ಅರಿಶಿನ ಸೌಂದರ್ಯಕ್ಕೆಷ್ಟು ಉಪಯೋಗವೋ ಮಧುಮೇಹಕ್ಕೂ ಅಷ್ಟೇ ಉಪಯೋಗ

ಅರಿಶಿನ ಎಂದಾಕ್ಷಣ ನಮಗೆ ನೆನಪಾಗೋದು ಮುಖದ ಅಂದ ಹೆಚ್ಚಿಸೋಕೆ, ಅಡುಗೆ ಮಾಡೋಕೆ. ಆದ್ರೆ ಅದನ್ನ ಮೀರಿದ ಮತ್ತಷ್ಟು ಅಂಶಗಳು ಈ ಅರಿಶಿನದಲ್ಲಿ ಅಡಗಿದೆ.

ಮಧುಮೇಹ ಇದ್ದವರು ಅರಿಶಿನ ಮಿಶ್ರಿತ ನೀರು ಕುಡಿಯುವುದರಿಂದ ಮಧುಮೇಹದಿಂದ ದೂರವಿರಬಹುದು.

ರಕ್ತ ಸೋರುತ್ತಿದ್ದರೆ ಅಥವಾ ಗಾಯ ವಾಸಿ ಮಾಡೋದಕ್ಕೂ ಅರಿಶಿನ ಬಳಕೆಯಾವುತ್ತದೆ.

ಕಫ ಹೆಚ್ಚಿಗೆ ಇದ್ದವರು ಅರಿಶಿನ ಹಾಕಿದ ಹಾಲನ್ನು ಕುಡಿದರೆ ಕಫ ದೂರವಾಗುತ್ತದೆ. 

ಅರಿಶಿನವು ನಂಜು ನಿರೋಧಕ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರ ಮಾಡಿ ಕುಡಿಯುವುದರಿಂದ ಹೊಳಪು ಹೆಚ್ಚಾಗುತ್ತದೆ.

ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತದಲ್ಲಿ ಕಂಡುಬರುವ ವಿಷಕಾರಿ ಅಂಶ ಹೊರಬರುತ್ತದೆ.

ಸುಣ್ಣದೊಂದಿಗೆ ಅರಿಶಿನ ಮಿಕ್ಸ್ ಮಾಡಿ ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಹಾಲಿನೊಂದಿಗೆ ಅರಿಶಿನ ಮಿಕ್ಸ್ ಮಾಡಿ ಕುಡಿಯುವುದರಿಂದ ಕಿವಿ ಸಂಬಂಧಿತ ಸಮಸ್ಯೆಗಳಿಂದ ದೂರ ಮಾಡಬಹುದು.

ಶೀತ ಅಥವ ಕೆಮ್ಮು ಸಮಸ್ಯೆಗಳಿಗೆ ಅರಿಶಿನದ ಹಾಲು ಪ್ರಯೋಜನಕಾರಿ. ಬಿಸಿ ಹಾಲನ್ನು ಸೇವಿಸಿದ ನಂತರ ಶ್ವಾಸಕೋಶದಲ್ಲಿ ಉಂಟಾಗಿರುವ ಶೀತ ಗುಣವಾಗುತ್ತದೆ.

ಹಾಲಿನೊಂದಿಗೆ ಅರಿಶಿನ ಹಾಕಿ ಕುಡಿಯುವದರಿಂದ ಮೂಳೆಗಳನ್ನು ಬಲಪಡಿಸುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ