ಚಿಂತಾಮಣಿ | ಕಾರು ಡಿವೈಡರ್ಗೆ ಡಿಕ್ಕಿ: ಮಗು ಸಾವು, ಐವರಿಗೆ ಗಾಯ
ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಚಿನ್ನಸಂದ್ರ ಬಳಿ ಸೋಮವಾರ ರಾತ್ರಿ ಕಾರೊಂದು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ 2 ವರ್ಷದ ಮಗು ಮೃತಪಟ್ಟಿದೆ.
ಮೃತ ಮಗು ರಶದಾನ್ ಆಲಿ (2). ಕಾರಿನ ಚಾಲಕ ಮೊಹ್ಮದ್ ಷರೀಫ್ ಹಾಗೂ ಕಾರಿನಲ್ಲಿದ್ದ ಸಬೀನಾಬಾನು, ಹೈದರ್ ಶರೀಫ್, ನಸರಿನ್ ತಾಜ್, ಶಾಹೀನಾ ಗಾಯಗೊಂಡಿದ್ದಾರೆ.ಚಿಂತಾಮಣಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಮಳೆಯಿಂದಾಗಿ ರಸ್ತೆ ಸರಿಯಾಗಿ ಕಾಣದೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.