
ಅಂತರರಾಷ್ಟ್ರೀಯ ಕಾಫಿ ದಿನ ಆಚರಣೆ: ಕಾಫಿ ಬೆಳೆಗೆ ಆದ್ಯತೆ ನೀಡಿ–ಬೋಪಣ್ಣ
ಸುಂಟಿಕೊಪ್ಪ: ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದಿಂದ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನ ಆಚರಿಸಲಾಯಿತು.
ಸ್ವಸ್ಥ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅತಿಥಿಗಳಿಂದ ಮಕ್ಕಳಿಗೆ ವಿಶೇಷ ಔತಣದ ಆಯೋಜನೆಯೊಂದಿಗೆ ದಿನವನ್ನು ಸಂತೋಷದಿಂದ ಆಚರಿಸಿದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆವ ಜುಥಿಕ ಬೋಪಣ್ಣ ಮಾತನಾಡಿ, ಕಾಫಿ ನಾಡು ಕೊಡಗಿನಲ್ಲಿ ಕಾಫಿ ಬೆಳೆ ಕುಸಿತ ಕಾಣುತ್ತಿದೆ. ಎಲ್ಲರೂ ಕಾಫಿ ಬೆಳೆಯವ ಬಗ್ಗೆ ಆಸಕ್ತಿ ವಹಿಸಬೇಕು. ಕಾಫಿ ನಮ್ಮ ಕೃಷಿ ಉದ್ಯೋಗವಾಗಿದೆ ಎಂದರು.
ಸುಂಟಿಕೊಪ್ಪ ಪ್ರಾಂತ್ಯದ ಮುಖ್ಯಸ್ಥೆ ಸುಮಾ ತಿಮ್ಮಯ್ಯ, ಕಾನೂರು ಪ್ರಾಂತ್ಯದ ಮುಖ್ಯಸ್ಥೆ ರಮ್ಯಾ ನರೇನ್ ಮತ್ತು ಸಂಘದ ಸದಸ್ಯರು, ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಶಿಕ್ಷಕರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.