
ಮೂಡುಬಿದಿರೆಯಲ್ಲಿ ಅಪಘಾತ: ಗಾಯಾಳು ಯುವಕ ದೀಕ್ಷಿತ್ ಸಾವು
ಮೂಡುಬಿದಿರೆ: ಕೋಟೆಬಾಗಿಲಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಕೋಟೆ ಬಾಗಿಲಿನ ದೀಕ್ಷಿತ್ (18) ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.
ಈತ ಸ್ಥಳೀಯ ಚಂದು ಪೂಜಾರಿಯವರ ಪುತ್ರ. ಹೈಸ್ಕೂಲ್ ಶಿಕ್ಷಣ ಮುಗಿಸಿ ಖಾಸಗಿಯಾಗಿ ಕೆಲಸ ಮಾಡುತ್ತಿದ್ದ. ಸ್ಕೂಟಿಯಲ್ಲಿ ತನ್ನ ಸ್ನೇಹಿತ ಪ್ರಶ್ವಿತ್ನನ್ನು ಕುಳ್ಳಿರಿಸಿ ಕೊಂಡು ಕೋಟೆಬಾಗಿಲಿನಿಂದ ಮೂಡುಬಿದಿರೆ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಪ್ರಶ್ವಿತ್ ಸ್ಥಳದಲ್ಲೆ ಮೃತಪಟ್ಟಿದ್ದ. ಅಂತ್ಯಸಂಸ್ಕಾರ ಗುರುವಾರ ನಡೆಯಿತು. ಮಕ್ಕಳನ್ನು ಕಳೆದುಕೊಂಡ ಎರಡು ಕುಟುಂಬದ ಪೋಷಕರ ರೋದನ ಮುಗಿಲು ಮುಟ್ಟಿತ್ತು.