
Daily Horoscope: ಚೌತಿ ದಿನ ಈ 4 ರಾಶಿಯವರ ಮೇಲೆ ಗಣೇಶನ ಆಶೀರ್ವಾದ; ಅಡೆತಡೆ ನಿವಾರಣೆ, ದಿನ ಭವಿಷ್ಯ
Daily Horoscope: ಇಂದು ಸೋಮವಾರ ಶುಕ್ಷ ಪಕ್ಷದ ಗಣೇಶ ಚತುರ್ಥಿಯ ದಿನ. ಇವತ್ತು ಮಧ್ಯಾಹ್ನ 1.55 ರವರೆಗೆ ಚೈತ್ರ ನಕ್ಷತ್ರ ಇರುವುದು. ನಂತರ ಸ್ವಾತಿ ನಕ್ಷತ್ರ ಆರಂಭವಾಗುವುದು. ಇಂದು ಗಣೇಶ ಚತುರ್ಥಿ ಜೊತೆಗೆ ಭದ್ರ, ರವಿ ಯೋಗ ಮತ್ತು ವಿಡಾಲ ಯೋಗವಿರುವುದು.
ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಕೆಲಸವನ್ನು ಪೂರ್ಣಗೊಳಿಸುವಿರಿ. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ. ಹೊಸ ಕೆಲಸ ಮಾಡುಹವಾಗ ಎಚ್ಚರ ಇರಲಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ.
ಇಂದಿನ ದಿನ ಲಾಭದಾಯಕವಾಗಿರುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಆರೋಗ್ಯವು ಉತ್ತಮವಾಗಿರುವುದು. ಎಂದಿಗಿಂತ ಎರಡು ಪಟ್ಟು ಹೆಚ್ಚು ಶ್ರಮಿಸಬೇಕಾಗುವುದು.
ಇಂದು ಸಂತೋಷದಿಂದ ತುಂಬಿದ ದಿನವಾಗಿರುವುದು. ನಿಂತು ಹೋಗಿರುವ ಕೆಲಸ ಮತ್ತೆ ಆರಂಭವಾಗುವುದು. ಮಹಿಳೆಯರಿಗೆ ಇಂದು ಉತ್ತಮ ದಿನವಾಗಿರುವುದು. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವ್ಯವಹಾರ ವಿಸ್ತರಣೆಗೆ ಉತ್ತಮ ಅವಕಾಶ ಸಿಗುವುದು.
ಕರ್ಕಾಟಕ ರಾಶಿ (Cancer)
ಇಂದು ನಿಮ್ಮ ಪಾಲಿನ ಅದೃಷ್ಟದ ದಿನವಾಗಿರುವುದು. ಸಂಬಳ ಹೆಚ್ಚಾಗುವುದು. ಆರ್ಥಿಕ ಸಮಸ್ಯೆಗಳು ಹೆಚ್ಚಾಗುವುದು. ಭಾವನಾತ್ಮಕವಾಗಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ಹೊಸ ಕೆಲಸ ಆರಂಭಿಸಲು ದಿನ ಸೂಕ್ತವಾಗಿದೆ. ಸ್ನೇಹಿತರೊಂದಿಗೆ ಪಿಕ್ನಿಕ್ಗೆ ತೆರಳುವ ಸಾಧ್ಯತೆ ಇದೆ.
ಆಸ್ತಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಹಿಂದೆ ಮಾಡಿರುವ ಹೂಡಿಕೆಯಿಂದ ಹೆಚ್ಚಿನ ಲಾಭವಾಗುವುದು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಶೀಘ್ರದಲ್ಲೇ ಉತ್ತಮ ಕೆಲಸದ ಆಫರ್ ಸಿಗುವುದು. ವೈವಾಹಿಕ ಜೀವನವು ಸಂತೋಷವಾಗಿರುವುದು.
ಇಂದು ನಿಮಗೆ ತುಂಬಾ ಸಂತೋಷದ ದಿನವಾಗಿರುವುದು. ಕೆಲಸವನ್ನು ಪೂರ್ಣಗೊಳಿಸಲು ಸ್ನೇಹಿತರ ಸಹಾಯವನ್ನು ಪಡೆಯಬೇಕಾಗಬಹುದು. ಕನಸುಗಳನ್ನು ನನಸಾಗಿಸಲು ಶಕ್ತಿಮೀರಿ ಶ್ರಮಿಸುವಿರಿ. ದಿನವನ್ನು ಸಂತೋಷದಿಂದ ಕಳೆಯುವಿರಿ.
ಇಂದು ದಿನ ಉತ್ತಮವಾಗಿರಲಿದೆ. ಕೌಟುಂಬಿಕ ಸೌಲಭ್ಯಗಳ ಜೊತೆಗೆ, ಖರ್ಚುಗಳು ಕೂಡಾ ಹೆಚ್ಚಾಗಬಹುದು. ವೃತ್ತಿಜೀವನದ ಪ್ರಗತಿಗೆ ಅವಕಾಶ ಸಿಗುವುದು. ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಯಶಸ್ಸು ಸಿಗುವುದು. ಆರೋಗ್ಯದ ದೃಷ್ಟಿಯಿಂದ, ದಿನ ಉತ್ತಮವಾಗಿರುವುದು.
ವೃಶ್ಚಿಕ ರಾಶಿ (Scorpio)
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಜವಳಿ ಉದ್ಯಮದಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶವಿರುವುದು. ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ, ಇಲ್ಲವಾದರೆ ವಿರೋಧಿಗಳು ಅವುಗಳ ಲಾಭ ಪಡೆಯಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದು.
ಧನು ರಾಶಿ (Sagiattarius)
ಇವತ್ತು ನಿಮಗೆ ಮಿಶ್ರ ಫಲ ಸಿಗುವುದು. ಪೂರ್ವಜರ ಆಸ್ತಿಯಿಂದ ಪ್ರಯೋಜನವಾಗುವುದು. ಕೆಲಸಕ್ಕಾಗಿ ಬೇರೆ ನಗರಕ್ಕೆ ಪ್ರಯಾಣಿಸಬೇಕಾಗಬಹುದು. ಇಂದು ಕೆಲಸದ ಒತ್ತಡ ಹೆಚ್ಚಾಗುವುದು. ಇದರಿಂದ ಆಯಾಸ ಹೆಚ್ಚಾಗುವುದು.
ಕುಟುಂಬ ಸಮಾರಂಭದಲ್ಲಿ ಭಾಗವಹಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ನೀವು ಇಂದು ಮಾಡುವ ಕೆಲಸದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಇಂದು ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಹೊಸ ಉದ್ಯೋಗಾವಕಾಶಗಳು ಸಿಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಶೀಘ್ರದಲ್ಲೇ ಯಶಸ್ಸು ಸಾಧಿಸುವರು. ಹೊಸ ಕೆಲಸದ ಬಗ್ಗೆ ಯೋಚಿಸಲು ಸಾಕಷ್ಟು ಅವಕಾಶ ಸಿಗುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಬೆಂಬಲ ಸಿಗುವುದು. ಬಡ್ತಿ ಸಿಗುವುದು.
ಇಂದು ನಿಮಗೆ ಒಳ್ಳೆಯ ದಿನವಾಗಿರುವುದು. ವ್ಯವಹಾರ ಸಂಬಂಧಗಳು ಬಲಗೊಳ್ಳುವುದು. ಇದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವಾಗುವುದು. ಅನಗತ್ಯ ಮಾತುಕತೆಯಲ್ಲಿ ತೊಡಗಬೇಡಿ. ಉದ್ಯಮಿಗಳಿಗೆ ಇಂದು ಉತ್ತಮ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.