ಹಿಂದೂ ಯುವಕರು ಮದುವೆಯಾಗಿ ಐದು ಮಕ್ಕಳನ್ನು ಮಾಡಿಕೊಳ್ಳಿ: ಬಿಜೆಪಿ ಸಂಸದ ಗಜೇಂದ್ರ

ಹಿಂದೂ ಯುವಕರು ಮದುವೆಯಾಗಿ ಐದು ಮಕ್ಕಳನ್ನು ಮಾಡಿಕೊಳ್ಳಿ: ಬಿಜೆಪಿ ಸಂಸದ ಗಜೇಂದ್ರ

ಹಿಂದೂ ಯುವಕರು ಮದುವೆಯಾಗಿ ಐದು ಮಕ್ಕಳನ್ನು ಮಾಡಿಕೊಳ್ಳಿ: ಬಿಜೆಪಿ ಸಂಸದ ಗಜೇಂದ್ರ

ಬರ್ವಾನಿ (ಮಧ್ಯಪ್ರದೇಶ): ಹಿಂದೂ ಯುವಕರು ಮದುವೆಯಾಗಿ ಐದು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಖರ್ಗೋನ್-ಬರ್ವಾನಿ ಲೋಕಸಭಾ ಕ್ಷೇತ್ರದ ಸಂಸದ ಗಜೇಂದ್ರ ಸಿಂಗ್‌ ಪಟೇಲ್‌ ಹೇಳಿದ್ದಾರೆ.

ಈಗ ಹುಟ್ಟುತ್ತಿರುವ ನಾಲ್ಕು ಮಕ್ಕಳಲ್ಲಿ ಒಂದು ಹಿಂದೂ ಸಮುದಾಯದ್ದಾದರೆ, ಉಳಿದ ಮೂರು ಬೇರೆ ಸಮುದಾಯಗಳಿಗೆ ಸೇರಿದವು ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಮುಸ್ಲಿಂ ಸಮುದಾಯದವನ್ನು ಉದ್ದೇಶಿಸಿ ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಟೇಲ್‌, ತಾವು ʼಸನಾತನಿʼಯಾಗಿದ್ದು, ಇಂತಹ ಹೇಳಿಕೆ ನೀಡಲು ಹೆದರುವುದಿಲ್ಲ ಎಂದಿದ್ದಾರೆ.

ʼದೇಶದಲ್ಲಿ ಈಗ ಹುಟ್ಟುತ್ತಿರುವ ನಾಲ್ಕು ಮಕ್ಕಳಲ್ಲಿ ಒಂದು ಮಾತ್ರವೇ ಹಿಂದೂ ಸಮುದಾಯದ್ದು. ಉಳಿದ ಮೂರು ಇತರೆ ಸಮುದಾಯದವು. 1947ರಿಂದ 1967ರ ನಡುವೆ ಪರಿಸ್ಥಿತಿ ಹೀಗೆ ಇರಲಿಲ್ಲ. ಆದರೆ ಸ್ವಾತಂತ್ರ್ಯದ ನಂತರ ಒಂದು ಸಮುದಾಯದ ಜನಸಂಖ್ಯಾ ಪ್ರಮಾಣ ಕುಸಿದಿದ್ದರೆ, ಮತ್ತೊಂದು ಸಮುದಾಯದ್ದು ಏರುತ್ತಾ ಸಾಗಿದೆ. ಈ ಪರಿಸ್ಥಿತಿಯನ್ನು ಹಿಂದೂ ಯುವಕರು ಅರ್ಥಮಾಡಿಕೊಳ್ಳಬೇಕುʼ ಎಂದು ಒತ್ತಾಯಿಸಿದ್ದಾರೆ.

ʼಹಿಂದಿನವರು ನಾಲ್ಕು, ಐದು, ಆರು ಅಥವಾ ಏಳು ಮಕ್ಕಳನ್ನು ಹೊಂದಿರುತ್ತಿದ್ದರು. ಆಗೆಲ್ಲಾ 20, 21 ಇಲ್ಲವೇ 22ನೇ ವಯಸ್ಸಿಗೇ ಮದುವೆಯಾಗುತ್ತಿತ್ತು. ಇಂದು 30, 35 ಅಥವಾ 37ನೇ ವಯಸ್ಸಿನಲ್ಲೂ ಮದುವೆಗಳು ನಡೆಯುತ್ತಿವೆ. ಈಗಿನವರು ಒಂದೇ ಒಂದು ಮಗು ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಸನಾತನಿಗಳಲ್ಲಿ ಜನನ ದರ 1.9ಕ್ಕೆ ಇಳಿದಿದೆ. ಹೀಗಾಗಿ, ಯುವಕರು ಮದುವೆಯಾದ ನಂತರ ಐದು ಮಕ್ಕಳು ಮಾಡಿಕೊಳ್ಳಬೇಕುʼ ಎಂದು ಕರೆ ನೀಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ