ಇರಾನ್ ಮೇಲೆ ಅಮೆರಿಕ ಮತ್ತೆ ಭೀಕರ ದಾಳಿ: ಮದುವೆ ಮನೆ ಮೇಲೆ ಆಕ್ರಮಣ, ಹಲವರ ಸಾವು

ಇರಾನ್ ಮೇಲೆ ಅಮೆರಿಕ ಮತ್ತೆ ಭೀಕರ ದಾಳಿ: ಮದುವೆ ಮನೆ ಮೇಲೆ ಆಕ್ರಮಣ, ಹಲವರ ಸಾವು

ಇರಾನ್ ಮೇಲೆ ಅಮೆರಿಕ ಮತ್ತೆ ಭೀಕರ ದಾಳಿ: ಮದುವೆ ಮನೆ ಮೇಲೆ ಆಕ್ರಮಣ, ಹಲವರ ಸಾವು

ಇರಾನ್ ಮೇಲೆ ಅಮೆರಿಕ ಮಂಗಳವಾರ ಮತ್ತೆ ದಾಳಿ ನಡೆಸಿದೆ. ಹೊರ್ಮುಜ್ ವಲಯದಲ್ಲಿರುವ ಹಡುಗಗಳ ಮೇಲೆ ಹಾಗೂ ಸೇನಾ ಪಡೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಇರಾನ್‌ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಇದಕ್ಕೆ ಇರಾನ್ ಪ‍್ರತ್ಯುತ್ತರ ನೀಡಿದ್ದು, ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾಗಿ ರೆವಲ್ಯೂಷನರಿ ಗಾರ್ಡ್ (ಐಆಎರ್‌ಜಿಸಿ) ಹೇಳಿದೆ. ಅಲ್ಲದೆ ಘೋರ ಪ್ರತೀಕಾರ ತೀರಿಸುವ ಎಚ್ಚರಿಕೆಯೂ ನೀಡಿದೆ.

ಸಂಘರ್ಷ ವಿಸ್ತರಿಸುವ ಆತಂಕ

ಒಂದು ತಿಂಗಳು ಶಾಂತವಾಗಿದ್ದ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಅಮೆರಿಕ–ಇರಾನ್ ಪರಸ್ಪರ ದಾಳಿ ನಡೆಸಿದ್ದವು. ಈಗ ನಡೆದ ದಾಳಿಯು ತೀವ್ರ ಸ್ವರೂಪದ್ದು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ವಿವಾಹ ನಡೆಯುತ್ತಿದ್ದ ಸ್ಥಳದಲ್ಲಿದ್ದ ನಾಗರಿಕರು, ಇರಾನ್‌ನ ಅಧಿಕಾರಿಗಳು ದಾಳಿಯಿಂದಾಗಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಉಭಯ ರಾಷ್ಟ್ರಗಳ ಸಂಘರ್ಷ ಆರಂಭವಾಗಿ ಆರು ತಿಂಗಳಾಗಿದ್ದು, ಈ ಸಂಘರ್ಷ ಮತ್ತೆ ವಿಸ್ತರಿಸುವ ಬಗ್ಗೆ ಆತಂಕ ಎದುರಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಹೊರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು ಇರಿಸುವ ಇರಾನ್‌ನ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು, ಬೃಹತ್ ಹಾಗೂ ಪ್ರಬಲ ದಾಳಿ ನಡೆಸಲಾಗಿದೆ. ಒಂದು ವೇಳೆ ಇದಕ್ಕೆ ಪ್ರತಿದಾಳಿ ನಡೆಸಲು ವಿಫಲ ರಾಷ್ಟ್ರ ಇರಾನ್ ಯತ್ನಿಸಿದರೆ, ಇದಕ್ಕೂ ತೀವ್ರ ಸ್ವರೂಪದ ದಾಳಿ ನಡೆಸಲಾಗುವುದು’ ಎಂದು ಬರೆದುಕೊಂಡಿದ್ದಾರೆ.

ವಾಯು ರಕ್ಷಣಾ ಹಾಗೂ ರಡಾರ್ ವ್ಯವಸ್ಥೆ, ಸಮುದ್ರ ಆಸ್ತಿಗಳು, ಸ್ಫೋಟಕ ಇರಿಸುವ ಸಾಮರ್ಥ್ಯದ ಹಾಗೂ ಸಂವಹನ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಹೊರ್ಮುಜ್ ಜಲಸಂಧಿಯ ‍‍ಪೂರ್ವ ಭಾಗದಲ್ಲಿರುವ ಚಬಾಹಾರ್ ಹಾಗೂ ಕೊನಾರಕ್ ಬಂದರು ನಗರಗಳ ಮೇಲೆ ದಾಳಿ ನಡೆದಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ತಿಳಿಸಿದೆ. ಇರಾನ್‌ನ ದಕ್ಷಿಣದ ನಗರವಾದ ಬಂದರ್ ಅಬ್ಬಾಸ್‌ನ ವಿವಿಧ ಪ್ರದೇಶಗಳನ್ನು, ಕ್ವೆಶ್ಮ್ ದ್ವೀಪದ ವಾಣಿಜ್ಯ ಏರ್‌ಪೋರ್ಟ್ ಹಾಗೂ ಸಿರಿಕ್ ಹಾಗೂ ಜಸ್ಕ್ ನಗರಗಳನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಇರಾನ್‌ನ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿಯಿಂದ ತೀವ್ರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಹೆಸ್ಟಾಕ್ ನಗರದಲ್ಲಿ ಮದುವೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆದಿದೆ ಎಂದು ಹೊರ್ಮೊಜ್ಗನ್ ಪ್ರಾಂತ್ಯದ ಉಪ ಗವರ್ನರ್‌ ಅಹ್ಮದ್ ನಫೀಸಿ ಸರ್ಕಾರಿ ಮಾಧ್ಯಮದೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ದಾಳಿಯಿಂದಾಗಿ ಒಂದು ಮಗು ಸಹಿತ ನಾಲ್ಕು ಮಂದಿ ಮೃತಪಟ್ಟಿದ್ದಾರೆ, 53 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ.

ಈ ವರದಿಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿರುವ ಯು.ಎಸ್. ಸೆಂಟ್ರಲ್ ಕಮಾಂಡ್, ‘ಐಆರ್‌ಜಿಸಿಯ ಹಾಗೆ ನಾವು ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ’ ಎಂದು ಹೇಳಿದೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ