ಕಾಶಿಯಲ್ಲೇ ಯಾಕೆ ಜನ ಸಾಯಲು ಬಯಸ್ತಾರೆ? ಇಲ್ಲಿಯ ವೈಬ್ ಒಮ್ಮೆ ನೋಡಿ ಅಂತಿದ್ದಾರೆ ಅಮೆರಿಕನ್ ನಾರಿ

ಕಾಶಿಯಲ್ಲೇ ಯಾಕೆ ಜನ ಸಾಯಲು ಬಯಸ್ತಾರೆ? ಇಲ್ಲಿಯ ವೈಬ್ ಒಮ್ಮೆ ನೋಡಿ ಅಂತಿದ್ದಾರೆ ಅಮೆರಿಕನ್ ನಾರಿ

ಕಾಶಿಯಲ್ಲೇ ಯಾಕೆ ಜನ ಸಾಯಲು ಬಯಸ್ತಾರೆ? ಇಲ್ಲಿಯ ವೈಬ್ ಒಮ್ಮೆ ನೋಡಿ ಅಂತಿದ್ದಾರೆ ಅಮೆರಿಕನ್ ನಾರಿ

ವಾರಣಾಸಿ (Varanasi) ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರ. ಭಾರತೀಯರು ಇಲ್ಲಿಗೆ ಹೋಗಿ ಪುನೀತರಾದೆವು ಎಂದು ಭಾವಿಸೋದು ಸಹಜ. ಆದರೆ, ಅಮೆರಿಕದ ಕಂಟೆಂಟ್ ಕ್ರಿಯೇಟರ್ ಒಬ್ಬರು ಇಲ್ಲಿಗೆ ಬಂದು, ವೀಡಿಯೋ ಮಾಡಿ ಕಾಶಿ ಎಂಬ ಪರಮ ಪವಿತ್ರ ದೇವಸ್ಥಾನಗಳ ಊರಿನ ಬಗ್ಗೆ ಹೇಳೋದನ್ನು ಒಮ್ಮೆ ಕೇಳಿ. ಏಳು ವರ್ಷಗಳ ನಂತರ ಮತ್ತೆ ಈ ನಾಡಿಗೆ ಮರಳಿದ ಈ ಮಹಿಲೆ ಕಾಶಿಯ ವೈಭವ, ಜನರ ಭಕ್ತಿ ಹಾಗೂ ಮುಕ್ತಿ ಬಗ್ಗೆ ಮಾತನಾಡಿದ್ದಾರೆ. ಒಮ್ಮೆಯಾದ್ರೂ ಜೀವನದಲ್ಲಿ ಇಲ್ಲಿಕೆ ಯಾಕೆ ವಿಸಿಟ್ ಮಾಡಬೇಕೆಂಬುದನ್ನು ವಿವರಿಸಿದ್ದು, ವೀಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಭಾರತೀಯ ಪುಣ್ಯ ಕ್ಷೇತ್ರದ ಬಗ್ಗೆ ಅಮೆರಿಕದ ಮಹಿಳೆಯೊಬ್ಬಳು ಹೇಳಿದ್ದೇನು? ಅವರಿಗ್ಯಾಕೆ ಈ ಪುಣ್ಯ ಭೂಮಿಗೆ ಮತ್ತೆ ಮತ್ತೆ ಬರಬೇಕೆಂಬ ಸೆಳೆತವಿದೆ

ಟ್ರಾವೆಲ್ ಕ್ರಿಯೇಟರ್ ಜೆಸ್ಸಿಕಾ ಸವಾನೊ ಇಲ್ಲಿಗೆ ಸುಮಾರು ಏಳು ವರ್ಷಗಳ ಹಿಂದೆ ಬಂದಿದ್ದರು. ಇದೀಗ ಮತ್ತೆ ಅವರು ವಾರಣಾಸಿಗೆ ಬಂದಿದ್ದಾರೆ. ತಮ್ಮ ಎರಡನೇ ಭೇಟಿಯ ಅನುಭವವನ್ನು ಶೇರ್ ಮಾಡಿದ್ದಾರೆ.

ಕಾಶಿ (kashi) ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಪವಿತ್ರ ಸ್ಥಳ. ಆಧ್ಯಾತ್ಮಿಕವಾಗಿ ಜನರೊಂದಿಗೆ ಬಹಳ ಬೇಗ ಕನೆಕ್ಟ್ ಆಗುತ್ತದೆ. ಇಲ್ಲಿ ಸಾವನ್ನಪ್ಪಿದರೆ ಸ್ವರ್ಗ ಪ್ರಾಪ್ತಿ ಎನ್ನುವ ನಂಬಿಕೆ ನಮ್ಮಲ್ಲಿ ಈಗಲೂ ಇದೆ. ಇದೇ ಕಾರಣದಿಂದ ಸಾಧು, ಸಂತರು, ಗುರುಗಳು ತಮ್ಮ ವೃದ್ದಾಪ್ಯದಲ್ಲಿಇಲ್ಲಿಗೆ ಬರುತ್ತಾರೆ. ಇಲ್ಲಿ ಸಾವನ್ನಪ್ಪಿದರೆ ಮುಕ್ತಿ ಸಿಗುವುದರಿಂದ ಮತ್ತೆ ಪುನರ್ಜನ್ಮ ಇರುವುದಿಲ್ಲ ಎನ್ನುವುದು ನಂಬಿಕೆ. ಇಲ್ಲಿ ಗಂಗೆಯ ತೀರದಲ್ಲಿ ಹಗಲೂ ರಾತ್ರಿಯೆನ್ನದೆ ಶವ ಸಂಸ್ಕಾರ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಈ ನಗರವನ್ನು ನೋಡಿದರೆ ಬೇರೆಯೇ ಗ್ರಹವೇನೋ ಅನ್ನಿಸುತ್ತದೆ. ಈ ಪ್ರದೇಶ ಆಧ್ಯಾತ್ಮಿಕವಾಗಿ ಎಷ್ಟು ಕನೆಕ್ಟ್ ಆಗುತ್ತದೆಯೆಂದರೆ ಅದನ್ನು ಪದಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ಜೆಸ್ಸಿಕಾ ಸವಾನೊ.

Varanasi ಗಂಗಾರತಿ ನೀಡುತ್ತದೆ ವಿಶೇಷ ಅನುಭವ :

ಇಲ್ಲಿ ಗಂಗಾರತಿ (ganga river) ನೋಡುವುದೇ ಒಂದು ಅದ್ಬುತ. ಜೆಸ್ಸಿಕಾ ಕೂಡಾ ಗಂಗಾ ಆರತಿ ನೋಡುವುದಕ್ಕಾಗಿ 15 ನಿಮಿಷ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ. ವಾರಣಾಸಿಯ ಕಿರಿದಾದ ಬೀದಿಗಳಲ್ಲಿ ಸಾಗಿ ಇಲ್ಲಿನ ಜನರ ನಿತ್ಯದ ಬದುಕು ಹೇಗಿದೆ ಎನ್ನುವುದನ್ನು ಬಹಳ ಹತ್ತಿರದಿಂದ ತಿಳಿಯಲು ಯತ್ನಿಸಿದ್ದಾರೆ. ಹೀಗೆ ನಡೆದುಕೊಂಡು ಹೋಗುವಾಗ ಒಂದು ಹಂತದಲ್ಲಿ ಅವರು ದಾರಿ ತಪ್ಪಿದರೇನೋ ಅನ್ನಿಸುತ್ತದೆ. ಅದರೂ ಮತ್ತೆ ಮುಂದೆ ಹೋಗಿ, ಗಂಗಾ ಘಾಟ್ ತಲುಪುತ್ತಾರೆ. ಈ ವೇಳೆ ಅವರು ವರ್ಷಗಳ ಹಿಂದೆ ಮೊದಲ ಬಾರಿಗೆ ಬಂದಾಗ ಪರಿಚಯವಾಗಿದ್ದ ಸ್ನೇಹಿತನನ್ನು ಮತ್ತೆ ಭೇಟಿಯಾಗುತ್ತಾರೆ.

ದಿನಕ್ಕೆ ಎರಡು ಬಾರಿ ಗಂಗೆಗೆ ಆರತಿ :

ಗಂಗಾರತಿಯದ್ದು ಅದ್ಬುತ ನೋಟ. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ದೃಶ್ಯ. ಗಂಗೆ ನಮ್ಮೆಲ್ಲರಿಗೂ ಪವಿತ್ರ. ಈ ಪವಿತ್ರ ನದಿಗಾಗಿ ನಡೆಯುವ ನಿತ್ಯದ ಪೂಜೆಯೇ ಗಂಗಾರತಿ. ಇಲ್ಲಿ ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಗಂಗೆಗೆ ಆರತಿ ಮಾಡಲಾಗುತ್ತದೆ. ಧೂಪದ ವಾಸನೆ, ಗಾಳಿಯಲ್ಲಿ ಸೇರಿಕೊಂಡಿರುವ ಹೊಗೆ, ನದಿಯ ಸುತ್ತಲಿನ ಶಾಂತಿಯುತ ವಾತಾವರಣ ಅನುಭವವನ್ನು ಮತ್ತಷ್ಟು ಸ್ಪೆಷಲ್ ಆಗಿಸುವುದಂತೂ ಸುಳ್ಳಲ್ಲ.

ಶವ ಸಂಸ್ಕಾರವಾಗುವ ಮಣಿಕರ್ಣಿಕಾ ಘಾಟ್ :

ಇಲ್ಲಿನ ಮಣಿಕರ್ಣಿಕಾ ಘಾಟ್ ಇನ್ನೂ ವಿಶೇಷವಾಗಿರುವಂಥದ್ದು. ಸುಮಾರು 2000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇಲ್ಲಿ ಶವ ಸಂಸ್ಕಾರ ನಡೆಯುತ್ತಿದೆ. ಜೆಸಿಕಾ ಇಲ್ಲಿಗೆ ಬಂದಾಗ ಮನಸ್ಸಿನಲ್ಲಿ ಅದೇನೋ ಒಂದು ರೀತಿಯ ತಳಮಳ ಅನ್ನಿಸಿತ್ತಂತೆ. ಶವಸಂಸ್ಕಾರದ ಆಚರಣೆಗಳನ್ನು ನೋಡುವಾಗ ಅವರು ಇಮೋಷನಲ್ ಆಗುತ್ತಾರೆ. ಜೀವನ, ಸಾವು ಮತ್ತು ಸಾವಿನ ಬಳಿಕ ಏನಾಗುತ್ತದೆ ಹೀಗೆ ಹತ್ತು ಹಲವು ಯೋಚನೆ ಜೆಸ್ಸಿಕಾ ಮನಸ್ಸಿನಲ್ಲಿ ಹರಿದಾಡುತ್ತದೆ.ಅವರ ಪ್ರಕಾರ, ದಿನಾ ಇಲ್ಲಿ ಸುಮಾರು 150 ರಿಂದ 200 ಕ್ಕೂ ಹೆಚ್ಚು ಶವಗಳನ್ನು ಸುಡಲಾಗುತ್ತದೆ. ಸಾವಿರಾರು ವರ್ಷಗಳಿಂದ ಇಲ್ಲಿ ಬೆಂಕಿ ಆರಲೇ ಇಲ್ಲ.

ಸೋಶಿಯಲ್ ಮಿಡಿಯಾದಲ್ಲಿ ಭಾರತವನ್ನು ನೆಗೆಟಿವ್ ಆಗಿ ತೋರಿಸುವ ವಿಡಿಯೋ, ಸ್ಟೋರಿಗಳು ಶೇರ್ ಆಗ್ತಾ ಇರುತ್ತವೆ. ಕೇವಲ ಈ ನೆಗೆಟಿವ್ ವಿಡಿಯೋಗಳನ್ನು ನೋಡಿಕೊಂಡು ಇಂಡಿಯಾ ಅಂದರೆ ಇದೇ ಎನ್ನುವ ತೀರ್ಮಾನಕ್ಕೆ ಬರಬಾರದು ಎನ್ನುವುದು ಜೆಸ್ಸಿಕಾ ಮನವಿ. ಇಲ್ಲಿಗೆ ಬಂದು ಇಲ್ಲಿನ ಸಂಸ್ಕೃತಿ, ಸಂಪ್ರದಾಯವನ್ನು ಕಣ್ಣಾರೆ ನೋಡಿ ತಿಳಿದುಕೊಂಡಾಗ ಮಾತ್ರ ನಿಜ ಗೊತ್ತಾಗುವುದು ಎಂದಿದ್ದಾರೆ.

youtube varanasi kashi

youtube varanasi kashi

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ