ಶಿಗ್ಗಾವಿ| ದಸರಾ: ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ| ದಸರಾ: ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ| ದಸರಾ: ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ: ’ಸರ್ವ ಸಮುದಾಯದಲ್ಲಿ ಸಮಾನತೆ ಮೂಡಿಸುವ ಉದ್ದೇಶ ಹಬ್ಬ ಹರಿದಿನಗಳಲ್ಲಿ ಅಡಿಗಿದೆ. ಅವುಗಳ ಮಹತ್ವವನ್ನು ಮಕ್ಕಳಿಗೆ ಅರ್ಥೈಸುವ ಕೆಲಸವಾಗಬೇಕು‘ ಎಂದು ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪೇಟೆ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದ ದಸರಾ ಮಹೋತ್ಸವ ಅಂಗವಾಗಿ ನಡೆದ ಘಟಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

’ರಾಜ್ಯದಲ್ಲಿ ಶಾಂತಿ, ಸಮೃದ್ಧಿ ಬೆಳೆಯಬೇಕು ಶಕ್ತಿ ದೇವತೆಗಳನ್ನು ಆರಾಧಿಸುವ ನಾಡಹಬ್ಬ ಅತ್ಯಂತ ಮಹತ್ವ ಪಡೆದಿದೆ. ದಸರಾ ಮಹೋತ್ಸವಕ್ಕೆ ಶಕ್ತಿ ಸ್ವರೂಪಿಣಿ ಯಲ್ಲಮ್ಮದೇವಿಯನ್ನು ಪೊಜಿಸುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು. ಮನುಕುಲದ ಅಂಧಕಾರ ದೂರಾಗಲು ಮತ್ತು ಬಯಸಿದ ಹರಕೆಗಳನ್ನು ಇಡೇರಿಸಿಕೊಳ್ಳಲು ಶಕ್ತಿದೇವತೆಗಳ ಪೂಜೆ ಶ್ರೇಷ್ಟವಾಗಿದೆ. ಆಯುಧಗಳ ಪೂಜೆ, ದೀಪಾರಾಧನೆ ಇವು ಬೆಳವಣಿಗೆಗೆ ಮಾರ್ಗ ತೋರುತ್ತಿವೆ. ಹೀಗಾಗಿ ಭಕ್ತಿ ಮಾರ್ಗ ಮನುಷ್ಯನ ಏಳಿಗೆಗೆ ಕಾರಣವಾಗಿದೆ‘ ಎಂದರು.

ನಂತರ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಘಟಸ್ಥಾಪನೆ, ದೀಪಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪ್ಪಿನ, ಉಪಾಧ್ಯಕ್ಷ ನಿಂಗಪ್ಪ ಕೋರಿ, ಗಂಗಾಧರ ಬಡ್ಡಿ, ನೀಲಕಂಠಪ್ಪ ನೆರೇಗಲ್ಲ, ಡಾ.ರಾಜು ಇಳಿಗೇರ, ಉಮೇಶ ಮಾಳಗಿಮನಿ, ಸುರೇಶ ಕುರಗೋಡಿ, ದೀಪಕ್ ಪುಕಾಳೆ, ರವಿ ಮಾಳಗಿಮನಿ, ಯಲ್ಲಪ್ಪ ಸಿಂಗಪುರ, ಮಹೇಶ ಪುಕಾಳೆ, ರಾಮಣ್ಣ ಕುರಗೋಡಿ, ರವಿ ಕುರಗೋಡಿ. ಅರ್ಚಕ ಕುಮಾರ ಪೂಜಾರ, ಸತೀಶ ವಳಗೇರಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ