BBK13: ಟಾಸ್ಕ್ ಮಧ್ಯೆ ಯಶಸ್‌ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದು ಮಂಜ

BBK13: ಟಾಸ್ಕ್ ಮಧ್ಯೆ ಯಶಸ್‌ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದು ಮಂಜ

BBK13: ಟಾಸ್ಕ್ ಮಧ್ಯೆ ಯಶಸ್‌ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದು ಮಂಜ

ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ತುಂಬ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಒಬ್ಬರ ವೈಯಕ್ತಿಕ ವಿಚಾರದ ‌ಬಗ್ಗೆ ಮಾತನಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಆದರೆ ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿರುವ ಮಾಡರ್ನ್ ಮಹಾಕವಿ ಮಂಜ ಆ ನಿಯಮಗಳನ್ನು ಮೀರುತ್ತಲೇ ಇದ್ದಾರೆ.

ಬಿಗ್ ಬಾಸ್, ಮನೆಯಲ್ಲಿರುವ ಸದಸ್ಯರಿಗೆ ಟಾಸ್ಕ್‌ವೊಂದನ್ನು ಕೊಟ್ಟಿದ್ದಾರೆ. ರಾಕ್ಷಸರು ಹಾಗೂ ಗಂಧರ್ವರು ಎಂಬ ಎರಡು ತಂಡಗಳು ರೂಪುಗೊಂಡಿವೆ. ಈ ಟಾಸ್ಕ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಕ್ಷಸರು ನೀಡುತ್ತಿರುವ ಕಾಟಕ್ಕೆ ಗಂಧರ್ವರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಮಂಜ ಕೊಡುತ್ತಿರುವ ಕಾಟಕ್ಕೆ ಗಂಧರ್ವರು ಕಂಗಾಲಾಗಿದ್ದಾರೆ.

ಇನ್ನು, ಈ ಟಾಸ್ಕ್ ಮಧ್ಯೆ ರಾಕ್ಷಸನಾಗಿರುವ ಮಂಜ, ಯಶಸ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಯಶಸ್ ಅವರ ವೈಯಕ್ತಿಕ ವಿಷಯ ಇಟ್ಟುಕೊಂಡು ಮಂಜ ಮಾತಾಡಿದ್ದು ವೀಕ್ಷಕರಿಗೆ ಬೇಸರ ತಂದಿದೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಯಶಸ್‌ ಅವರನ್ನ ಈಜುಕೊಳಕ್ಕೆ ಇಳಿಸಲಾಗಿದೆ.

ಆಗ ಯಶಸ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಂಜ, ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದಿದ್ದಾರೆ. ಮಂಜ ಅವರ ಈ ಮಾತುಗಳು ಯಶಸ್‌ಗೆ ಬೇಸರ ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯಶಸ್, ‘ಮಾತನಾಡುವಾಗ ಪದಬಳಕೆ ಬಗ್ಗೆ ಎಚ್ಚರಿಕೆಯಿಂದ ಇರು’ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಬಳಿಕ ಮಂಜ ಅವರ ಮಾತುಗಳನ್ನು ನೆನಪಿಸಿಕೊಂಡು ಯಶಸ್ ಕಣ್ಣೀರು ಹಾಕಿದ್ದು ಪ್ರೋಮೊದಲ್ಲಿ ಕಾಣಿಸಿದೆ. ಸದ್ಯ ಇದೇ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೊ ನೋಡಿದ ವೀಕ್ಷಕರು ‘ಮಂಜ ಮಾತಾಡುವಾಗ ಮಾತಿನ ಮೇಲೆ ನಿಗಾ ಇರಲಿ’, ‘ಮಂಜನ ವರ್ತನೆ ಸರಿಯಾಗಿಲ್ಲ’ ಎಂದು ಕಮೆಂಟ್ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ