
ರಬಕವಿ ಬನಹಟ್ಟಿ: ಕಾಡಸಿದ್ಧೇಶ್ವರರ ವೈಭವದ ರಥೋತ್ಸವ
ರಬಕವಿ ಬನಹಟ್ಟಿ: ವಚನಕಾರ ಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ಕಾಡಸಿದ್ಧೇಶ್ವರರ ರಥೋತ್ಸವ ಮಂಗಳವಾರ ರಾತ್ರಿ ಸಂಭ್ರಮದಿಂದ ನಡೆಯಿತು.
ಬನಹಟ್ಟಿಯ ಕಾಡಸಿದ್ಧೇಶ್ವರ ರಥೋತ್ಸವವು ಜಮಖಂಡಿಯ ಪಟವರ್ಧನ ಮಹಾರಾಜರು 1949ರಲ್ಲಿ ನೀಡಿದ ರಥದಲ್ಲಿ ನಡೆಸಲಾಗುತ್ತದೆ. ಈ ರಥವು 177 ವರ್ಷಗಳಷ್ಟು ಹಳೆಯದಾದ ರಥವಾಗಿದೆ. ರಥದಲ್ಲಿ ಕಾಡಸಿದ್ಧೇಶ್ವರರ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ವಿದ್ಯುತ್ ದೀಪ, ಭಕ್ತರು ನೀಡಿದ ಬೃಹತ್ ಹೂ ಮಾಲೆಗಳಿಂದ ಮತ್ತು ಸಂಕಷ್ಠ ಮಾಲೆಗಳಿಂದ ರಥವನ್ನು ಶೃಂಗಾರ ಮಾಡಲಾಗಿತ್ತು.
ಪ್ರಜಾಸೌಧ ನಿರ್ಮಾಣಕ್ಕಾಗಿ ಘೋಷಣೆ: ರಥೋತ್ಸವದ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಾಣ ಮಾಡಬೇಕು ಎಂಬ ಘೋಷಣೆಯನ್ನು ಕೂಡಾ ಹಾಕಲಾಯಿತು. ದೇವರಿಗೆ ಅರ್ಪಿಸಿದ ಸಂಕಷ್ಟ ಮಾಲೆಗಳಲ್ಲಿ ಪ್ರಜಾಸೌಧ ಚಿತ್ರಗಳನ್ನು ಹಾಕಲಾಗಿತ್ತು.
ಸಂಜೆ ಆರು ಗಂಟೆಗೆ ನಗರದ ಗಣ್ಯರು ಸಾಮೂಹಿಕ ಮಂಗಳಾರುತಿಯನ್ನು ನೆರವೇರಿಸಿದರು. ಮಂಗಳವಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು. ರಭಕ್ತರು ರಥಕ್ಕೆ ಹೂ ಸಿಂಚನವನ್ನು ನೆರವೇರಿಸಿದರು ಜೊತೆಗೆ ಜಿಟಿ ಜಿಟಿ ಮಳೆ ಕೂಡಾ ಆಯಿತು.
ಭಕ್ತರು ಕಾಡಸಿದ್ಧೇಶ್ವರರಿಗೆ ಪಟಾಕಿ ಹಾರಿಸುವುದಾಗಿ ಹರಕೆ ಹೊರುವುದು ವಿಶೇಷವಾಗಿದ್ದು, ಮಧ್ಯಾಹ್ನ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ರಥದ ಮುಂಭಾಗದಲ್ಲಿ ಮದ್ದು ಸುಡುವ ಕಾರ್ಯಕ್ರಮ ನಡೆಸಿದರು.
ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ರಾಜಶೇಖರ ಸೋರಗಾವಿ, ಮಲ್ಲಿಕಾರ್ಜುನ ತುಂಗಳ, ಸಿದ್ದು ಕೊಣ‍್ಣೂರ, ಬಸವರಾಜ ಜಾಡಗೌಡ, ಕಿರಿಣ ಆಳಗಿ, ಸಿಪಿಐ ನಾಗೇಶ ಕಾಡದೇವರ, ಧರೆಪ್ಪ ಉಳ್ಳಾಗಡ್ಡಿ, ಭೀಮಶಿ ಮಗದುಮ್, ಸುರೇಶ ಕೋಲಾರ, ಶಂಕರ ಜಾಲಿಗಿಡದ, ಶ್ರೀಶೈಲ ಬೀಳಗಿ, ಸಿದ್ರಾಮ ಸವದತ್ತಿ, ಡಾ.ಪ್ರಭು ಪಾಟೀಲ, ಬಸವರಾಜ ಮುಗತಿ, ಅರ್ಚರಕರಾದ ಅರ್ಚಕರಾದ ಈಶ‍್ವರಯ್ಯ ಕಾಡದೇವರ, ಶಿವರುದ್ರಯ್ಯ ಕಾಡದೇವರ, ಪ್ರಶಾಂತ ಕಾಡದೇವರ ಇದ್ದರು.