
ದಸರಾ ಕ್ರೀಡಾಕೂಟ: ಕಲಬುರಗಿಯ ಭರತ್, ಸಮೃದ್ಧಿ ಡಬಲ್ ಪದಕ ಮಿಂಚು
ಕಲಬುರಗಿ: ನೆತ್ತಿ ಚುರುಗುಟ್ಟುವಂಥ ಬಿಸಿಲಿನಲ್ಲೂ ಬಿರುಸಿನಿಂದ ಓಡಿದ ಕಲಬುರಗಿಯ ಭರತ್ ಹಾಗೂ ಸಮೃದ್ಧಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
200 ಮೀಟರ್ ಓಟದಲ್ಲೂ ಈ ಇಬ್ಬರೂ ವೇಗ ಉಳಿಸಿಕೊಂಡು ಮೊದಲ ಸ್ಥಾನ ಪಡೆದರು. ‘ಡಬಲ್ ಪದಕ’ದ ಮಿಂಚಿನೊಂದಿಗೆ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ರೀಡಾಕೂಟದ ಪುರುಷರ ವಿಭಾಗದ 100 ಮೀಟರ್ ಸ್ಪರ್ಧೆಯಲ್ಲಿ ಕಲಬುರಗಿಯ ಬಾಬು 2ನೇ ಹಾಗೂ ವಿಜಯ 3ನೇ ಸ್ಥಾನ ಗಳಿಸಿದರು.
ಮಹಿಳಾ ವಿಭಾಗದ 100 ಮೀ ಸ್ಪರ್ಧೆಯಲ್ಲಿ ದ್ರಾಕ್ಷಾಯಣಿ 2ನೇ ಹಾಗೂ ಅಫ್ಸಾನಾ 3ನೇ ಸ್ಥಾನ ಗಳಿಸಿದರು.
ಈ ಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆಯುವ ಕ್ರೀಡಾಪಟುಗಳು ಹಾಗೂ ಗುಂಪು ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತಂಡಗಳು ಮೈಸೂರಿನಲ್ಲಿ ಅಕ್ಟೋಬರ್ 11ರಿಂದ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದವು.
ವಿವಿಧ ಸ್ಪರ್ಧೆಗಳ ಫಲಿತಾಂಶ ಇಂತಿವೆ: ಪುರುಷರ ವಿಭಾಗ: 200 ಮೀ ಓಟ: ಭರತ್ (ಕಲಬುರಗಿ)–1, ವಿಶಾಲ (ಕಲಬುರಗಿ)–2.
400 ಮೀ ಓಟ: ಮಂಜುನಾಥ (ಕೊಪ್ಪಳ)–1, ಎ.ಬಸವರಾಜ (ವಿಜಯನಗರ)–2. 800 ಮೀ ಓಟ: ಶ್ರೀನಿವಾಸ (ಕಲಬುರಗಿ)–1, ವಿನೋದಕುಮಾರ (ರಾಯಚೂರು)–2. 1,500 ಮೀ ಓಟ: ನಿಂಗು (ರಾಯಚೂರು)–1, ಸಾಗರ (ಕಲಬುರಗಿ)–2. 10 ಸಾವಿರ ಮೀ ಓಟ: ಪ್ರಕಾಶ (ಯಾದಗಿರಿ)–1, ತಯ್ಯಪ್ಪ (ರಾಯಚೂರು)–2. ಲಾಂಗ್‌ಜಂಪ್: ಇರ್ಫಾನ್ (ರಾಯಚೂರು)–1, ಯಲ್ಲಾಲಿಂಗ (ಕಲಬುರಗಿ)–2. ಹೈಜಂಪ್: ಯಲ್ಲಾಲಿಂಗ (ಕಲಬುರಗಿ)–1, ಭೂದೆಪ್ಪ (ರಾಯಚೂರು)–2. ಟ್ರಿಪಲ್ ಜಂಪ್: ಸುನೀಲ್ (ಯಾದಗಿರಿ)–1, ದಿನೇಶ (ವಿಜಯನಗರ)–2. ಶಾಟ್‌ಪಟ್: ಇಫ್ತೇಕರ್ ಅಹ್ಮದ್ (ಬಳ್ಳಾರಿ)–1, ಅಮರೇಶ (ರಾಯಚೂರು)–2. ಜಾವೆಲಿನ್ ಥ್ರೋ: ರಾಮು (ಕಲಬುರಗಿ)–1, ಎಂ.ಲಿಂಗರಾಜು (ಬಳ್ಳಾರಿ)–2. ಡಿಸ್ಕಸ್ ಥ್ರೊ: ಇಸ್ಮಾಯಿಲ್ (ಕಲಬುರಗಿ)–1, ಯುವರಾಜ (ರಾಯಚೂರು)–2. 110 ಮೀ. ಹರ್ಡಲ್ಸ್: ಕೆ.ರಾಕೇಶ (ಕೊಪ್ಪಳ)–1, ಸಮೀರ್ (ಕಲಬುರಗಿ)–2. 4x100 ಮೀ ರಿಲೇ: ಕಿರಣ, ಬಸವರಾಜ ಎಚ್., ಬಸವರಾಜ ವಿ., ಆಯುಷ್ ಅವರಿದ್ದ ಕಲಬುರಗಿ ತಂಡ –1 ಜೂಡೊ 60 ಕೆ.ಜಿ ವಿಭಾಗ: ಶಿವಯೋಗಿ (ಕಲಬುರಗಿ)–1, ವೆಲಸ್ಸ್ (ಕಲಬುರಗಿ)–2. ಜೂಡೊ 66 ಕೆ.ಜಿ ವಿಭಾಗ; ವಿಶ್ವನಾಥ ಎಲ್(ಬಳ್ಳಾರಿ)–1, ಶ್ರೇಯಸ್ (ಕಲಬುರಗಿ)–2. ಜೂಡೊ 73 ಕೆ.ಜಿ ವಿಭಾಗ: ಹ್ಯಾಪಿರಾಜ (ಕಲಬುರಗಿ)–1, ಶಿವಪ್ರಸಾದ (ಕಲಬುರಗ)–2. ಜೂಡೊ 81 ಕೆ.ಜಿ ವಿಭಾಗ: ಷಡಕ್ಷರಿ (ಕಲಬುರಗಿ)–1, ಸಾಯಿಚರಣ (ಕೊಪ್ಪಳ)–2. ಜೂಡೊ 90 ಕೆ.ಜಿ ವಿಭಾಗ: ಸುದೀಪ ರಾಠೋಡ (ಕಲಬುರಗಿ)–1, ಸುರೇಶ ನಾಯಕ (ಬಳ್ಳಾರಿ)–2. ಜೂಡೊ 100 ಕೆ.ಜಿ ವಿಭಾಗ: ತವಶಿಕ ಕೆ. (ವಿಜಯನಗರ)–1. ಜೂಡೊ 100+ ಕೆ.ಜಿ ವಿಭಾಗ: ಅಭಿಷೇಕ ಕೊಂಬಿನ್ (ಕಲಬುರಗಿ)–1.ಮಹಿಳೆಯರ ವಿಭಾಗ: 200 ಮೀ ಓಟ: ಸಮೃದ್ಧಿ (ಕಲಬುರಗಿ)–1, ದ್ರಾಕ್ಷಾಯಿಣಿ (ಕೊಪ್ಪಳ)–2.
400 ಮೀ ಓಟ: ವೈಷ್ಣವಿ (ಕಲಬುರಗಿ)–1, ಭಾಗ್ಯಶ್ರೀ (ರಾಯಚೂರು)–2. 800 ಮೀ ಓಟ: ವಿಧೀಶಾ (ಕಲಬುರಗಿ)–1, ಪವಿತ್ರಾ (ಬಳ್ಳಾರಿ)–2. 1,500 ಮೀ ಓಟ: ಜ್ಯೋತಿ (ರಾಯಚೂರು)–1, ವಿ.ಶಿರಿಶಾ (ಬಳ್ಳಾರಿ)–2. ಲಾಂಗ್‌ಜಂಪ್: ಮಲ್ಲಮ್ಮ ಬೆನ್ನಿ (ಕೊಪ್ಪಳ)–1, ಸೃಷ್ಟಿ (ಕಲಬುರಗಿ)–2. ಹೈಜಂಪ್: ಅಕ್ಷತಾ ದೊಡ್ಡಮನಿ (ಬೀದರ್)–1, ನಿಖಿತಾ (ಕಲಬುರಗಿ)–2. ತ್ರಿಪಲ್ ಜಂಪ್: ಸೋನು ರಾಜು (ಕಲಬುರಗಿ)–1, ಲಲಿತಾ (ರಾಯಚೂರು)–2. ಶಾಟ್‌ಪಟ್: ಅಕ್ಷತಾ ದೊಡ್ಡಮನಿ (ಬೀದರ್)–1, ಮಸರತ್ ಸುಲ್ತಾನ್ (ಕಲಬುರಗಿ)–2. ಜಾವೆಲಿನ್ ಥ್ರೊ: ಮಸರತ್ ಸುಲ್ತಾನ್ (ಕಲಬುರಗಿ)–1, ರೇವತಿ ಚಂದರ (ಕೊಪ್ಪಳ)–2. ಡಿಸ್ಕಸ್ ಥ್ರೊ: ರೇವತಿ ಚಂದರ ಚನ್ನಯ್ಯ (ಕೊಪ್ಪಳ)–1, ಭೀಮಾಭಾಯಿ ಪರಮಾನ್ನ (ಯಾದಗಿರಿ)–2. 110 ಮೀ ಹರ್ಡಲ್ಸ್: ಆರ್.ಮಿಲೋನ್ (ರಾಯಚೂರು)–1, ಸುಷ್ಮಿತಾ (ರಾಯಚೂರು)–2. 4x100 ಮೀ ರಿಲೇ: ಕಾವೇರಿ, ಅಫ್ಸಾನಾ, ಮಹಿಮುದ್, ಭಾಗಶ್ರೀ ಅವರಿದ್ದ ಕಲಬುರಗಿ ತಂಡ–1
ಜೂಡೊ 48 ಕೆ.ಜಿ ವಿಭಾಗ: ಚಿತ್ರಲೇಖಾ (ಕಲಬುರಗಿ)–1, ಆರೋಶಿ(ಕಲಬುರಗಿ)–2. ಜೂಡೊ 57 ಕೆ.ಜಿ ವಿಭಾಗ: ಲಾಯಾ (ಕೊಪ್ಪಳ)–1, ಉಷಾ (ಕಲಬುರಗಿ)–2. ಜೂಡೊ 63 ಕೆ.ಜಿ ವಿಭಾಗ: ರುಚಿತಾ ಸಿ.(ವಿಜಯನಗರ)–1. ಜೂಡೊ 78+ ಕೆ.ಜಿ ವಿಭಾಗ: ವೈಷ್ಣವಿ (ವಿಜಯನಗರ)–1.
ಕ್ರೀಡಾಕೂಟಕ್ಕೆ ರಿತಿಕಾ ವರ್ಮಾ ಚಾಲನೆ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಲಬುರಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟಕ್ಕೆ ಉಪವಿಭಾಗಾಧಿಕಾರಿ ರಿತಿಕಾ ವರ್ಮಾ ಹಸಿರು ನಿಶಾನೆ ತೋರಿ ಈಜುಕೊಳದಲ್ಲಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಈಜು, ಲಾನ್‌ಟೆನಿಸ್, ಹ್ಯಾಂಡ್‌ಬಾಲ್, ಜುಡೊ, ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಒಟ್ಟು ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಹಾಕಿ ತರಬೇತುದಾರ ಸಂಜಯ ಬಾಣದ, ಅಥ್ಲೆಟಿಕ್ಸ್ ತರಬೇತುದಾರ ರಾಜು ಬಾಬು ಚವ್ಹಾಣ, ಬ್ಯಾಸ್ಕೆಟ್‌ಬಾಲ್ ತರಬೇತುದಾರ ಪ್ರವೀಣಕುಮಾರ ಪುಣೆ, ಜುಡೊ ತರಬೇತುದಾರ ಅಶೋಕ ಎಂ., ಖೇಲೊ ಇಂಡಿಯಾ ತರಬೇತುದಾರ ಸಂತೋಷ ಭಾವಿಮನಿ, ಈಜು ತರಬೇತುದಾರರಾದ ರೇಣುಕಾ ಮತ್ತು ಮಚೇಂದ್ರಸಿಂಗ್ ಠಾಕೂರ, ಕಚೇರಿ ಸಿಬ್ಬಂದಿ ರಾಜಕುಮಾರ ಕೋರಳ್ಳಿ ಸೇರಿದಂತೆ ಅನೇಕರು ಇದ್ದರು.