ವಿಜಯಪುರದಲ್ಲಿ ಗಾಂಧೀಜಿ ಹೊಸ‌ ಪ್ರತಿಮೆ ನಿರ್ಮಾಣ: ಸಚಿವ ಎಂ.ಬಿ. ಪಾಟೀಲ

ವಿಜಯಪುರದಲ್ಲಿ ಗಾಂಧೀಜಿ ಹೊಸ‌ ಪ್ರತಿಮೆ ನಿರ್ಮಾಣ: ಸಚಿವ ಎಂ.ಬಿ. ಪಾಟೀಲ

ವಿಜಯಪುರದಲ್ಲಿ ಗಾಂಧೀಜಿ ಹೊಸ‌ ಪ್ರತಿಮೆ ನಿರ್ಮಾಣ: ಸಚಿವ ಎಂ.ಬಿ. ಪಾಟೀಲ

ವಿಜಯಪುರ: ನಗರದ ಹೃದಯ ಭಾಗ ಗಾಂಧಿ ವೃತ್ತದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬೃಹತ್‌ ಮೂರ್ತಿ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಗಾಂಧಿವೃತ್ತದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾಗೂ ಸೈನಿಕ ಶಾಲೆ ಎದುರಿಗಿರುವ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಗಾಂಧಿವೃತ್ತದಲ್ಲಿ ಮೂರ್ತಿ ಚಿಕ್ಕದು ಹಾಗೂ ತೀರಾ ಹಳೆಯದಾಗಿದೆ. ಈ ಹಿಂದೆ ನಾವೇ ಆ ಮೂರ್ತಿ ಸ್ಥಾಪಿಸಿದ್ದೇವು. ಈಗಿನ ವಿಶಾಲ ರಸ್ತೆಗೆ ಅನುಗುಣವಾಗಿ ಮೂರ್ತಿ ದೊಡ್ಡದಾಗಿ ನಿರ್ಮಿಸಬೇಕಿದೆ. ಅದನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾಗುವುದು. ಫ್ಲೈ ಓವರ್‌ ಸಲುವಾಗಿ ನೆನಗುದಿಗೆ ಬಿದ್ದಿತ್ತು. ಈಗ ಫ್ಲೈ ಓವರ್‌ ಬಂದರೂ, ಬಿಟ್ಟರೂ ಅಷ್ಟೇ. ಎಲ್ಲರಿಗೂ ಎದ್ದು ಕಾಣುವಂತೆ ಹೊಸ ಮೂರ್ತಿಯನ್ನು ಸ್ಥಾಪಿಸುವ ಸಂಕಲ್ಪವಿದೆ ಎಂದು ತಿಳಿಸಿದರು.

ಮೇಯರ್ ಎಂ.ಎಸ್‌. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಾಜಿ ಶಾಸಕ ರಾಜು ಆಲಗೂರ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ‌ ಪ್ರಕಾಶ ಮೀನಾ, ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಸದಸ್ಯರು, ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ