ವ್ಯಸನಿಯಾದರೆ ಕುಟುಂಬವೇ ಬಲಿ–ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ವ್ಯಸನಿಯಾದರೆ ಕುಟುಂಬವೇ ಬಲಿ–ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ವ್ಯಸನಿಯಾದರೆ ಕುಟುಂಬವೇ ಬಲಿ–ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ‘ಕೆಟ್ಟ ವ್ಯಸನದಿಂದ ಒಬ್ಬ ವ್ಯಕ್ತಿ ಮಾತ್ರ ಹಾಳಾಗುವುದಿಲ್ಲ; ಇಡೀ ಕುಟುಂಬದ ಮೇಲೆ ಹೊಡೆತ ಬೀಳುತ್ತದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಹಲಗಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಹಾಗೂ ಪಾನ ಮುಕ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ, ಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಪಾನ ವ್ಯಸನಮುಕ್ತ ಸಮಾಜ ನಿರ್ಮಾಣ ಎನ್ನುವುದು ಒಬ್ಬ ವ್ಯಕ್ತಿಯನ್ನು ವ್ಯಸನದಿಂದ ಹೊರತರುವುದಷ್ಟೇ ಅಲ್ಲ; ಒಂದು ಕುಟುಂಬವನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡುವ ಸಾಮಾಜಿಕ ಹೊಣೆಗಾರಿಕೆಯಾಗಿದೆ’ ಎಂದರು.

‘ಮಹಾತ್ಮ ಗಾಂಧೀಜಿ ಜಯಂತಿಯ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ವ್ಯಸನಮುಕ್ತ ಸಮಾಜದ ಸಂದೇಶ ಸಾರುವುದು ಹಾಗೂ ಪಾನವ್ಯಸನದಿಂದ ಹೊರಬಂದು ಹೊಸ ಬದುಕು ಆರಂಭಿಸಿರುವವರನ್ನು ಗೌರವಿಸುವುದು ಕೇವಲ ಕಾರ್ಯಕ್ರಮವಲ್ಲ, ಇದೊಂದು ಸಾಮಾಜಿಕ ಸಂಕಲ್ಪವಾಗಿದೆ’ ಎಂದರು.

‘ವ್ಯಸನದಿಂದ ಹೊರಬಂದು ಹೊಸ ಬದುಕು ಆರಂಭಿಸಿರುವವರನ್ನು ಅಭಿನಂದಿಸಿದ ಅವರು, ವ್ಯಸನ ಬಿಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಮನಸ್ಸಿನ ಬಲ, ಕುಟುಂಬದ ಬೆಂಬಲ ಮತ್ತು ಸಮಾಜದ ಪ್ರೋತ್ಸಾಹ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ‘ನಾನು ಬದಲಾಗಬೇಕು’ ಎಂಬ ದೃಢ ಸಂಕಲ್ಪ ಇರಬೇಕು’ ಎಂದರು.

ಅಡವೀಶ್ವರ ದೇವರು, ಡಾ.ಜಿ.ಆರ್. ಸೊನೇರ್, ನಟರಾಜ ಬಾದಾಮಿ, ದಯಾಶೀಲ್, ಡಾ.ಶ್ರೀಕಾಂತ್ ವಿ.ಎನ್., ಚಾರುಕೀರ್ತಿ ಸೈಬಣ್ಣವರ್, ಮಲ್ಲಿಕಾರ್ಜುನ ವಾಲಿ, ವಿಠ್ಠಲ ಪಿಶೆ, ಜಗದೀಶ್ ಹಾರೂಗೊಪ್ಪ, ಬಸವರಾಜ ಸೊಪ್ಪಿಮಠ್, ಸತೀಶ್ ನಾಯ್ಕ್ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ