ಕೋಟಿ ಕೋಟಿ ಲಂಚ ಪಡೆದ ಆರೋಪ: ಮಾಜಿ ಸಿಎಂ ಪಿಣರಾಯಿ ವಿರುದ್ಧ FIRಗೆ ಕೋರ್ಟ್‌ ಆದೇಶ

ಕೋಟಿ ಕೋಟಿ ಲಂಚ ಪಡೆದ ಆರೋಪ: ಮಾಜಿ ಸಿಎಂ ಪಿಣರಾಯಿ ವಿರುದ್ಧ FIRಗೆ ಕೋರ್ಟ್‌ ಆದೇಶ

ಕೋಟಿ ಕೋಟಿ ಲಂಚ ಪಡೆದ ಆರೋಪ: ಮಾಜಿ ಸಿಎಂ ಪಿಣರಾಯಿ ವಿರುದ್ಧ FIRಗೆ ಕೋರ್ಟ್‌ ಆದೇಶ

ತಿರುವನಂತಪುರ: ಕೊಚ್ಚಿ ಮಿನರಲ್ಸ್ ಆ್ಯಂಡ್‌ ರೂಟೈಲ್‌ ಲಿಮಿಟೆಡ್‌ (ಸಿಎಂಆರ್‌ಎಲ್‌) ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ವರದಿಯ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಇ.ಡಿ ವರದಿಯಲ್ಲಿರುವ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸುವ ಬದಲು ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ವಕೀಲ ಕೆ. ಎಂ. ಶಾಜಹಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ. ಬದರುದ್ದೀನ್ ವಿಚಾರಣೆ ನಡೆಸಿದ್ದಾರೆ.

ಸಿಎಂಆರ್‌ಎಲ್‌ ಪ್ರಕರಣಕ್ಕೆ ಸಂಬಂಧಿಸಿ ಪಿಣರಾಯಿ ವಿಜಯನ್, ಅವರ ಪುತ್ರಿ ಟಿ.ವೀಣಾ, ಅಳಿಯ ಪಿ.ಎ ಮೊಹಮ್ಮದ್ ರಿಯಾಜ್‌ ಮತ್ತು ಇತರರ ವಿರುದ್ದ ಎಫ್‌ಐಆರ್‌ ದಾಖಲಿಸುವಂತೆ ಜಾರಿ ನಿರ್ದೇಶನಾಲಯವು ಕೇರಳಂ ಪೊಲೀಸ್‌ ಇಲಾಖೆಯ ಮುಖ್ಯಸ್ಥರಿಗೆ ಈಚೆಗೆ ಪತ್ರ ಬರೆದಿತ್ತು.

ತನ್ನ ವರದಿಯನ್ನು ಪ್ರಾಥಮಿಕ ತನಿಖಾ ವರದಿ ಎಂದು ಪರಿಗಣಿಸಬಹುದು ಮತ್ತು ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಬಹುದು ಎಂದೂ ಇ.ಡಿ ಹೇಳಿತ್ತು. ಆದರೆ, ಈ ಇದಕ್ಕೆ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ, ತನಿಖಾ ಸಂಸ್ಥೆ ಸಲ್ಲಿಸಿದ ವರದಿ ಆಧರಿಸಿ ಎಫ್‌ಐಆರ್ ದಾಖಲಿಸಲು ಸಾಕಾಗುವುದಿಲ್ಲ ಮತ್ತು ಪ್ರಾಥಮಿಕ ತನಿಖೆಯ ಅಗತ್ಯವಿದೆ ಎಂದು ವಾದಿಸಿತ್ತು.

ವಿಜಯನ್, ವೀಣಾ ಮತ್ತು ರಿಯಾಜ್‌ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಇ.ಡಿ ಬರೆದಿದ್ದ ಪತ್ರದ ಆಧಾರದ ಮೇಲೆ ಕೇರಳಂನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಇತ್ತೀಚೆಗೆ ಪೊಲೀಸ್ ತನಿಖೆಗೆ ಆದೇಶಿಸಿತ್ತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ನಡೆಸಿದ ತನಿಖೆ ಹಾಗೂ ಶೋಧದ ವೇಳೆ ವಶಪಡಿಸಿಕೊಂಡ ಸಾಕ್ಷ್ಯಗಳ ಆಧಾರದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಇತರ ಕಾನೂನುಗಳ ನಿಬಂಧನೆಗಳಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಇ.ಡಿ. ಕೋರಿತ್ತು.

‘ಸಿಎಂಆರ್‌ಎಲ್‌ ಕಂಪನಿಯು ವೀಣಾ ಅವರ ಒಡೆತನದ ‘ಎಕ್ಸಾಲಾಜಿಕ್ ಸಲ್ಯೂಷನ್ಸ್‌’ಗೆ (ಈಗ ನಿಷ್ಕ್ರಿಯ) ಮಾಹಿತಿ ತಂತ್ರಜ್ಞಾನ ಸಲಹಾ ಸೇವೆಗಳ ಹೆಸರಿನಲ್ಲಿ ₹2.78 ಕೋಟಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿದೆ’ ಎಂದು ಇ.ಡಿ ಆರೋಪಿಸಿದೆ. ತಿರುವನಂತಪುರದಲ್ಲಿ ತಂದೆಯೊಂದಿಗೆ ವಾಸವಿದ್ದ ವೀಣಾ ಅವರ ಮನೆ ಮೇಲೆ ಇ.ಡಿ ಜೂನ್‌ನಲ್ಲಿ ದಾಳಿ ನಡೆಸಿತ್ತು.

‘ಆಗಸ್ಟ್‌ನಲ್ಲಿ, ವೀಣಾ ಟಿ. ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದ ವೇಳೆ ಅವರ ‘ಕೈಬರಹ’ದ ಕೆಲ ಟಿಪ್ಪಣಿಗಳು ಸಿಕ್ಕಿವೆ. ದುಬೈಗೆ ನಿರ್ದಿಷ್ಟ ಹಣ ವರ್ಗಾವಣೆಯಾಗಿರುವ ಕುರಿತ ವಿವರಗಳು ಈ ಟಿಪ್ಪಣಿಯಲ್ಲಿವೆ’ ಎಂದು ಇ.ಡಿ ತಿಳಿಸಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ