ಹಳೆ ದ್ವೇಷ: ಮದ್ಯಪಾನ ಮಾಡುತ್ತಿದ್ದಾಗ ಸಹಚರರಿಂದ ವ್ಯಕ್ತಿ ಮೇಲೆ ಹಲ್ಲೆ

ಹಳೆ ದ್ವೇಷ: ಮದ್ಯಪಾನ ಮಾಡುತ್ತಿದ್ದಾಗ ಸಹಚರರಿಂದ ವ್ಯಕ್ತಿ ಮೇಲೆ ಹಲ್ಲೆ

ಹಳೆ ದ್ವೇಷ: ಮದ್ಯಪಾನ ಮಾಡುತ್ತಿದ್ದಾಗ ಸಹಚರರಿಂದ ವ್ಯಕ್ತಿ ಮೇಲೆ ಹಲ್ಲೆ

ಸೂಲಿಬೆಲೆ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮನು ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಸಿದ್ದೇನಹಳ್ಳಿಯ ರಜನಿಕಾಂತ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಗ್ರಾಮದಲ್ಲಿ ಈ ಹಿಂದೆ ರಜನಿಕಾಂತ್‌ ಹಾಗೂ ಅದೇ ಗ್ರಾಮದ ಮನು, ರವಿ, ರಚಿನ್, ಅನಿಲ್ ನಡುವೆ ಜಗಳವಾಗಿತ್ತು. ಗ್ರಾಮಸ್ಥರು ಸಂಧಾನ ನಡೆಸಿದ್ದರು.

ಅ.4ರಂದು ರಜನಿಕಾಂತ್ ತನ್ನ ಗೆಳೆಯ ಚೇತನ್ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಮನು, ಗಣೇಶ್, ಮೂರ್ತಿ, ಗಿರೀಶ್, ಹರೀಶ್, ಅನಿಲ್ ಏಕಾಏಕಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮನು ಬಿಯರ್ ಬಾಟಲ್‌ನಿಂದ ಹೊಡೆದಿದ್ದಾನೆ. ಗಣೇಶ್ ಮತ್ತು ಮೂರ್ತಿ ಸಹ ಹಲ್ಲೆ ಮಾಡಿದ್ದಾರೆ. ಗಿರೀಶ್ ಮತ್ತು ಹರೀಶ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಲಾಟೆಯಿಂದ ಭಯಗೊಂಡಿದ್ದ ಚೇತನ್ ಸ್ಥಳದಿಂದ ಓಡಿಹೋಗಿದ್ದಾರೆ. ರಜನಿಕಾಂತ್‌ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದಾರೆ ಎಂದು ಸೂಲಿಬೆಲೆ ಪೊಲೀಸರು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ