ಜಂತರ್‌ಮಂತರ್‌ ಹೋರಾಟ ಸ್ವಾರ್ಥದ್ದು: ಗಾಂಧಿ ವಂಶಸ್ಥ ಶ್ರೀಕೃಷ್ಣ ಗಜಾನನ ಕುಲಕರ್ಣಿ

ಜಂತರ್‌ಮಂತರ್‌ ಹೋರಾಟ ಸ್ವಾರ್ಥದ್ದು: ಗಾಂಧಿ ವಂಶಸ್ಥ  ಶ್ರೀಕೃಷ್ಣ ಗಜಾನನ ಕುಲಕರ್ಣಿ

ಜಂತರ್‌ಮಂತರ್‌ ಹೋರಾಟ ಸ್ವಾರ್ಥದ್ದು: ಗಾಂಧಿ ವಂಶಸ್ಥ ಶ್ರೀಕೃಷ್ಣ ಗಜಾನನ ಕುಲಕರ್ಣಿ

ಮಂಗಳೂರು: ಜಂತರ್ ಮಂತರ್‌ನಲ್ಲಿ ಈಚೆಗೆ ನಡೆದ ಪ್ರತಿಭಟನೆಯು ಸ್ವಾರ್ಥಕ್ಕಾಗಿ ನಡೆದಿದ್ದು ಎಂದು ಮಹಾತ್ಮ ಗಾಂಧಿ ಅವರ ವಂಶಸ್ಥ ಶ್ರೀಕೃಷ್ಣ ಗಜಾನನ ಕುಲಕರ್ಣಿ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು, ತುಳು ಅಧ್ಯಯನ ಪೀಠ, ರಾಷ್ಟ್ರೀಯ ಸೇವಾ ಯೋಜನೆ, ಪುತ್ತೂರು ಕಜೆಮಾರು ಕೆಂದಬಾಡಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ‘ಗಾಂಧಿ ಮತ್ತು ವಿಶ್ವಶಾಂತಿ’ ಕುರಿತು ಉಪನ್ಯಾಸ ನೀಡಿದರು.

ಜಾಗತಿಕ ಸಂಘರ್ಷ, ಭಯೋತ್ಪಾದನೆ, ವೈಚಾರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿ ಇದ್ದಿದ್ದರೆ, ಅವರು ಭಗವದ್ಗೀತೆಯ ‘ವಸುಧೈವ ಕುಟುಂಬಕಂ’ ತತ್ವ ಅಳವಡಿಸಿಕೊಳ್ಳುವಂತೆ, ಪ್ರೇರೇಪಿಸುತ್ತಿದ್ದರು ಎಂದರು.

ಅಹಿಂಸೆ ಎನ್ನುವುದು ಹೇಡಿತನವಲ್ಲ. ಹೇಡಿತನ ಮತ್ತು ಹಿಂಸೆ ಇವೆರಡು ಸಂದರ್ಭ ಇದ್ದಾಗ ಗಾಂಧಿ ಹಿಂಸೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು..’ ಎಂಬ ಮಾತನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಗಾಂಧಿ ವಿಚಾರಧಾರೆಯವರು ಇದರ ಸರಿಯಾದ ಅರ್ಥವನ್ನು ಸಮಾಜಕ್ಕೆ ತಿಳಿಸಬೇಕು ಎಂದರು. ತಾವು ಗಾಂಧಿ ಅವರ ಮೂರನೇ ಮಗನ ಮಗಳು ಸುಮಿತ್ರಾ ಅವರ ಮಗ ಎಂದು ಸಭೆಗೆ ಅವರು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ