ಮದ್ದೂರು: ನಿರಾಶ್ರಿತರಿಗೆ ಹಕ್ಕು ಪತ್ರ, ಮನೆ ಕೀಲಿ ವಿತರಣೆ

ಮದ್ದೂರು: ನಿರಾಶ್ರಿತರಿಗೆ ಹಕ್ಕು ಪತ್ರ, ಮನೆ ಕೀಲಿ ವಿತರಣೆ

ಮದ್ದೂರು: ನಿರಾಶ್ರಿತರಿಗೆ ಹಕ್ಕು ಪತ್ರ, ಮನೆ ಕೀಲಿ ವಿತರಣೆ

ಮದ್ದೂರು: ನಿರಾಶ್ರಿತರಿಗೆ ಸೂರು ಕಲ್ಪಿಸುವುದು ಮಹತ್ಕಾರ್ಯಗಳಲ್ಲೊಂದು ಎಂದು ಸೋಮಣ್ಣ ಮೊತ್ತೆಹಾಡಿ ತಿಳಿಸಿದರು.

ತಾಲ್ಲೂಕಿನ ವೈದ್ಯನಾಥಪುರದಲ್ಲಿ ಬೀದಿ ಬದಿ ಗುಡಿಸಲಿನಲ್ಲಿ ದಶಕಗಳಿಂದ ವಾಸಿಸುತ್ತಿರುವ ನಿರಾಶ್ರಿತರಿಗೆ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬುಧವಾರ ನೀಡಿದ ನಿವೇಶನದ ನೋಂದಣಿ ಪತ್ರ ಹಾಗೂ ಮನೆಯ ಕೀಲಿ ವಿತರಣೆ ಮಾಡಿ ಅವರು ಮಾತನಾಡಿದರು.

ಕಾಡಿನ ಮಧ್ಯೆ ಬದುಕಿ, ಕಾದಂಚಿನ ಜನರ ಎಲ್ಲಾ ನೋವುಗಳನ್ನು ಅನುಭವಿಸಿ ಕಣ್ಣಾರೆ ಕಂಡವನು ನಾನು ಎಂದ ಅವರು, ತಾಯಿಯ ಆರೈಕೆಗಾಗಿ ಜೀತಕ್ಕಿದ್ದು , ವಿಮುಕ್ತನಾಗಿ 7 ಸಾವಿರ ಎಕರೆ ಭೂಮಿಯನ್ನು ಗಿರಿಜನರಿಗಾಗಿ ಸಂಘಟಿತ ಹೋರಾಟಗಳಿಂದ ಮಂಜೂರು ಮಾಡಿಸಿದೆ. ಕಾಡಿನಂಚಿನ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ , ಗಿರಿಜನರ ಕಷ್ಟ ನಿವಾರಿಸಲು ಶ್ರಮಿಸಿದ್ದೇನೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಕೊಪ್ಪ ಮಾತನಾಡಿ ಹುಲಿಗೆರೆಪುರ ಮಹದೇವು ಅವರು ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಶ್ರಾಘನೀಯ ಎಂದರು.

ಜೇನುಕುರುಬ ಕುಟುಂಬಗಳಿಗೆ ಭೂಮಿ ಸಿಗಲು ಶ್ರಮಿಸಿದ ಸೋಮಣ್ಣ ಮೊತ್ತೆಹಾಡಿ, 15 ದೇಶಗಳಲ್ಲಿ ಜನಪದ ಕಲೆಯನ್ನು ಪಸರಿಸಿ ಅಮ್ಮ ರಾಮಚಂದ್ರು ಅವರನ್ನು ಇಲ್ಲಿ ಗೌರವಿಸಿರುವುದು ಸಂತಸತಂದಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಹುಲಿಗೆರೆಪುರ ಮಹದೇವು ಮಾತನಾಡಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ನಿರಾಶ್ರಿತರಿಗೆ ಸೂರು ಒದಗಿಸಲು ಪ್ರಯತ್ನ ನಿರಂತರ ಎಂದರು.

ಅಂತರರಾಷ್ಟ್ರೀಯ ಜನಪದ ಗಾಯಕರಾದ ಅಮ್ಮ ರಾಮಚಂದ್ರು, ಹರಿಹರದ ಹುಚ್ಚಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚೂರಿನಿಂಗಯ್ಯ, ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ್, ರಾಜ್ಯ ರೈತ ಕಲ್ಯಾಣ ಸಂಘ ಮಹಿಳಾ ಅಧ್ಯಕ್ಷೆ ಉಷಾ ಜಯಶೀಲ, ಮುಖಂಡರಾದ ನ. ಲಿ. ಕೃಷ್ಣ, ಗ್ರಾ. ಪಂ.ಮಾಜಿ ಸದಸ್ಯೆ ಲಕ್ಷ್ಮೀ ಮಹದೇವು, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಶಂಕರ್, ಬೋರಯ್ಯ , ಪದಾಧಿಕಾರಿಗಳು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ