ಗಗನಯಾನ ಮಿಷನ್‌ಗೆ ಕೆಲಸ ಭರದಿಂದ ಸಾಗಿದೆ: ಇಸ್ರೊ ಅಧ್ಯಕ್ಷ ನಾರಾಯಣನ್

ಗಗನಯಾನ ಮಿಷನ್‌ಗೆ ಕೆಲಸ ಭರದಿಂದ ಸಾಗಿದೆ: ಇಸ್ರೊ ಅಧ್ಯಕ್ಷ ನಾರಾಯಣನ್

ಗಗನಯಾನ ಮಿಷನ್‌ಗೆ ಕೆಲಸ ಭರದಿಂದ ಸಾಗಿದೆ: ಇಸ್ರೊ ಅಧ್ಯಕ್ಷ ನಾರಾಯಣನ್

ಶ್ರೀಹರಿಕೋಟಾ: ಮಾನವರಹಿತ ಮೊದಲ ಗಗನಯಾನ ಮಿಷನ್‌ಗೆ ಕೆಲಸ ಭರದಿಂದ ಸಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲೇ ಮಿಷನ್ ನಡೆಸಲು ವ್ಯವಸ್ಥಿತವಾಗಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಭೂ ವೀಕ್ಷಣಾ ಉಪಗ್ರಹ ಉಡಾವಣೆಯು ಈ ಹಣಕಾಸು ವರ್ಷದಲ್ಲಿ ಇಸ್ರೊಗೆ ದೊರೆತ ಮೊದಲ ಯಶಸ್ಸಾಗಿದೆ. ಕಠಿಣ ಪರಿಶ್ರಮಕ್ಕೆ ಸಿಗುವ ಬಹುಮಾನವೆಂದರೆ ಮತ್ತಷ್ಟು ಕೆಲಸ ಎಂದಿದ್ದಾರೆ.

ಇಸ್ರೊ ತಂಡ, ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳು ಮಾನವರಹಿತ ಮೊದಲ ಗಗನಯಾನ ಮಿಷನ್‌ಗಾಗಿ ತೀವ್ರವಾಗಿ ಶ್ರಮಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಭೂ ವೀಕ್ಷಣಾ ಉಪಗ್ರಹದ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಕ್ಯಾಲೆಂಡರ್ ವರ್ಷದಲ್ಲೇ ಗಗನಯಾನ ಮಿಷನ್‌ ನಡೆಸಲಿದ್ದು, ಕೆಲಸ ತೀವ್ರವಾಗಿ ನಡೆಯುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು,, ಈ ಆರ್ಥಿಕ ವರ್ಷದಲ್ಲಿ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-03 ಸೇರಿ ಇನ್ನೂ 6 ಉಡಾವಣೆಯ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಭೂ ವೀಕ್ಷಣಾ ಉಪಗ್ರಹದ ಕಾರ್ಯಾಚರಣೆಯ ಅವಧಿ 9 ವರ್ಷ ಎಂದ ಅವರು, ಇದು ಬೇಹುಗಾರಿಕಾ ಉಪಗ್ರವಿರಬಹುದು ಎಂಬ ಗುಮಾನಿಯನ್ನು ಅಲ್ಲಗಳೆದಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ