ಹೈದರಾಬಾದ್: ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟಿ ವೇದಿಕಾ ಈಗಾಗಲೇ ತಮ್ಮ ನಟನೆಯಿಂದ ಭರವಸೆ ಮೂಡಿಸಿದ್ದಾರೆ.
ಮದ್ರಾಸಿ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟ ವೇದಿಕಾ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ನಾಯಕರಾಗಿದ್ದ ಸಂಗಮ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಅಭಿಮಾನಿಗಳ ಜತೆ ಸಾಮಾಜಿಕ ಜಾಲ ತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿರುವ ವೇದಿಕಾ ಆಕರ್ಷಕ ಫೋಟೋಗಳನ್ನು ಶೇರ್ ಮಾಡಿದ್ದಾರೆ.
