ಮಡಿಕೇರಿ: ರಾಜಾಸೀಟ್‌ ರಸ್ತೆ ಕಾಮಗಾರಿಗೆ ಸಿ.ಎಂ ಕಚೇರಿ ಸ್ಪಂದನೆ

ಮಡಿಕೇರಿ: ರಾಜಾಸೀಟ್‌ ರಸ್ತೆ ಕಾಮಗಾರಿಗೆ ಸಿ.ಎಂ ಕಚೇರಿ ಸ್ಪಂದನೆ

ಮಡಿಕೇರಿ: ರಾಜಾಸೀಟ್‌ ರಸ್ತೆ ಕಾಮಗಾರಿಗೆ ಸಿ.ಎಂ ಕಚೇರಿ ಸ್ಪಂದನೆ

ಮಡಿಕೇರಿ: ಸೆ. 9ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ರಾಜಾಸೀಟ್‌ ರಸ್ತೆ ಕುರಿತ ‘ನಿಂತಲ್ಲೇ ನಿಂತ ಕಾಮಗಾರಿ’ ವಿಶೇಷ ವರದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಚೇರಿ ಸ್ಪಂದಿಸಿದೆ.

ಈ ಕುರಿತು ವಿವರಣೆ ನೀಡುವಂತೆ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ.ವೈಷ್ಣವಿ ಅವರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದೆ.

ವಿವರಣೆ ನೀಡಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್, ‘ರಾಜಾಸೀಟ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಗಳ ಅಮೃತ ನಗರೋತ್ಮಾನ ಹಂತ-4ರ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಆಗಸ್ಟ್ 12ರಂದು ತಾಂತ್ರಿಕ ಬಿಡ್‌ಗೆ ಅನುಮೋದನೆಯಾದ ನಂತರ ಆಗಸ್ಟ್ 14ರಂದು ಆರ್ಥಿಕ ಬಿಡ್ ತೆರೆಯಲಾಗಿದೆ.

ಇದರಲ್ಲಿ ಕನಿಷ್ಠ ದರ ನಮೂದಿಸಿರುವ ಗುತ್ತಿಗೆದಾರರಿಗೆ ಟೆಂಡರ್ ಅನುಮೋದನೆಯಾಗಿದೆ. ಗುತ್ತಿಗೆದಾರರು 21 ದಿನಗೊಳಗಾಗಿ ಭದ್ರತಾ ಠೇವಣಿ ‍ಪಾವತಿಸಿದ ನಂತರ ಗುತ್ತಿಗೆದಾರರಿಗೆ ಕಾರ್ಯದೇಶ ನೀಡಲಾಗುವುದು. ಟೆಂಡರ್ ನಿಯಮದಂತೆ 3 ತಿಂಗಳ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ವಿವರಣೆ ನೀಡಿದ್ದಾರೆ.

ಆದರೆ, ಆಗಸ್ಟ್ 14ರಂದೇ ಆರ್ಥಿಕ ಬಿಡ್ ತೆರೆದಿದ್ದರೂ ಸೆಪ್ಟೆಂಬರ್ ಅಂತ್ಯದವರೆಗೂ ಕಾಮಗಾರಿಯೇ ಆರಂಭವಾಗಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ