ಗಡಿ ನುಸುಳುವಿಕೆಗೆ ಕುಮ್ಮಕ್ಕು: ಪಾಕಿಸ್ತಾನ ರಾಯಭಾರಿಗೆ ಸಮನ್ಸ್‌ ನೀಡಿದ ಭಾರತ

ಗಡಿ ನುಸುಳುವಿಕೆಗೆ ಕುಮ್ಮಕ್ಕು: ಪಾಕಿಸ್ತಾನ ರಾಯಭಾರಿಗೆ ಸಮನ್ಸ್‌ ನೀಡಿದ ಭಾರತ

ಗಡಿ ನುಸುಳುವಿಕೆಗೆ ಕುಮ್ಮಕ್ಕು: ಪಾಕಿಸ್ತಾನ ರಾಯಭಾರಿಗೆ ಸಮನ್ಸ್‌ ನೀಡಿದ ಭಾರತ

ನವದೆಹಲಿ: ಗಡಿಯಲ್ಲಿ ಅಕ್ರಮ ನುಸುಳುವಿಕೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ಮುಂದುವರಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, ಆ ದೇಶದ ಹಂಗಾಮಿ ರಾಯಭಾರಿ ಸಾದ್ ವಾರೈಚ್ ಅವರಿಗೆ ಶನಿವಾರ ಸಮನ್ಸ್‌ ನೀಡಿದೆ.

ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಗಡಿಯಲ್ಲಿ ತನ್ನ ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. 

ಪಂಜಾಬ್‌ನ ತರ್ನ್‌ ತರನ್‌ ಜಿಲ್ಲೆಯಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಶಂಕಿತ ನುಸುಳುಕೋರರಿಬ್ಬರನ್ನು ಬಿಎಸ್‌ಎಫ್‌ ಶನಿವಾರ (ಅಕ್ಟೋಬರ್ 2ರಂದು)  ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಿಂದ ನಿರಂತರವಾಗಿ ಅಕ್ರಮ ಗಡಿ ಒಳನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ವಿರೋಧಿಸಿ, ಆ ದೇಶದ ಹೈಕಮಿಷನ್‌ನ ಹಂಗಾಮಿ ರಾಯಭಾರಿಯನ್ನು ಕರೆಸಿ ಸಮನ್ಸ್‌ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ʼಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ  ಅಕ್ಟೋಬರ್ 2ರಂದು  ನಡೆದ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಡಿರುವ ಆಧಾರರಹಿತ, ಉದ್ದೇಶಪೂರ್ವಕ ಆರೋಪಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆʼ ಎಂದು ಹೇಳಿದೆ.

ಭಾರತದ ಗಡಿಯೊಳಗೆ ನುಸುಳಿದ್ದ ಮೂವರಿಗೆ ಪಾಕಿಸ್ತಾನಕ್ಕೆ ವಾಪಸ್‌ ಆಗುವಂತೆ ಬಿಎಸ್‌ಎಫ್‌ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದನ್ನು ಕಡೆಗಣಿಸಿ ಅವರು ಮುಂದುವರಿದಿದ್ದರು ಎಂದು ಪಾಕ್‌ ಅಧಿಕಾರಿಗೆ ಸಚಿವಾಲಯ ತಿಳಿಸಿದೆ.

ʼಶಂಕಿತರಿಂದ ಭದ್ರತಾ ಬೆದರಿಕೆ ಎದುರಾದ ಕಾರಣ ಬಿಎಸ್‌ಎಫ್ ಗುಂಡು ಹಾರಿಸಬೇಕಾಯಿತು. ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಶಸ್ತ್ರಸಜ್ಜಿತ ಮಾದಕವಸ್ತು ಕಳ್ಳಸಾಗಣೆ ಜಾಲಗಳು ಪದೇ ಪದೇ ಗಡಿ ನುಸುಳಲು ಪ್ರಯತ್ನಿಸುತ್ತಿವೆ ಎಂಬುದಕ್ಕೆ  ಈ ಪ್ರಕರಣ ಉದಾಹರಣೆಯಾಗಿದೆʼ ಎಂದೂ ಹೇಳಿದೆ.

ʼಗಡಿ ಒಳನುಸುಳುವಿಕೆ, ಮಾದಕವಸ್ತು ಕಳ್ಳಸಾಗಣೆ ಚಟುವಟಿಕೆಗಳು ಹಾಗೂ ಅವುಗಳ ಹಿಂದೆ ಪಾಕ್ ಗಡಿ ಕಾವಲು ಪಡೆಗಳು ಶಾಮೀಲಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಲಾಗಿದೆʼ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ