
ನೀಲನಹಳ್ಳಿ: ಸಾಲ ಬಾಧೆಯಿಂದ ಮನನೊಂದು ರೈತ ನವೀನ್ ಕುಮಾರ್ ಆತ್ಮಹತ್ಯೆ
ಪಾಂಡವಪುರ: ತಾಲ್ಲೂಕಿನ ನೀಲನಹಳ್ಳಿ ಗ್ರಾಮದ ರೈತ ಎಚ್.ಕೆ. ನವೀನ್ ಕುಮಾರ್ (39) ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ . ಇವರು ಮೂರು ಎಕರೆ ಜಮೀನಿನಲ್ಲಿ ತರಕಾರಿ, ತೆಂಗು ಬೆಳೆಯಲು ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ ₹5ಲಕ್ಷ , ಹೈನುಗಾರಿಕೆಗಾಗಿ ₹1ಲಕ್ಷ, ಚಿನ್ನಾಭರಣದ ಮೇಲೆ ₹ 2.5ಲಕ್ಷ ಹಾಗೂ ಖಾಸಗಿ ಲೇವಾದೇವಿದಾರರಿಂದ ₹3ಲಕ್ಷ ಪಡೆದಿದ್ದರು. ಐದಾರು ವರ್ಷಗಳಿಂದ ಬೆಳೆದ ಬೆಳೆಯಲ್ಲಿ ಯಾವುದೇ ಲಾಭ ಕಂಡಿರಲಿಲ್ಲ. ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನವೀನ್ ಚಿಕ್ಕಪ್ಪ ನಡುಕೇರಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿ ದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್–14416 ಅಥವಾ ಸಹಾಯ್– 080 25497777, 98864 44075)