
ಮೂಡುಬಿದಿರೆ ಕನ್ನಡ ಭವನದಲ್ಲಿ ಇಂದು 'ಅಪ್ಪೆ' ನಾಟಕ ಪ್ರದರ್ಶನ
ಮೂಡುಬಿದಿರೆ: ಕುರಾಲ್ ಕಲಾವಿದೆರ್ ಬೆದ್ರ ತಂಡದ ತುಳು ನಾಟಕ ‘ಅಪ್ಪೆ’ಯ ಉಚಿತ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮ ಸೆ. 9ರಂದು ಸಂಜೆ 7ಕ್ಕೆ ಇಲ್ಲಿನ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ತಂಡದ ಮುಖ್ಯಸ್ಥೆ ಬಾಲಿಕ ಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸಾದ್ ಆಳ್ವ ಸಾರಥ್ಯದ ಈ ನಾಟಕಕ್ಕೆ ಕಲಾವಿದ ಯೋಗೀಶ್ ಪೂಜಾರಿ ಪೇರಲ್ಕೆ ನಿರ್ದೇಶನ ನೀಡಿದ್ದು, ಚೇತನ್ ಕಾಶಿಪಟ್ಣ ಸಾಹಿತ್ಯ ರಚಿಸಿದ್ದಾರೆ ಎಂದರು. ಸೆ. 9ರಂದು ಸಂಜೆ 7ಕ್ಕೆ ನಡೆಯುವ ಸಭಾಕಾರ್ಯಕ್ರಮದ ಬಳಿಕ ಉಚಿತ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.