Daily Horoscope : ಇಂದ್ರ ಯೋಗದಿಂದ ಈ ರಾಶಿಯವರ ಸಮಸ್ಯೆಗಳಿಗೆ ಪರಿಹಾರ ; ಹೆಚ್ಚುವುದು ಆದಾಯದ ಮೂಲ

Daily Horoscope : ಇಂದ್ರ ಯೋಗದಿಂದ ಈ ರಾಶಿಯವರ ಸಮಸ್ಯೆಗಳಿಗೆ ಪರಿಹಾರ ; ಹೆಚ್ಚುವುದು ಆದಾಯದ ಮೂಲ

Daily Horoscope : ಇಂದ್ರ ಯೋಗದಿಂದ ಈ ರಾಶಿಯವರ ಸಮಸ್ಯೆಗಳಿಗೆ ಪರಿಹಾರ ; ಹೆಚ್ಚುವುದು ಆದಾಯದ ಮೂಲ

Daily Horoscope : ಇಂದು ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ತಿಥಿ ಬೆಳಿಗ್ಗೆ 7.45 ರವರೆಗೆ ಇರುತ್ತದೆ. ನಂತರ ಋಷಿ ಪಂಚಮಿ ತಿಥಿ ಪ್ರಾರಂಭವಾಗುವುದು. ಸ್ವಾತಿ ನಕ್ಷತ್ರವು ಮಧ್ಯಾಹ್ನ 3.21 ರವರೆಗೆ ಇರುತ್ತದೆ. ನಂತರ ವಿಶಾಖ ನಕ್ಷತ್ರವು ಪ್ರಾರಂಭವಾಗುವುದು. ಇವತ್ತು ಇಂದ್ರ ಯೋಗ, ಬುಧಾದಿತ್ಯ ಯೋಗ ಮತ್ತು ನಿರ್ದಿಷ್ಟ ರಾಶಿಯವರಿಗೆ ಮಾಲವ್ಯ ಮತ್ತು ಭದ್ರ ಯೋಗದ ಉತ್ತಮ ಸಂಯೋಜನೆಯು ರೂಪುಗೊಳ್ಳುತ್ತಿದೆ.

ಮೇಷ ರಾಶಿ (Aries):
ಇಂದ್ರ ಯೋಗವು ವಿದೇಶಿ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ. ಮಧ್ಯಾಹ್ದ ಹೊತ್ತಿಗೆ ಅನಿರೀಕ್ಷಿತ ಶುಭ ಸುದ್ದಿ ಕೇಳಿ ಬರುವುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಬಗ್ಗೆ ಸೀರಿಯಸ್‌ ಇರಬೇಕು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಸಂತೋಷವಾಗಿರುವಿರಿ. ಲಾಭ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ವೃಷಭ ರಾಶಿ (Taurus):
ಇಂದ್ರ ಯೋಗದ ಕಾರಣ ನ್ಯಾಯಾಲಯದ ಪ್ರಕರಣಗಳು ಮತ್ತು ಕಾನೂನು ಹೋರಾಟಗಳನ್ನು ಗೆಲ್ಲಲು ಸಹಾಯವಾಗುವುದು. ಕೆಲಸದಲ್ಲಿ ಚುರುಕಾಗಿರಿ. ಪೋಷಕರ ಬೆಂಬಲದಿಂದ ಹೆಚ್ಚಿನ ಲಾಭವಾಗುವುದು. ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಆದಾಯದ ಮೂಲಗಳು ಸ್ಥಿರವಾಗಿರುವುದು.

ಮಿಥುನ ರಾಶಿ (Gemini):
ಇಂದ್ರ ಯೋಗದ ಪ್ರಭಾವದಿಂದ ನಿಮ್ಮ ಆದಾಯ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಸಂತೋಷಗೊಳ್ಳುವರು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಲಾಭ ಪಡೆಯುವರು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಲಾಭ ಹೆಚ್ಚಾದಂತೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಕಟಕ ರಾಶಿ (Cancer):
ನಿಮಗೆ ಅರಿವಿಲ್ಲದ ವ್ಯವಹಾರದಲ್ಲಿ ನಿಮ್ಮ ಬಂಡವಾಳವನ್ನು ಹೂಡಿಕೆ ಮಾಡಬೇಡಿ. ಸಣ್ಣ ವಿಷಯಗಳ ಮೇಲೆ ಒತ್ತಡ ಹೇರಬೇಡಿ. ಇದು ನಿಮ್ಮ ವ್ಯವಹಾರ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು. ಕೆಲಸದಲ್ಲಿ ಗೊಂದಲ ಉಂಟಾಗಬಹುದು. ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದಕ್ಕೆ ಇಳಿಯಬೇಡಿ. ಭೂಮಿ ಮತ್ತು ವಾಹನಗಳಿಗಾಗಿ ಹಣ ಖರ್ಚಾಗಬಹುದು.

ಸಿಂಹ ರಾಶಿ (Leo) :
ದೀರ್ಘಕಾಲದಿಂದ ಆಸ್ತಿ ಅಥವಾ ಹಣಕಾಸಿನ ವಹಿವಾಟಿನಲ್ಲಿ ಎದುರಾಗಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಹೂಡಿಕೆ ಮಾಡುವ ಯೋಚನೆಯಿದ್ದರೆ ಒಂದೆರಡು ದಿನಗಳವರೆಗೆ ಮುಂದೂಡುವುದು ಬುದ್ಧಿವಂತಿಕೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುವುದು. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಆದಾಯದ ಮೂಲ ಹೆಚ್ಚಾಗುವುದು.

ಕನ್ಯಾರಾಶಿ (Virgo):
ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಾಗುವುದು. ಬಹುರಾಷ್ಟ್ರೀಯ ಕಂಪನಿಯಿಂದ ಅತ್ಯುತ್ತಮ ಆಫರ್‌ ಬರುವುದು. ಮದುವೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ತುಲಾ ರಾಶಿ (Libra):
ಇಂದ್ರ ಯೋಗವು ವ್ಯವಹಾರ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುವುದು. ಕಚೇರಿ ರಾಜಕೀಯದಿಂದ ಸಾಧ್ಯವಾದಷ್ಟು ದೂರವಿರಿ. ನಿಮ್ಮ ಕೆಲಸದ ಮೇಲೆ ಗಮನಹರಿಸಿ. ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು.

ವೃಶ್ಚಿಕ ರಾಶಿ (Scorpio):
ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಚೇರಿಯಲ್ಲಿ ಅನಗತ್ಯ ವಿವಾದಗಳಿಂದ ದೂರವಿರಿ. ವೈವಾಹಿಕ ಜೀವನದಲ್ನ ಸಮಸ್ಯೆಗಳು ಪರಿಹಾರವಾಗುವುದು. ಅನಿರೀಕ್ಷಿತ ಖರ್ಚುಗಳ ಬಗ್ಗೆ ಜಾಗರೂಕರಾಗಿರಿ.

ಧನು ರಾಶಿ (Sagittarius):
ಇಂದ್ರ ಯೋಗದ ಕಾರಣದಿಂದ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭವಾಗುವುದು. ಉದ್ಯೋಗ ಬದಲಾವಣೆಯನ್ನು ಪರಿಗಣಿಸುತ್ತಿರುವವರಿಗೆ ಹೆಚ್ಚಿನ ಪ್ಯಾಕೇಜ್‌ನೊಂದಿಗೆ ಆಫರ್ ಲೆಟರ್ ಸಿಗಬಹುದು. ಸಾಮಾಜಿಕ ಚಟುವಟಿಕೆ ಹೆಚ್ಚಾಗುವುದು. ಪ್ರೇಮ ಸಂಬಂಧಗಳು ಗಾಢವಾಗುವುದು. ಹೆತ್ತವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ಹಿತೈಷಿಗಳ ಬೆಂಬಲವು ಗಮನಾರ್ಹ ಆರ್ಥಿಕ ಲಾಭಗಳನ್ನು ತರುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುವುದು. ಆರೋಗ್ಯವು ಅತ್ಯುತ್ತಮವಾಗಿರುವುದು.

ಮಕರ ರಾಶಿ (Capricorn):
ಹೊಸ ಮಳಿಗೆ ತೆರೆಯಲು ಅತ್ಯಂತ ಶುಭ ಸಮಯ. ಕೆಲಸದಲ್ಲಿ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ನಿಕಟ ಸಂಬಂಧಿಗಳೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿನ ನೆಮ್ಮದಿ ಹೆಚ್ಚುವುದು. ಸಾರ್ವಜನಿಕ ಸಂಪರ್ಕ ಮತ್ತು ವ್ಯವಹಾರಗಳು ಉತ್ತಮ ಆರ್ಥಿಕ ಲಾಭವನ್ನು ನೀಡುವುದು. ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುವುದು.

ಕುಂಭ ರಾಶಿ (Aquarius):
ಹಳೆಯ ಹೂಡಿಕೆಗಳ ಮೇಲೆ ದೊಡ್ಡಮಟ್ಟದ ಲಾಭವನ್ನು ಪಡೆಯುವಿರಿ. ವ್ಯವಹಾರದಲ್ಲಿಯೂ ಹೆಚ್ಚಿನ ಲಾಭವಾಗುವುದು. ಹೊಸ ಉದ್ಯಮಿಗಳು ವ್ಯರ್ಥವಾಗಿ ಹಣ ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಅನಿರೀಕ್ಷಿತವಾಗಿ ಹಣಕಾಸಿನ ಲಾಭವಾಘುವುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು.

ಮೀನ ರಾಶಿ(Pisces) :
ಸೋಮಾರಿತನ ಬಿಟ್ಟು ಕೆಲಸ ಮಾಡಿ. ಅಜಾಗರೂಕತೆ ನಿಮ್ಮ ಪ್ರಗತಿಗೆ ಅಡ್ಡಿಯಾಗಲು ಬಿಡಬೇಡಿ. ಮೇಲಧಿಕಾರಿಗಳೊಂದಿಗೆ ಸಂವಹನ ನಡೆಸುವಾಗ ಸಂಯಮವನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ವಿಷಯಗಳನ್ನು ಪರಿಹರಿಸುವಾಗ ತಾಳ್ಮೆಯಿಂದಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅತ್ಯಗತ್ಯ.

horoscope zodiac sign

horoscope zodiac sign

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ