KBC-18: ಚಿತ್ರೀಕರಣದ ವೇಳೆ ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡ ನಟ ಅಮಿತಾಭ್

KBC-18: ಚಿತ್ರೀಕರಣದ ವೇಳೆ ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡ ನಟ ಅಮಿತಾಭ್

KBC-18: ಚಿತ್ರೀಕರಣದ ವೇಳೆ ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡ ನಟ ಅಮಿತಾಭ್

ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್‌ಪತಿ–18’ರ ಇತ್ತೀಚಿನ ಸಂಚಿಕೆಯ ಚಿತ್ರೀಕರಣದ ವೇಳೆ ಜಾರಿ ಬಿದ್ದು ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಪ್ರತಿ ಸಂಚಿಕೆಯನ್ನೂ ವೇದಿಕೆಯ ಮಧ್ಯಭಾಗದಲ್ಲಿ ನಿಂತುಕೊಂಡೇ ಆರಂಭಿಸುತ್ತಿದ್ದ ಅವರು, ಈ ಸಂಚಿಕೆಯನ್ನು ಆಸನದ ಮೇಲೆ ಕುಳಿತು ಆರಂಭಿಸಿದ್ದು ಅಭಿಮಾನಿಗಳು ಹಾಗೂ ಪ್ರೇಕ್ಷಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಅದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಅಮಿತಾಭ್ ಅವರೇ ಬಹಿರಂಗಪಡಿಸಿದ್ದಾರೆ. 

ಮೊಣಕಾಲಿನ ಗಾಯದ ಕುರಿತು ಮಾತನಾಡಿದ ಅವರು, ‘ಸಾಮಾನ್ಯವಾಗಿ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ವೇದಿಕೆಯ ಮಧ್ಯಭಾಗದಲ್ಲಿ ನಿಂತು ಆರಂಭಿಸುತ್ತೇನೆ. ಆದರೆ ನಿನ್ನೆ ಚಿತ್ರೀಕರಣದ ಸಮಯದಲ್ಲಿ ಜಾರಿ ಬಿದ್ದು ಮೊಣಕಾಲಿಗೆ ಗಾಯವಾಗಿದೆ. ಈ ಕಾರಣದಿಂದಾಗಿ ನಿಂತು ಸ್ವಾಗತಿಸುವುದು ಸ್ವಲ್ಪ ಕಷ್ಟವಾಗಿದೆ. ನಾನು ಆರಾಮವಾಗಿದ್ದೇನೆ, ಗಂಭೀರವಾದ ಗಾಯವೇನೂ ಆಗಿಲ್ಲ‘ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಅಮಿತಾಭ್ ಅವರು ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಮಗ ಅಭಿಷೇಕ್ ಬಚ್ಚನ್ ಅವರೊಂದಿಗಿನ ಸಂಬಂಧದ ಕುರಿತು ಬರೆಯುತ್ತಾ, ‘ತಂದೆ ಮತ್ತು ಮಗ ಇಬ್ಬರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಅವರ ಅಭಿಪ್ರಾಯಗಳು ಭಿನ್ನವಾಗಿರಬಹುದು, ಆದರೆ ಗುರಿ ಒಂದೇ ಆಗಿರುತ್ತದೆ’ ಎಂದು ಬರೆದುಕೊಂಡಿದ್ದರು.

ಅಮಿತಾಭ್ ಬಚ್ಚನ್ ಅವರು ರಿಭು ದಾಸ್‌ಗುಪ್ತಾ ನಿರ್ದೇಶನದ ಮುಂಬರುವ ‘ಸೆಕ್ಷನ್ 84’ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗೆಯೇ ನಾಗ್‌ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಭಾಗ 2 ಸಿನಿಮಾದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ