
ಚಾಮರಾಜನಗರ: ದಸರಾ ಕ್ರೀಡಾಕೂಟದಲ್ಲಿ ಮನು, ದೇವಮಣಿ ಮಿಂಚಿನ ಓಟ
ಚಾಮರಾಜನಗರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿವಿಜೇತರಾಗಿ ಜಿಲ್ಲಾಮಟ್ಟಕ್ಕೆಆಯ್ಕೆಯಾಗಿದ್ದ ಪ್ರತಿಭಾನ್ವಿತ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ವಿಜೇತರಾಗಿ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.
ಫಲಿತಾಂಶ: ಪುರುಷರ ವಿಭಾಗ: ನೆಟ್‌ಬಾಲ್; ಕೊಳ್ಳೇಗಾಲ–1, ವಾಲಿಬಾಲ್; ಪಿಡಬ್ಲ್ಯುಡಿ ಚಾಮರಾಜನಗರ–1, ಕೊಳ್ಳೇಗಾಲ–2, ಕಬಡ್ಡಿ; ಯಳಂದೂರು–1, ಚಾಮರಾಜನಗರ–2, ಕೊಕ್ಕೊ;ಹನೂರು–1, ಚಾಮರಾಜನಗರ–2, ಥ್ರೋಬಾಲ್;ಗುಂಡ್ಲುಪೇಟೆ–1, ಕೊಳ್ಳೇಗಾಲ–2, ಫುಟ್‌ಬಾಲ್; ಚಾಮರಾಜನಗರ–1, ಬಾಸ್ಕೆಟ್‌ಬಾಲ್; ಚಾಮರಾಜನಗರ–1, ಹ್ಯಾಂಡ್‌ಬಾಲ್; ಚಾಮರಾಜನಗರ–1, ಟೇಬಲ್ ಟೆನ್ನಿಸ್ ಡಬಲ್ಸ್; ಶ್ರೀಧರ್, ರೋಹಿತ್ ರಾಜ್–1.
200 ಮೀ ಓಟ; ಎಸ್.ಮನು–1, ದೀಪಕ್;2, 400 ಮೀ ಓಟ;ಮನೋಜ್–1, ನಂದೀಶ್–2, 100 ಮೀ ಓಟ; ಎಸ್.ಮನು–1, ಮನೋಜ್–2, 5000 ಮೀ ಓಟ; ಮನೋಹರ್–1, ಕೆ.ಎಸ್.ಮನು–2, 1500 ಮೀ ಓಟ; ಮಹದೇವ ಪ್ರಸಾದ್ ಆರ್,–1, ಎಂ.ಎನ್.ಅಭಿನವ್–2, 800 ಮೀ ಓಟ; ಮಹದೇವ ಪ್ರಸಾದ್–1, ಪ್ರವೀಣ್ ಸಿ–2.
ವುಷು 60 ಕೆ.ಜಿ; ವೆಂಕಟೇಶ್ ರಾಜೇಅರಸ್; 1, ಎನ್.ರಾಹುಲ್–2, ವುಷು 48 ಕೆ.ಜಿ; ಜೀವನ್ ಪ್ರಸಾಸ್–1, ಚೇತನ್–2, 50 ಕೆ.ಜಿ; ಜೀವನ್ ಪ್ರಸಾದ್–1, 75 ಕೆ.ಜಿ; ಎಂ.ಶ್ರೇಯಸ್–1, 80 ಕೆ.ಜಿ; ಲಿಖಿತ್–1, ಕರಾಟೆ ಕಟ; ವಿಜಯ್–1, ಕರಾಟೆ ಕುಮಿಟೆ 55 ಕೆಜಿ; ಚೇತನ್–1, 60 ಕೆ.ಜಿ; ಮಂಜುನಾಥ್–1, ಕುಮಿಟೆ 67 ಕೆ.ಜಿ;ಗೌತಮ್–1, 75 ಕೆ.ಜಿ; ಉಮೇಶ್–1, 84 ಕೆ.ಜಿ; ಲಿಖಿತ್–1.
ಯೋಗ ಸಾಂಪ್ರದಾಯಿಕ; ಇಂದ್ರೇಶ್–1, ಮಂಜು–2, ಯೋಗ ಕಲಾತ್ಮಕ ಜೋಡಿ; ತಮಿಳ್ ಸೆಲ್ವನ್, ಚಂದು–1, ಯೋಗ ವೈಯಕ್ತಿಕ– ಭುನ್ ಕುಮಾರ್.
ಮಹಿಳೆಯರ ವಿಭಾಗ: ವಾಲಿಬಾಲ್; ಗುಂಡ್ಲುಪೇಟೆ–1, ಹನೂರು–2, ಕಬಡ್ಡಿ; ಗುಂಡ್ಲುಪೇಟೆ–1, ಹನೂರು–2, ಕೊಕ್ಕೊ; ಕೊಳ್ಳೇಗಾಲ, ಥ್ರೋಬಾಲ್; ಚಾಮರಾಜನಗರ–1, ಬಾಸ್ಕೆಟ್‌ಬಾಲ್; ಚಾಮರಾಜನಗರ–1, ಟೇಬಲ್ ಟೆನ್ನಿಸ್ ಡಬಲ್ಸ್; ಅಪೂರ್ವ, ಸುಶ್ಮಿತಾ, 800 ಮೀ ಓಟ; ದೇವಮಣಿ–1, ಅಮೂಲ್ಯ–2, 400 ಮೀ ಓಟ; ಪ್ರಗತಿ–1, ಶಾಲಿನಿ–2, 200 ಮೀ ಓಟ; ಆಲಿಯಾ ಜಾಸ್ಮಿನ್–1, ವರ್ಷಿಣಿ–2, 100 ಮೀ ಓಟ; ಆಲಿಯಾ ಜಾಸ್ಮಿನ್–1, ವರ್ಷಣಿ–2.
3000 ಮೀ ಓಟ; ಎಂ.ಮಂದಾರ–1, ಡಿ.ಆರ್.ಪ್ರೀತಿ–2, 1500 ಮೀ ಓಟ–ದೇವಮಣಿ–1, ಪ್ರಭಾವತಿ–2, ಕರಾಟೆ ಕಟ; ಸುಪ್ರಿಯಾ, ಕುಮಿಟೆ 55ಕೆ.ಜಿ; ವಿಮಾ–1, 68 ಕೆ.ಜಿ; ಕವನಾ, ಯೋಗ ಸಾಂಪ್ರದಾಯಿಕ; ಶಶಿಕಲಾ–1, ಯೋಗ ಕಲಾತ್ಮಕ; ಪವಿತ್ರಾ–1, ಯೋಗ ಕಲಾತ್ಮಕ ಜೋಡಿ; ಸೌಮ್ಯಾ ಹಾಗೂ ಪವಿತ್ರಾ–1, ಯೋಗ ಲಯಬದ್ಧ ಜೋಡಿ; ನಳಿನಶ್ರೀ ಹಾಗೂ ಶಶಿಕಲಾ–1.
ವಿಭಾಗೀಯ ಮಟ್ಟ: ಸೆ.26ರಿಂದ ಮಂಗಳೂರು, ಉಡುಪಿ, ಹಾಸನ ಹಾಗೂ ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಕ್ರೀಡಾಕೂಟಗಳು ಆರಂಭವಾಗಲಿವೆ. ಇಲ್ಲಿ ವಿಜೇತರಾದವರು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಆರ್.ಗಿರೀಶ್, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ ಪ್ರಸಾದ್ ಉಪಸ್ಥಿತರಿದ್ದರು.
ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ವಿಭಾಗೀಯ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಪಡೆದು ಜಿಲ್ಲೆಗೆ ಕೀರ್ತಿ ತರಬೇಕು
– ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ