ಥಾಣೆ: ಕೊರೋನಾ ಲಸಿಕೆ ನೀಡುವ ವಿಷಯದಲ್ಲಿ ಕೆಲವು ಕಡೆ ಬೇಜಾವಾಬ್ದಾರಿ ಮುಂದುವರಿದಿದೆ. ಇದರಿಂದಾಗಿ ಇತರ ಪ್ರದೇಶಗಳ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಥಾಣೆ ಮಹಾನಗರ ಪಾಲಿಕೆ ವ್ಯಾಪ್ತಿಯ ಆನಂದ ನಗರ ಲಸಿಕೆ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಒಂದೇ ದಿನ ಮೂರು ಕೊರೋನಾ ಲಸಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಜೂನ್ 25ರಂದು ಈ ಘಟನೆ ನಡೆದಿದೆ. ತೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೈಭವ ಸಾಳ್ವೆ ಎಂಬವರ ಪತ್ನಿಗೆ ಈ ರೀತಿ ಮೂರು ಬಾರಿ ಲಸಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.
ಘಟನೆಯನ್ನು ಮುಚ್ಚಿಡಲು ವೈಭವ ಸಾಳ್ವೆ ಮೇಲೆ ಒತ್ತಡ ಕೂಡ ಹೇರಿದ್ದರಂತೆ.
ಇದೀಗ ಮೂರು ಕೊರೋನಾ ಲಸಿಕೆ ಪಡೆದಿರುವ ಮಹಿಳೆಯ ಆರೋಗ್ಯದ ಮೇಲೆ ಸತತ ನಿಗಾ ವಹಿಸಲಾಗಿದೆ.
