ಅಳವಂಡಿ| ರೈತರಿಗೆ ಕೈಕೊಟ್ಟ ‘ಯಂತ್ರಧಾರೆ’: ಬಳಕೆಗೆ ಬಾರದ ವಾಹನ, ಯಂತ್ರೋಪಕರಣಗಳು

ಅಳವಂಡಿ| ರೈತರಿಗೆ ಕೈಕೊಟ್ಟ ‘ಯಂತ್ರಧಾರೆ’:  ಬಳಕೆಗೆ ಬಾರದ ವಾಹನ, ಯಂತ್ರೋಪಕರಣಗಳು

ಅಳವಂಡಿ| ರೈತರಿಗೆ ಕೈಕೊಟ್ಟ ‘ಯಂತ್ರಧಾರೆ’: ಬಳಕೆಗೆ ಬಾರದ ವಾಹನ, ಯಂತ್ರೋಪಕರಣಗಳು

ಅಳವಂಡಿ: ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಿ, ಕೃಷಿ ಚಟುವಟಿಕೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಕೃಷಿ ಯಂತ್ರಾಧಾರೆ’ ಯೋಜನೆಯ ಯಂತ್ರೋಪಕರಣಗಳೇ ಇದೀಗ ಬಳಕೆಗೆ ಬಾರದೆ ತುಕ್ಕು ಹಿಡಿಯುತ್ತಿರುವುದು ರೈತರಲ್ಲಿ ಅಸಮಾಧಾನಕ್ಕೆಮೂಡಿಸಿದೆ.

ಸಣ್ಣ ಮತ್ತು ಅತಿಸಣ್ಣ ರೈತರು ದುಬಾರಿ ಕೃಷಿ ಯಂತ್ರೋಪಕರಣಗಳು ಖರೀದಿಸುವುದು ಕಷ್ಟಕರ. ಹಾಗಾಗಿ ಸರ್ಕಾರ ರೈತರಿಗೆ ನೆರವಾಗುವ ದೃಷ್ಟಿಯಿಂದ 2018-19ನೇ ಸಾಲಿನಲ್ಲಿ ಕೃಷಿ ಯೋಜನೆಯ ಜಾರಿಗೊಳಿಸಿ, ಅಳವಂಡಿ ಗ್ರಾಮದಲ್ಲಿ ಕೃಷಿ ಯಂತ್ರಾಧಾರೆ ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ಯಂತ್ರೋಪಕರಣ ಕೃಷಿ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ಅವರು ನಿರ್ವಹಣೆ ಮಾಡುತ್ತಿದ್ದರು. ಖಾಸಗಿಯವರು ನಿಗದಿಪಡಿಸಿದ ಬಾಡಿಗೆಗಿಂತ ಕಡಿಮೆ ಹಣ ನೀಡಿ ರೈತರು ಪ್ರಯೋಜನ ಪಡೆದುಕೊಳ್ಳುತ್ತಿದ್ದರು.

ಆದರೆ ಯಂತ್ರೋಪಕರಣ ಸೇವಾ ಕೇಂದ್ರದ ಸೇವೆಗಳು ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಕೃಷಿ ಯಂತ್ರಾಧಾರೆ ಆವರಣದಲ್ಲಿ ಯೋಜನೆಯಡಿ ಮಂಜೂರಾಗಿರುವ ವಾಹನ ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳು ಹಲವು ದಿನಗಳಿಂದ ಸಮರ್ಪಕವಾಗಿ ಬಳಕೆಯಾಗದೆ ನಿಂತಿವೆ. ಬಿಸಿಲು, ಮಳೆ ಸೇರಿದಂತೆ ಹವಾಮಾನದ ಪರಿಣಾಮದಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಯಂತ್ರೋಪಕರಣಗಳು ದೂಳು ಹಿಡಿದು, ತುಕ್ಕು ಹಿಡಿದಿವೆ.

ಕೃಷಿ ಕೂಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ದರ ಹಾಗೂ ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿಂದ ರೈತರು ಯಂತ್ರೋಪಕರಣಗಳ ಮೇಲೆಯೇ ಹೆಚ್ಚಿನ ಅವಲಂಬಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಯಡಿ ರೈತರ ಅನುಕೂಲಕ್ಕಾಗಿ ಒದಗಿಸಿರುವ ಯಂತ್ರಗಳು ಬಳಕೆಗೆ ಸಿಗದಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.

ಸರ್ಕಾರದ ಕೃಷಿ ಯಂತ್ರಾಧಾರೆ ಕೇಂದ್ರದಲ್ಲಿ ಯಂತ್ರಗಳು ಲಭ್ಯವಿದ್ದರೆ ಕಡಿಮೆ ವೆಚ್ಚದಲ್ಲಿ ಕೃಷಿ ಕಾರ್ಯಗಳನ್ನು ಕೈಗೊಳ್ಳಬಹುದು. ಆದರೆ ಕೇಂದ್ರದಲ್ಲಿರುವ ಯಂತ್ರೋಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಅಥವಾ ಬಳಕೆಗೆ ಲಭ್ಯವಾಗದೆ ಇರುವುದರಿಂದ ರೈತರು ಅನಿವಾರ್ಯವಾಗಿ ಖಾಸಗಿ ಯಂತ್ರಗಳ ಮೊರೆ ಹೋಗುವಂತಾಗಿದೆ. ಯೋಜನೆಯಡಿ ಮಂಜೂರಾಗಿರುವ ಯಂತ್ರೋಪಕರಣಗಳ ನಿರ್ವಹಣೆ, ದುರಸ್ತಿ ಹಾಗೂ ನಿಯಮಿತ ಬಳಕೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ. ದೀರ್ಘಕಾಲ ಯಂತ್ರಗಳನ್ನು ಬಳಕೆ ಮಾಡದೆ ನಿಲ್ಲಿಸುವುದರಿಂದ ಅವುಗಳ ಮೌಲ್ಯ ಕುಸಿಯುವುದರ ಜೊತೆಗೆ ದುರಸ್ತಿ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ.

ಯೋಜನೆಯ ಉದ್ದೇಶ ಈಡೇರಲಿ: ರೈತರಿಗೆ ಸಮಯಕ್ಕೆ ಸರಿಯಾಗಿ ಹಾಗೂ ಕೈಗೆಟಕುವ ದರದಲ್ಲಿ ಯಂತ್ರೋಪಕರಣಗಳ ಸೇವೆ ದೊರೆಯುವಂತೆ ಕೇಂದ್ರವನ್ನು ಪ್ರಾರಂಭಿಸಿ, ಸಮರ್ಪಕವಾಗಿ ನಿರ್ವಹಿಸಬೇಕು. ಕೆಟ್ಟು ನಿಂತಿರುವ ಯಂತ್ರಗಳನ್ನು ತಕ್ಷಣ ದುರಸ್ತಿ ಮಾಡಿಸಿ ಬಳಕೆಗೆ ತರಬೇಕು. ಅಗತ್ಯವಿರುವ ಯಂತ್ರೋಪಕರಣಗಳನ್ನು ಹೆಚ್ಚುವರಿಯಾಗಿ ಒದಗಿಸುವ ಜೊತೆಗೆ ಬಾಡಿಗೆ ದರ, ಬುಕ್ಕಿಂಗ್ ವ್ಯವಸ್ಥೆ ಹಾಗೂ ಸೇವೆಯ ಲಭ್ಯತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ರೈತರಿಗೆ ಹೊರೆಯಾದ ಯಂತ್ರ ಬಾಡಿಗೆ

ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಬಿತ್ತನೆ, ಕೊಯ್ಲು, ರಸಗೊಬ್ಬರ ಸಿಂಪಡಣೆ, ನೇಗಿಲು ಒಡೆಯುವುದು ಸೇರಿದಂತೆ ವಿವಿಧ ಹಂತಗಳಲ್ಲಿ ಯಂತ್ರೋಪಕರಣಗಳ ಅಗತ್ಯವಿದೆ. ಖಾಸಗಿ ವ್ಯಕ್ತಿಗಳಿಂದ ಯಂತ್ರಗಳನ್ನು ಬಾಡಿಗೆಗೆ ಪಡೆಯಬೇಕಾದರೆ ರೈತರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ