊನ್ನಾಪುರ ಹಾಗೂ ಕಾರವಾರ ತಾಲ್ಲೂಕಿನ ತೋಡೂರಿನಲ್ಲಿ ತಲಾ 20.5 ಮಿ.ಮೀ, ಬೆಂಗಳೂರಿನ ಜಕ್ಕೂರು ಹಾಗೂ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ತಂಬೂರಿನಲ್ಲಿ ತಲಾ 20 ಮಿ.ಮೀ ಮಳೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ