ಗಣಿಗಾರಿಕೆ ತ್ಯಾಜ್ಯಕ್ಕೂ ಬಂತು ‘ಮೌಲ್ಯ’

ಗಣಿಗಾರಿಕೆ ತ್ಯಾಜ್ಯಕ್ಕೂ ಬಂತು ‘ಮೌಲ್ಯ’

ಗಣಿಗಾರಿಕೆ ತ್ಯಾಜ್ಯಕ್ಕೂ ಬಂತು ‘ಮೌಲ್ಯ’

ಬಳ್ಳಾರಿ: ಕಬ್ಬಿಣದ ಅದಿರಿನ ಗಣಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಬಳಕೆಗೆ ಇದ್ದ ಕಠಿಣ ನಿಯಮಗಳನ್ನು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಡಿಲಿಸಿದೆ. ಇದರಿಂದ, ಗಣಿಗಳ ವೈಜ್ಞಾನಿಕ ನಿರ್ವಹಣೆ, ಅದಿರಿನ ಗರಿಷ್ಠ ಬಳಕೆ ಸಾಧ್ಯವಾಗಲಿದೆ. ಜತೆಗೆ, ತ್ಯಾಜ್ಯದಿಂದ ಆಗುತ್ತಿದ್ದ ಪರಿಸರ ಹಾನಿ ತಪ್ಪಲಿದೆ.

ತ್ಯಾಜ್ಯದ (ಓವರ್‌ ಬರ್ಡನ್‌, ಸಬ್‌ಗ್ರೇಡೆಡ್‌, ರಿಜೆಕ್ಟೆಡ್‌) ಬಳಕೆಗೆ ಅವಕಾಶ ಕೋರಿದ್ದ ಕೇಂದ್ರ ಗಣಿ ಇಲಾಖೆಯ ಮನವಿಯನ್ನು ಸಚಿವಾಲಯದ ಮೌಲ್ಯಮಾಪನ ಸಮಿತಿ ಪರಾಮರ್ಶಿಸಿತ್ತು. ಸಮಿತಿಯ ಸಲಹೆಯಂತೆ, ಕೇಂದ್ರ ಪರಿಸರ ಸಚಿವಾಲಯವು ಇದೇ 18ರಂದು ಅಧಿಕೃತ ಕಚೇರಿ ಜ್ಞಾಪನಾ ಪತ್ರ (ಒಎಂ) ಹೊರಡಿಸಿದೆ. ಗಣಿಗಾರಿಕೆಗೆ ಈಗಾಗಲೇ ಪಡೆಯಲಾದ ಪರಿಸರ ಅನುಮೋದನೆಯಲ್ಲಿ (ಇ.ಸಿ) ತಿದ್ದುಪಡಿ ಮಾಡಿಕೊಂಡು ತ್ಯಾಜ್ಯದ ವಿಲೇ, ಸಾಗಣೆ, ಮಾರಾಟ ಮಾಡಬಹುದು ಎಂದು ಹೇಳಿದೆ.

2018ರಲ್ಲಿ ಹೊರಡಿಸಿದ್ದ ‘ಒ.ಎಂ’ ಪ್ರಕಾರ, ಗಣಿಗಳಲ್ಲಿನ ಅದಿರು ತ್ಯಾಜ್ಯ ವಿಲೇ, ಸಾಗಣೆ, ಮಾರಾಟ ಪ್ರಕ್ರಿಯೆ ಸರಳವಾಗಿ ಇರಲಿಲ್ಲ. ಕೇಂದ್ರದ ಪರಿಸರ ಇಲಾಖೆಯಿಂದ ಪ್ರತ್ಯೇಕ ಪರಿಸರ ಅನುಮೋದನೆ ಪಡೆಯಬೇಕಿತ್ತು. ಈ ಎಲ್ಲಾ ಸುದೀರ್ಘ ಪ್ರಕ್ರಿಯೆಯಿಂದ ಗಣಿಗಳಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗಿ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು.

ದೇಶದ ಕಬ್ಬಿಣದ ಅದಿರಿನ ಗಣಿಗಳಲ್ಲಿ ವರ್ಷಗಳಿಂದ ಕೋಟ್ಯಂತರ ಟನ್‌ ಅದಿರು ತ್ಯಾಜ್ಯದ ರಾಶಿ ಇದೆ. ಈಚೆಗೆ 20 ಗ್ರೇಡ್‌ನ ಅದಿರಿನ ಮೂಲಕವೂ ಕಬ್ಬಿಣ ಉತ್ಪಾದಿಸುವ ಹಂತಕ್ಕೆ ತಂತ್ರಜ್ಞಾನದ ಆವಿಷ್ಕಾರ ವಾಗಿದೆ.

ತ್ಯಾಜ್ಯ ವಿಲೇವಾರಿ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಪರಿಸರಾತ್ಮಕ ಷರತ್ತುಗಳಲ್ಲಿ ಯಾವುದೇ ರಿಯಾಯಿತಿ ಇಲ್ಲ. ಮಂಜೂರಾತಿ ಪಡೆದಿರುವ ವಾರ್ಷಿಕ ಉತ್ಪಾದನಾ ಮಿತಿಯೊಳಗೇ ತ್ಯಾಜ್ಯದ ಬಳಕೆಯನ್ನೂ ಸೇರಿಸಬೇಕು. ಇ.ಸಿ ತಿದ್ದುಪಡಿಗೆ ಅಗತ್ಯ ದಾಖಲೆಗಳ ಸಲ್ಲಿಕೆ ಜೊತೆಗೆ ಹಳೆ ತ್ಯಾಜ್ಯದ ವಿಲೇವಾರಿಯಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ತಗ್ಗಿಸಲು ಪೂರಕ ‘ಪರಿಸರ ನಿರ್ವಹಣಾ ಯೋಜನೆ’ಯನ್ನೂ ಸಲ್ಲಿಸಬೇಕು ಎಂದು ಪರಿಸರ ಇಲಾಖೆ ತಿಳಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣ ದಲ್ಲಿ ಸಮಾಜ ಪರಿವರ್ತನಾ ಸಮುದಾಯವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿದ್ದ ವರದಿಯಲ್ಲಿ, ತ್ಯಾಜ್ಯದ ಬಳಕೆಗೆ ಷರತ್ತುಗಳನ್ನು ವಿಧಿಸಲಾಗಿದೆ. ‘45 ಗ್ರೇಡ್‌ಗೂ ಮೇಲಿನ ಅದಿರನ್ನು ಮಾತ್ರ ಬಳಸಬಹುದು. ತ್ಯಾಜ್ಯ ರಾಶಿ ಸುಸ್ಥಿರಗೊಂಡಿದ್ದರೆ, ಅದನ್ನು ಮುಟ್ಟುವಂತಿಲ್ಲ’ ಎಂದು ಈಗಾಗಲೇ ಹೇಳಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ