ಸಿರಿಗೆರೆ: ನೆಲ್ಲಿಕಟ್ಟೆ ಆಸ್ಪತ್ರೆಗೆ ಇನ್ನೂ ಸಿಗದ ಉದ್ಘಾಟನೆ ಭಾಗ್ಯ

ಸಿರಿಗೆರೆ: ನೆಲ್ಲಿಕಟ್ಟೆ ಆಸ್ಪತ್ರೆಗೆ ಇನ್ನೂ ಸಿಗದ ಉದ್ಘಾಟನೆ ಭಾಗ್ಯ

ಸಿರಿಗೆರೆ: ನೆಲ್ಲಿಕಟ್ಟೆ ಆಸ್ಪತ್ರೆಗೆ ಇನ್ನೂ ಸಿಗದ ಉದ್ಘಾಟನೆ ಭಾಗ್ಯ

ಸಿರಿಗೆರೆ: ಎರಡೂವರೆ ವರ್ಷಗಳ ಹಿಂದೆ ಭೀಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕಟ್ಟೆ ಗ್ರಾಮದಲ್ಲಿ ನಿರ್ಮಿಸಿರುವ ಆಯುಷ್ಮಾನ್‌ ಆರೋಗ್ಯ ಕೇಂದ್ರ ಈವರೆಗೂ ಉದ್ಘಾಟನೆ ಭಾಗ್ಯ ಕಾಣದೆ ಅನಾಥವಾಗಿದೆ.

ಗ್ರಾಮದಲ್ಲಿ ಅಂದಾಜು 120ರಿಂದ 140 ಮನೆಗಳಿವೆ. ಇಲ್ಲಿನ ಜನಸಂಖ್ಯೆ 750ರ ಆಸುಪಾಸಿನಲ್ಲಿದೆ. ನಿವಾಸಿಗಳ ಹಿತದೃಷ್ಟಿಯಿಂದ ಹಲವು ಹೋರಾಟ ಮತ್ತು ಪ್ರತಿಭಟನೆ ಮಾಡಿ ಆರೋಗ್ಯ ಕೇಂದ್ರವನ್ನು ಗ್ರಾಮಕ್ಕೆ ತರಲಾಗಿದೆ. ನೆಲ್ಲಿಕಟ್ಟೆ ಗ್ರಾಮವು ಗಣಿಬಾಧಿತ ಪ್ರದೇಶಗಳ ಯೋಜನೆ ವ್ಯಾಪ್ತಿಗೆ ಬರುವುದರಿಂದ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವು ಅಂದಾಜು ₹ 70 ಲಕ್ಷ ಅನುದಾನ ನೀಡಿದೆ.

ನೆಲ್ಲಿಕಟ್ಟೆ ಗ್ರಾಮಸ್ಥರು ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಾಗ ಸಂತಸಪಟ್ಟಿದ್ದರು. ತಮ್ಮೂರಿಗೂ ಒಂದು ಆಸ್ಪತ್ರೆ ಬಂತೆಂಬ ಖುಷಿಯಲ್ಲಿ ಹಿಗ್ಗಿದ್ದರು. ತಮ್ಮ ಹಳ್ಳಿಗೆ ವೈದ್ಯರೂ ಬರುತ್ತಾರೆ. ಶುಶ್ರೂಕರೂ ಬರುತ್ತಾರೆ. ಬೇರೊಂದು ಊರಿನ ಆಸ್ಪತ್ರೆಗೆ ಓಡಾಡುವ ಕಷ್ಟ ತಪ್ಪಲಿದೆ ಎಂಬ ಆಶಾಭಾವ ಹೊತ್ತಿದ್ದರು. ಆದರೆ, ಅದೆಲ್ಲ ಈಗ ಮರೀಚಿಕೆಯಂತಾಗಿರುವುದು ಹಳ್ಳಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ಆರಂಭಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಅಗತ್ಯ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳಿಸುವಂತೆ ಕೋರಿದ್ದಾರೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸಕ್ತಿ ತೋರಿಲ್ಲ. ಇದರಿಂದಾಗಿ ಆರೋಗ್ಯ ಸೇವೆಯನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲ ಯೋಜನೆ ಯಶಸ್ವಿಯಾಗದಂತಾಗಿದೆ.

ಆಸ್ಪತ್ರೆಯ ಕಟ್ಟಡವೇನೋ ಸುಂದರವಾಗಿದೆ. ಆದರೆ, ಅದರ ಅಂಗಳದಲ್ಲಿ ಈಗ ಗಿಡ–ಗಂಟಿ, ಹುಲ್ಲು– ಮುಳ್ಳು ಬೆಳೆದು ಹಾಳಾಗಿದೆ. ಆರೋಗ್ಯ ಕೇಂದ್ರದ ಆವರಣದ ಒಳಗೆ ಹೋಗಲು ಜನರು ಹೆದರಿಕೊಳ್ಳುವಂತಾಗಿದೆ. ಪಾರ್ಥೇನಿಯಂ ಕಳೆ ಎದ್ದು ನಿಂತಿದೆ. ಅದನ್ನು ಸ್ವಚ್ಛಗೊಳಿಸುವ ಉಮೇದು ಯಾರಿಗೂ ಇದ್ದಂತಿಲ್ಲ. ಅನಾಥ ಭಾವದಿಂದ ಏಕಾಂಗಿಯಾಗಿರುವ ಕಟ್ಟಡದ ಒಳಗೆ ಅನೈತಿಕ ಚಟುವಟಿಕೆಗಳು ಆರಂಭವಾಗಿ ಅನಾರೋಗ್ಯ ಕೇಂದ್ರವಾಗಿ ರೂಪುಗೊಳ್ಳುವ ಮೊದಲು ಇದನ್ನು ಉದ್ಘಾಟಿಸಿ ಜನಸೇವೆಗೆ ನೀಡಬೇಕು ಎಂಬುದು ಗ್ರಾಮಸ್ಥರ ಆಶಯ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ