ಬೆಳೆ ಪರಿಹಾರ ₹ 2,500 ಘೋಷಣೆ ಖಂಡಿಸಿ ರೈತರ ವಿನೂತನ ಪ್ರತಿಭಟನೆ

ಬೆಳೆ ಪರಿಹಾರ ₹ 2,500 ಘೋಷಣೆ ಖಂಡಿಸಿ ರೈತರ ವಿನೂತನ ಪ್ರತಿಭಟನೆ

ಬೆಳೆ ಪರಿಹಾರ ₹ 2,500 ಘೋಷಣೆ ಖಂಡಿಸಿ ರೈತರ ವಿನೂತನ ಪ್ರತಿಭಟನೆ

ಇಂಡಿ: ರಾಜ್ಯ ಸರ್ಕಾರ ರೈತರ ಪರಿಹಾರಕ್ಕಾಗಿ ₹ 2,500 ಬೆಳೆ ಪರಿಹಾರ ಮಾತ್ರ ಘೋಷಿಸಿರುವುದನ್ನು ಖಂಡಿಸಿ, ನೂರಾರು ರೈತರು, ರೈತ ಮುಖಂಡ ರಘುನಾಥ್ ನಡುವಿನಮನಿ ಅವರು ತೆಗೆಸಿರುವ ₹ 2,600 ಮೊತ್ತದ ಡಿಡಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ಉಪ ಕಂದಾಯ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ಡಿಡಿ ಸಲ್ಲಿಸಿ, ಬೆಳೆ ಪರಿಹಾರದ ಮೊತ್ತದ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.

ರೈತರ ಬರಗಾಲದ ಸಂಕಷ್ಟಗಳಿಗೆ ಸ್ಪಂದಿಸಿ, ವೈಜ್ಞಾನಿಕ ಬೆಳೆ ಪರಿಹಾರ ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ ರೈತರು ಇಂಡಿ ತಾಲ್ಲೂಕಿನಲ್ಲಿ ತೀವ್ರ ಬರಗಾಲದ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ನೀರಿನ ಕೊರತೆ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ವೈಜ್ಞಾನಿಕವಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಬೆಳೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಬೆಳೆ ವಿಮೆ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಿ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬರಗಾಲಕ್ಕೆ ಸಂಬಂಧಪಟ್ಟ ಇನ್ನಿತರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲ ರೈತರು ಆಗ್ರಹಿಸಿದರು.

ರೈತ ಮುಖಂಡ ಬಾಳು ಮುಳಜಿ, ಪ್ರಶಾಂತ ಲಾಳಸಂಗಿ, ವಿಜಯಕುಮಾರ ರಾಠೋಡ, ಶ್ರೀಶೈಲಗೌಡ ಪಾಟೀಲ, ಅಶೋಕ ಅಕಲಾದಿ, ಶಿವರಾಜ ಕೆಂಗಿನಾಳ, ಸಂತೋಷ ಪಾಟೀಲ, ಹಣಮಂತ ಹೂಗಾರ, ಶಾಂತು ಲಾಳಸಂಗಿ, ದುಂಡುಗೌಡ ಬಿರಾದಾರ, ಮುದಕಪ್ಪ ಹೊಟಗಿ, ಯಲ್ಲು ಇಂಗಳೆ, ಮುತ್ತು ತಾಂಬೆ, ಪ್ರಬಾಕರ ಘೋರ್ಪಡೆ, ಮಲ್ಲು ಬಳ್ಳಾರಿ, ಮಳಗು ಪೂಜಾರಿ, ಕೋನಪ್ಪ ಗುಂಡ್ಲ, ಸಾಗರ ಬಿರಾದಾರ, ನೀಲೇಶ ನಿಂಬಾಳ, ಸೈಯದ ಮುಲ್ಲಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ರೈತರು ತಮ್ಮ ಜಮೀನುಗಳಲ್ಲಿ ತೇವಾಂಶದ ಕೊರತೆಯಿಂದ ಒಣಗಿದ ಕಬ್ಬು, ತೊಗರಿ, ಶೇಂಗಾ, ಹತ್ತಿ ಮುಂತಾದ ಬೆಳೆಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ