THE ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027: ಬೆಂಗಳೂರಿನ IISc ಭಾರತಕ್ಕೆ ಟಾಪ್

THE ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027: ಬೆಂಗಳೂರಿನ IISc ಭಾರತಕ್ಕೆ ಟಾಪ್

THE ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027: ಬೆಂಗಳೂರಿನ IISc ಭಾರತಕ್ಕೆ ಟಾಪ್

ನವದೆಹಲಿ: ಟೈಮ್ಸ್ ಹೈಯರ್ ಎಜುಕೇಶನ್ (THE) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕ್ 2027ನ್ನು ಬಿಡುಗಡೆ ಮಾಡಿದೆ. ಭಾರತೀಯ ವಿಜ್ಞಾನ ಸಂಸ್ಥೆ (IISc) ಅತ್ಯುನ್ನತ ರ‍್ಯಾಂಕ್ ಪಡೆದ ಭಾರತೀಯ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಇದು ಜಾಗತಿಕವಾಗಿ 254ನೇ ರ‍್ಯಾಂಕ್ ಪಡೆದಿದೆ.

ಭಾರತದ ಒಟ್ಟು 143 ವಿಶ್ವವಿದ್ಯಾಲಯಗಳು THE ವಿಶ್ವ ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ 15ರಷ್ಟು ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದೆ.

ಭಾರತೀಯ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾದರೂ ಯಾವುದೇ ಭಾರತೀಯ ಸಂಸ್ಥೆ ಜಾಗತಿಕ ಅಗ್ರ 250ರ ಒಳಗೆ ಸ್ಥಾನ ಪಡೆದಿಲ್ಲ. 2026ರ ಶ್ರೇಯಾಂಕದಲ್ಲಿ ಐಐಎಸ್ಸಿ 201–250 ರೊಳಗೆ ಸ್ಥಾನ ಪಡೆದಿತ್ತು. ಈ ಬಾರಿ ಅದು 254ನೇ ಸ್ಥಾನಕ್ಕೆ ಕುಸಿದಿದೆ.

2,297 ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ

THE 2027ರ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕವು 118 ದೇಶಗಳ 2,297 ವಿಶ್ವವಿದ್ಯಾಲಯಗಳನ್ನು ಒಳಗೊಂಡಿದೆ. ಇದು THE ಪ್ರಕಟಿಸಿರುವ ಅತಿದೊಡ್ಡ ಶ್ರೇಯಾಂಕದ ಆವೃತ್ತಿಯಾಗಿದೆ.

ಭಾರತದ ನಂತರ ಟರ್ಕಿ 124 ವಿಶ್ವವಿದ್ಯಾಲಯಗಳೊಂದಿಗೆ ಏಷ್ಯಾದಲ್ಲಿ ಅತೀ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಟರ್ಕಿಯ ರ‍್ಯಾಂಕಿಂಗ್ 15ರಷ್ಟು ಹೆಚ್ಚಾಗಿದೆ.

ಐಐಎಸ್ಸಿಯ ಸಾಧನೆ ಹೇಗಿದೆ?

2027ರ ಶ್ರೇಯಾಂಕದಲ್ಲಿ ಐಐಎಸ್ಸಿ ಒಟ್ಟಾರೆ 57 ಅಂಕಗಳನ್ನು ಗಳಿಸಿದೆ. ಸಂಸ್ಥೆಯ ಸಂಶೋಧನಾ ವಿಭಾಗದಲ್ಲಿ 98 ಅಂಕಗಳನ್ನು ಪಡೆದಿದೆ. ಇದು ಸಂಸ್ಥೆಯ ಅತ್ಯುತ್ತಮ ಸಾಧನೆಯ ವಿಭಾಗವಾಗಿದೆ.

ಬೋಧನೆಯಲ್ಲಿ 62.1 ಅಂಕ, ಸಂಶೋಧನಾ ಗುಣಮಟ್ಟದಲ್ಲಿ 58.6 ಅಂಕ ಗಳಿಸಿದೆ.

THE ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪ್ರಮುಖವಾಗಿ ಬೋಧನೆ, ಸಂಶೋಧನಾ ಪರಿಸರ, ಸಂಶೋಧನಾ ಗುಣಮಟ್ಟ, ಅಂತರರಾಷ್ಟ್ರೀಯ ದೃಷ್ಟಿಕೋನ ಮತ್ತು ಉದ್ಯಮ ಒಳಗೊಂಡಂತೆ ಪ್ರಮುಖ ಐದು ಕ್ಷೇತ್ರಗಳ ಮೌಲ್ಯಮಾಪನ ಮಾಡುತ್ತದೆ.

ಏಷ್ಯಾದ ವಿಶ್ವವಿದ್ಯಾಲಯಗಳ ಪ್ರಾತಿನಿಧ್ಯ ಹೆಚ್ಚಳ

2027ರ ಶ್ರೇಯಾಂಕದಲ್ಲಿ ಏಷ್ಯಾದ ವಿಶ್ವವಿದ್ಯಾಲಯಗಳ ಪ್ರಾತಿನಿಧ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಬಾರಿ 1,003 ಏಷ್ಯಾದ ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷ ಈ ಸಂಖ್ಯೆ 929 ಇತ್ತು. ಅದೇ ರೀತಿ, ಏಷ್ಯಾದ 40 ವಿಶ್ವವಿದ್ಯಾಲಯಗಳು ಜಾಗತಿಕ ಅಗ್ರ 200ರೊಳಗೆ ಸ್ಥಾನ ಪಡೆದಿವೆ. ಕಳೆದ ವರ್ಷ ಈ ಸಂಖ್ಯೆ 35 ಇತ್ತು.

ಆಕ್ಸ್‌ಫರ್ಡ್‌ ಮತ್ತೆ ನಂ.1

ಜಾಗತಿಕ ಮಟ್ಟದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸತತ 11ನೇ ವರ್ಷವೂ ಮೊದಲ ಸ್ಥಾನ ಉಳಿಸಿಕೊಂಡಿದೆ. ಅಮೆರಿಕದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಎರಡನೇ ಸ್ಥಾನದಲ್ಲಿದೆ.

ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಮೂರನೇ ಸ್ಥಾನ ಪಡೆದರೆ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಐದನೇ ಸ್ಥಾನದಲ್ಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ