
ಗಾಂಧಿ-ಶಾಸ್ತ್ರಿ ಆದರ್ಶ ಬದುಕಿಗೆ ದಾರಿ ದೀಪ: ಸಮೀರಪ್ರಕಾಶ
ಸವಣೂರು: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಅಹಿಂಸೆ ಹಾಗೂ ಕರ್ತವ್ಯ ನಿಷ್ಠೆಯನ್ನು ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಕರೆ ನೀಡಿದರು.
ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಹಶೀಲ್ದಾರ್ ರವಿ ಕೊರವರ ಮಾತನಾಡಿ, ‘ನಾವು ಅಧಿಕಾರದಲ್ಲಿದ್ದಾಗ ಬಡವರಿಗೆ ಮತ್ತು ಸಮಾಜಕ್ಕೆ ಎಷ್ಟು ಸಹಾಯ ಮಾಡುತ್ತೇವೆ ಎಂಬುದು ಮುಖ್ಯ’ ಎಂದು ಗಾಂಧಿ-ಶಾಸ್ತ್ರಿಯವರ ಸೇವೆಯನ್ನು ಸ್ಮರಿಸಿದರು.
ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಇಬಬರು ಮಹನೀಯರು ತಮ್ಮ ತ್ಯಾಗ, ಶ್ರಮದಿಂದ ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿ ವಿದ್ಯಾ ಜಕ್ಕನಗೌಡ್ರ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ರಘುಪತಿ ರಾಘವ’ ಗೀತೆ ಗಾಯನ ನಡೆಯಿತು.
ಬಿ.ಯು.ಎಂ.ಎಫ್ ಬಾರ್ಕಿ, ಪ್ರಾಚಾರ್ಯ ಆರ್.ವಿ.ಅಂಗಡಿ, ರೈತ ಸಂಘದ ಅಧ್ಯಕ್ಷ ರಾಜು ಪಿತಾಂಬ್ರಶೆಟ್ಟಿ, ಪರಶುರಾಮ ಈಳಗೇರ ತಾಲ್ಲೂಕಿನ ಎಲ್ಲ ಸಿಬ್ಬಂದಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.