Kendra Drushti Yoga: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ; ಸ್ವಂತ ಮನೆ, ಆಸ್ತಿ ಖರೀದಿಸುವ ಯೋಗ!

Kendra Drushti Yoga: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ; ಸ್ವಂತ ಮನೆ, ಆಸ್ತಿ ಖರೀದಿಸುವ ಯೋಗ!

Kendra Drushti Yoga: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ; ಸ್ವಂತ ಮನೆ, ಆಸ್ತಿ ಖರೀದಿಸುವ ಯೋಗ!

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಗ್ರಹಗಳ ಸ್ಥಾನ ಮತ್ತು ಅವುಗಳ ಮಧ್ಯೆ ಇರುವ ಕೋನ ಕೂಡಾ ಬಹಳ ಮುಖ್ಯ. ಅದೇ ರೀತಿ, ನಾಳೆ ಅಂದ್ರೆ ಅಕ್ಟೋಬರ್ 2ಕ್ಕೆ ಬುಧ- ಮಂಗಳ ಪರಸ್ಪರ 90 ಡಿಗ್ರಿ ಕೋನದಲ್ಲಿ ಇರುತ್ತವೆ. ಎರಡು ಗ್ರಹಳ ನಡುವಿನ ಈ ಸ್ಥಾನವನ್ನು ಕೇಂದ್ರ ದೃಷ್ಟಿ ಅಂತ ಹೇಳೋದು. ಬುಧ ಮತ್ತು ಮಂಗಳನ ಈ ಸ್ಥಾನ ವೃತ್ತಿ, ವ್ಯವಹಾರ ಮತ್ತು ಹಣ ಮುಂತಾದ ವಿಚಾರದಲ್ಲಿ ಒಳ್ಳೆ ಅವಕಾಶ ಎದುರಾಗುವ ಸಾಧ್ಯತೆ ಇದೆ.

Kendra Drushti Yoga: ಕೇಂದ್ರ ದೃಷ್ಟಿ ಅಂದ್ರೆ ಏನು ?

ಎರಡು ಗ್ರಹಗಳು ಒಂದಕ್ಕೊಂದು 90 ಡಿಗ್ರಿ ಕೋನದಲ್ಲಿದ್ದು, ನಾಲ್ಕನೇ ಮತ್ತು ಹತ್ತನೇ ಮನೆಗಳನ್ನು ಸಂಪರ್ಕಿಸಿದಾಗ, ಅದನ್ನು ಕೇಂದ್ರ ದೃಷ್ಟಿ ಅಂತ ಹೇಳ್ತಾರೆ. ಇಲ್ಲಿ ಬುಧ ಬುದ್ಧಿವಂತಿಕೆ, ತರ್ಕ, ಮಾತು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಗ್ರಹ.ಅದೇ ಮಂಗಳ ಶಕ್ತಿ, ಧೈರ್ಯ, ಶೌರ್ಯ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಭಾವ ಬೀರುವಂತವನು.

ಬುಧನ ಬುದ್ಧಿವಂತಿಕೆ ಮಂಗಳನ ಶಕ್ತಿ ವ್ಯಕ್ತಿಯ ಕಷ್ಟದ ಸಂದರ್ಭದಲ್ಲಿ ಕೂಡಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕೊಡ್ತದೆ. ಈ ಸಂಯೋಜನೆ ಆರ್ಥಿಕ ಮತ್ತು ಕೆಲಸದ ವಿಷಯಗಳಲ್ಲಿ ತುಂಬಾ ವಿಶೇಷ ಎಂದು ಗಣನೆಗೆ ತೆಗೆದುಕೊಳ್ತಾರೆ.

Kendra Drushti Yoga: ಕೇಂದ್ರ ದೃಷ್ಟಿ ಯಾವಾಗ ರೂಪುಗೊಳ್ಳುತ್ತದೆ?

ಬುಧ ಮತ್ತು ಮಂಗಳ ನಡುವಿನ ಈ 90-ಡಿಗ್ರಿ ಕೋನ ಅಕ್ಟೋಬರ್ 2ರ ಮಧ್ಯಾಹ್ನ 2:41ಕ್ಕೆ ರೂಪುಗೊಳ್ತಾ ಇದೆ. ಈ ಸಮಯದಿಂದ ಕೇಂದ್ರ ದೃಷ್ಟಿ ಯೋಗ ಇರುವುದು. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆಯೂ ಒಂದೇ ಆಗಿರೋದಿಲ್ಲ. ಆದ್ರೆ, ಕೆಲವು ರಾಶಿಯವರಿಗೆ ಹೆಚ್ಚು ಮಹತ್ವದ್ದಾಗಿರಬಹುದು.

ಈ ರಾಶಿಯ ಅಧಿಪತಿಯೇ ಬುಧ. ಹಾಗಾಗಿ ಬುಧ ಮತ್ತು ಮಂಗಳನಿಂದ ಉಂಟಾಗುವ ಈ ಯೋಗ ನಿಮಗೆ ಹೆಚ್ಚು ಅನುಕೂಲಕರವಾಗಿರುವುದು. ವ್ಯಾಪಾರ, ಐಟಿ, ಮಾರ್ಕೆಟಿಂಗ್ ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಿರುವುದು. ಆದಾಯದಲ್ಲಿ ಹೆಚ್ಚಳವಾಗುವುದು. ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುವುದು. ಹಣದ ಸಮಸ್ಯೆಗೆ ಪರಿಹಾರ ಸಿಗುವುದು.

ಕನ್ಯಾ ರಾಶಿಯ ಅಧಿಪತಿ ಕೂಡಾ ಬುಧನೇ. ಉದ್ಯೋಗ ಮತ್ತು ವೃತ್ತಿಜೀವನದ ಮೇಲೆ ಹೆಚ್ಚು ಪ್ರಭಾವ ಇರುವುದು. ಸಮಯ ನಿಮ್ಮ ಪರವಾಗಿ ಇರುವುದು. ಕೆಲಸದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ ಸಿಗುವುದು. ನಿಮ್ಮ ಕೆಲಸಕ್ಕೆ ಮಾತಿಗೆ ಮನ್ನಣೆ ಸಿಗುವುದು. ಹೊಸ ಹೊಸ ಅವಕಾಶಗಳು ಒಲಿಯುವುದು. ಬಡ್ತಿಗೆ ಅವಕಾಶವಿದೆ. ರಿಯಲ್ ಎಸ್ಟೇಟ್ ಅಥವಾ ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭವಾಗುವುದು.

ವೃಶ್ಚಿಕ ರಾಶಿ (Scorpio)

ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹೊಸ ಕೆಲಸ ಶುರು ಮಾಡುವ ಧೈರ್ಯ ಮಾಡಬಹುದು. ಹೊಸ ಉದ್ಯಮ ಆರಂಭಿಸುವ ಯೋಚನೆಯಿದ್ದರೆ ಪ್ರಗತಿಗೆ ಅವಕಾಶವಿದೆ. ಹಳೆಯ ಹೂಡಿಕೆ, ಷೇರು ಮಾರುಕಟ್ಟೆಯಿಂದ ಲಾಭವಾಗುವುದು.
ಆತ್ಮವಿಶ್ವಾಸ ಹೆಚ್ಚುವುದು. ಎಂಥಾ ಕಷ್ಟದ ಕೆಲಸವಾದರೂ ಈ ಸಮಯದಲ್ಲಿ ಬಹಳ ಸಲೀಸಾಗಿ ಮಾಡಿ ಮುಗಿಸುವಿರಿ.

ಮಕರ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಆಸ್ತಿ, ಮನೆ ಮತ್ತು ಭೂಮಿ ಖರೀದಿಗೆ ಅವಕಾಶವಿದೆ. ಹಳೆಯ ಸಾಲ ತೀರುವುದು. ಕೆಲವು ಆರ್ಥಿಕ ಸಮಸ್ಯೆಗಳಿಂದ ಶಾಶ್ವತ ಪರಿಹಾರ ಸಿಗುವುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ