ನವದೆಹಲಿ: ಭಾರತವು ಚೀನಾ ಗಡಿಗೆ 50,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ.
ಎರಡೂ ರಾಷ್ಟ್ರಗಳ ನಡುವೆ ಕಾಶ್ಮೀರದ ವಿವಾದಿತ ಪ್ರದೇಶದ ಮೇಲೆ ಸಂಘರ್ಷ ನಡೆಯುತ್ತಲೇ ಇದೆ. ಕಳೆದೊಂದು ದಶಕದಿಂದ ಉಭಯ ರಾಷ್ಟ್ರಗಳ ನಡುವೆ ಹೋರಾಟ ನಡೆಯುತ್ತಿದೆ.
ಹೀಗಾಗಿ ಕಳೆದ ಕೆಲ ತಿಂಗಳಿಂದ ಭಾರತ ಸೇನೆಯು ತನ್ನ ಸೇನಾ ತುಕಡಿಗಳು ಹಾಗೂ ಯುದ್ಧ ವಿಮಾನಗಳನ್ನು ಹೆಚ್ಚುವರಿಯಾಗಿ ಚೀನಾ ಗಡಿಗೆ ರವಾನಿಸಿದೆ. ಚೀನಾ ಜತೆಗೆ ಗಡಿ ಹಂಚಿಕೊಂಡಿರುವ ಪ್ರಮುಖ ಮೂರು ಪ್ರದೇಶಗಳಿಗೆ ಸೇನೆಯನ್ನು ಸೇರಿಸುತ್ತಿದೆ. ಈಗಾಗಲೇ ಸುಮಾರು 2 ಲಕ್ಷ ಸೈನಿಕರನ್ನು ಚೀನಾ ಗಡಿಗೆ ರವಾನಿಸಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಶೇ.40 ರಷ್ಟು ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ
