ನಿರ್ವಹಣೆ ಕೊರತೆಯಿಂದ ಹಾಳಾದ ಲಿಂಗಸುಗೂರು ತೋಟಗಾರಿಕೆ ಫಾರ್ಮ್

ನಿರ್ವಹಣೆ ಕೊರತೆಯಿಂದ ಹಾಳಾದ ಲಿಂಗಸುಗೂರು ತೋಟಗಾರಿಕೆ ಫಾರ್ಮ್

ನಿರ್ವಹಣೆ ಕೊರತೆಯಿಂದ ಹಾಳಾದ ಲಿಂಗಸುಗೂರು ತೋಟಗಾರಿಕೆ ಫಾರ್ಮ್

ಲಿಂಗಸುಗೂರು: ರೈತರಿಗೆ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ, ಸಸಿಗಳ ನೀಡಬೇಕಾದ ತಾಲ್ಲೂಕಿನ ಅಮರೇಶ್ವರ ಸುಕ್ಷೇತ್ರದಲ್ಲಿರುವ ಸರ್ಕಾರಿ ತೋಟಗಾರಿಕೆ ಫಾರ್ಮ್ ನಿರ್ವಹಣೆ ಕೊರತೆಯಿಂದಾಗಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ.

ದೇವರಭೂಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರೇಶ್ವರ ದೇವಸ್ಥಾನದ ಸನಿಹದಲ್ಲಿರುವ ತೋಟಗಾರಿಕೆ ಇಲಾಖೆಯ ಅಧೀನದ ತೋಟಗಾರಿಕೆ ಫಾರ್ಮ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿ ದುಸ್ಥಿತಿಗೆ ತಲುಪಿದೆ. 13 ಎಕರೆ ಇರುವ ತೋಟಗಾರಿಕೆ ಫಾರ್ಮ್‌ನಲ್ಲಿ 60 ಮಾವಿನ ಹಣ್ಣಿನ ಗಿಡಗಳು ಹಾಗೂ ಸಪೋಟಾ, ಸೀತಾಫಲ ಹಣ್ಣಿನ ಗಿಡಗಳಿವೆ. ಪ್ರತಿ ವರ್ಷದ ಅವುಗಳ ಋತುವಿನಲ್ಲಿ ಹಣ್ಣುಗಳ ಖರೀದಿಗಾಗಿ ಟೆಂಡರ್ ಕರೆಯಲಾಗುತ್ತಿದೆ.

ತೋಟಗಾರಿಕೆ ಫಾರ್ಮ್‌ನಲ್ಲಿ ಈ ಹಿಂದೆ ತೆಂಗು, ಮಾವು, ಸಪೋಟಾ, ಸೀತಾಫಲ,ಲಿಂಬೆ, ಕರಿಬೇವು, ನುಗ್ಗೆ ಸೇರಿದಂತೆ ವಿವಿಧ ಹೂವಿನ, ಅಲಂಕಾರಿಕೆ ಸಸಿಗಳನ್ನು ಬೆಳಸಿ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಯಾವುದೇ ಸಸಿಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಕಳೆದೆರಡು ವರ್ಷಗಳಿಂದ ಬೆಳೆಸಿದ್ದ ಸಸಿಗಳೇ ಪೋಷಣೆಯಿಲ್ಲದೆ ಇರುವುದರಿಂದ ಕೆಲವು ಒಣಗಿವೆ. ಇನ್ನೂ ಕೆಲವು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಹವಾಮಾನ ಪರಿಸ್ಥಿತಿಗಳು ಮತ್ತು ನೈಸರ್ಗಿಕ ಕೀಟಗಳು, ರೋಗಗಳಿಂದ ಬೆಳೆಗಳನ್ನು ಉಳಿಸಲು ನಿರ್ಮಾಣ ಮಾಡಿದ ಪಾಲಿಹೌಸ್ ಸಂಪೂರ್ಣವಾಗಿ ಕಿತ್ತುಹೋಗಿದೆ. ಫಾರ್ಮ್‌ನಲ್ಲಿರುವ ಗಿಡ-ಮರಗಳಿಗೆ ಸಮರ್ಪಕ ನೀರು, ಗೊಬ್ಬರ ಹಾಗೂ ಅಗತ್ಯ ಪೋಷಣೆ ದೊರೆಯದ ಪರಿಣಾಮ ಹಲವು ಗಿಡಗಳು ಒಣಗಿವೆ. ಕಳೆ, ಮುಳ್ಳು ಗಿಡಗಳು ಬೆಳೆದು ಜಾಗವನ್ನು ಆವರಿಸಿಕೊಂಡಿದ್ದು, ಸ್ವಚ್ಛತೆ ಹಾಗೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ರೈತರಿಗೆ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡುವ ನೀಡುವ ಪ್ರಮುಖ ಕೇಂದ್ರವಾಗಬೇಕಾಗಿತ್ತು. ಆದರೆ ಇಂದು ಅಭಿವೃದ್ಧಿ ಬದಲು ಅವ್ಯವಸ್ಥೆಯ ಚಿತ್ರಣ ಕಂಡುಬರುತ್ತಿದೆ ಎಂದು ರೈತರು ಹೇಳುತ್ತಾರೆ.

ತೋಟಗಾರಿಕೆ ಫಾರ್ಮ್ ಅವನತಿಗೆ ತೋಟಗಾರರು ಹಾಗೂ ಕಾವಲುಗಾರರು ಸೇರಿದಂತೆ ಇತರೆ ಸಿಬ್ಬಂದಿ ಕೊರತೆ ಜೊತೆ ಅನುದಾನದ ಕೊರತೆಯೂ ಕಾರಣವಾಗಿದೆ ಎನ್ನಲಾಗಿದೆ.

ತೋಟಗಾರಿಕೆ ಫಾರ್ಮ್ ಬೆಳೆಸುವುದು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತೋಟಗಾರಿಕೆ ಇಲಾಖೆಯ ಜವಾಬ್ದಾರಿಯಾಗಿದೆ.ಹೀಗಾಗಿ ಫಾರ್ಮ್‌ನ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಸಸಿಗಳ ಬೆಳೆಸಲು, ನೀರಿನ ಸಮರ್ಪಕ ವ್ಯವಸ್ಥೆ, ಸ್ವಚ್ಛತೆ, ಸಸಿ ಸಂರಕ್ಷಣೆಗೆ ಫಾರ್ಮ್ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ