ಜಾಸ್ತಿ ಉಜ್ಜುವುದೇ ಬೇಕಿಲ್ಲ, ಟಾಯ್ಲೆಟ್‌ ಕಮೋಡ್‌ , ಟ್ಯಾಪ್ಸ್ ಮೊಂಡು ಕಲೆ ತೆಗೆಯಲು ಸೂಪರ್ ಟಿಪ್ಸ್

ಜಾಸ್ತಿ ಉಜ್ಜುವುದೇ ಬೇಕಿಲ್ಲ, ಟಾಯ್ಲೆಟ್‌ ಕಮೋಡ್‌ , ಟ್ಯಾಪ್ಸ್ ಮೊಂಡು ಕಲೆ ತೆಗೆಯಲು ಸೂಪರ್ ಟಿಪ್ಸ್

ಜಾಸ್ತಿ ಉಜ್ಜುವುದೇ ಬೇಕಿಲ್ಲ, ಟಾಯ್ಲೆಟ್‌ ಕಮೋಡ್‌ , ಟ್ಯಾಪ್ಸ್ ಮೊಂಡು ಕಲೆ ತೆಗೆಯಲು ಸೂಪರ್ ಟಿಪ್ಸ್

Toilet Cleaning tips : ಹೊಸದರಲ್ಲಿ ಬಚ್ಚಲು ಮನೆ ಟೈಲ್ಸ್‌, ಟಾಯ್ಲಟ್‌ ಕಮೋಡ್‌, ನಲ್ಲಿ ಎಲ್ಲವೂ ಫಳ ಫಳನೆ ಹೊಳೆಯುತ್ತಿರುತ್ತದೆ. ಆದರೆ ಕಾಲ ಕಳೆದಂತೆ ಟೈಲ್ಸ್‌, ಕಮೋಡ್ ಮತ್ತು ನಲ್ಲಿಯಲ್ಲಿ ಗಡಸು ನೀರಿನ ಕಲೆಗಳು ಸೇರಿಕೊಳ್ಳಲು ಶುರುವಾಗುತ್ತದೆ. ಇದರಿಂದ ತುಕ್ಕು ಬಿಳಿ ಕಲೆಗಳು ಕಾಣಿಸುತ್ತದೆ. ಇದು ಹೈಜೀನ್‌ ಕೂಡಾ ಅಲ್ಲ, ನೋಡುವುದಕ್ಕೂ ಅಸಹ್ಯ.

ಆದರೂ ಕೆಲವೊಂದು ರಾಸಾಯನಿಕಗಳನ್ನು ಬಳಸಿ ಇವುಗಳನ್ನು ಕ್ಲೀನ್‌ ಮಾಡಬಹುದು. ಮಾರುಕಟ್ಟೆಯಲ್ಲಿಯೂ ತುಂಬಾ ಉತ್ಪನ್ನಗಳು ಸಿಗುತ್ತವೆ. ಆದರೆ ಅವುಗಳು ದುಬಾರಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರ ಬದಲಿಗೆ ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಈ ಕಲೆಗಳನ್ನು ತೆಗೆದು ಹಾಕಬಹುದು.

ಟಾಯ್ಲಟನ್ನು ಮತ್ತು ಬಚ್ಚಲು ಮನೆಯ ಟ್ಯಾಪ್‌ ಅನ್ನು ಕಲೆರಹಿತವಾಗಿಸುವ ಸರಳ ವಿಧಾನ (Toilet and Tap Cleaning tips): ಈ ಕಲೆಗಳನ್ನು ಬಹಳ ಸುಲಭವಾಗಿ ಶುಚಿಗೊಳಿಸುವ ಸೂಕ್ತ ವಿಧಾನವೆಂದರೆ ಸಿಟ್ರಿಕ್ ಆಮ್ಲದ ಪುಡಿಯನ್ನು ಬಳಸುವುದು. ಇದು ಸುಲಭವಾಗಿ ಸಿಗುತ್ತದೆ.

ಇದನ್ನು ಶೌಚಾಲಯದಲ್ಲಿ ಬಳಸುವುದು ಹೇಗೆ ?

ಸಿಟ್ರಿಕ್ ಆಮ್ಲದ ಪುಡಿಯನ್ನು (citric acid powder) 2-3 ಚಮಚ ಬಿಸಿ ನೀರಿನಲ್ಲಿ ಕರಗಿಸಿ ಟಾಯ್ಲೆಟ್ ಬೌಲ್‌ಗೆ ಸುರಿಯಿರಿ.
ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ಫ್ಲಶ್ ಮಾಡಿದರೆ ಎಲ್ಲಾ ರೀತಿಯ ಕಲೆಗಳು ಮಾಯವಾಗಿ ಬಿಡುತ್ತವೆ.

ಸಿಟ್ರಿಕ್ ಆಮ್ಲದ ಪುಡಿಯನ್ನು ಹೆಲ್ತ್‌ ಫುಡ್‌ ಸ್ಟೋರ್‌, ನ್ಯಾಚ್ಯುರಲ್‌ ಪ್ರಾಡಕ್ಟ್‌ ಶಾಒ ಮತ್ತು ಆನ್‌ಲೈನ್‌ (online) ಮೂಲಕ ಖರೀದಿಸಬಹುದು. ಈ ವಿಧಾನದ ನೈಸರ್ಗಿಕವಾಗಿದ್ದು ಹೆಚ್ಚು ಪವರ್‌ ಫುಲ್‌ ಆಗಿದೆ. ಅದು ಘಾಟು ವಾಸನೆಯನ್ನು ಬಿಡುವುದಿಲ್ಲ, ಜೊತೆಗೆ ಟೈಲ್ಸ್‌, ನಲ್ಲಿ ಹೀಗೆ ಎಲ್ಲಾ ಕಡೆ ಬಳಸುವುದಕ್ಕೆ ಸುರಕ್ಷಿತ ಆಯ್ಕೆಯಾಗಿದೆ. ಶೌಚಾಲಯ, ನಲ್ಲಿಗಳು, ಟೈಲ್ಸ್ ಮತ್ತು ಶವರ್ ಪರದೆಗಳ ಮೇಲೆ ಇದನ್ನು ಯಾವುದೇ ಹೆದರಿಕೆ ಇಲ್ಲದೆ ಬಳಸಬಹುದಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

Toilet Cleaning Tips ನಿಂಬೆಹಣ್ಣಿನ ರಸ :

ತಾಜಾ ನಿಂಬೆಹಣ್ಣಿನ ರಸವನ್ನು ಬಳಸುವ ಮೂಲಕವೂ ಈ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಎನ್ನಲಾಗಿದೆ. ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಕಲೆಗಳ ಮೇಲೆ ಚೆನ್ನಾಗಿ ಉಜ್ಜಬೇಕು. ನಂತರ 10 ರಿಂದ 15 ನಿಮಿಷ ಹಾಗೆಯೇ ಬಿಡಬೇಕು. ನಂತರ ಬಿಸಿ ನೀರಿನಿಂದ ತೊಳೆದರೆ ನಲ್ಲಿ ಮತ್ತೆ ಫಳ ಫಳನೆ ಹೊಳೆಯುತ್ತದೆ ಎನ್ನಲಾಗಿದೆ.

ಶೌಚಾಲಯ ಮತ್ತು ಬಾತ್‌ ರೂಮನ್ನು ಹೊಸದರಂತೆ ಇರಿಸಲು ಬೇಕಾಗುವ ಪದಾರ್ಥಗಳು :

ಬಿಳಿ ವಿನೆಗರ್ ಮತ್ತು ನೀರು :

ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ. ಮಿಶ್ರಣವನ್ನು ಸ್ಪ್ರೇ ಬಾಟಲಿಯೊಳಗೆ ಹಾಕಿ. ಶೌಚಾಲಯದಲ್ಲಿ ಕಲೆಗಳಿರುವ ಜಾಗಕ್ಕೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಸ್ಪ್ರೇ ಮಾಡಿ. ವಿನೆಗರ್, ಅದರ ಆಮ್ಲೀಯತೆಯಿಂದಾಗಿ, ಕೆಲವೇ ನಿಮಿಷಗಳಲ್ಲಿ ಕಲೆಗಳನ್ನು ಕರಗಿಸುತ್ತದೆ. ಇದನ್ನು ಸಿಂಪಡಿಸಿದ ನಂತರ ತುಂಬಾ ಸ್ಕ್ರಬ್ ಮಾಡುವ ಅಗತ್ಯವೂ ಇರುವುದಿಲ್ಲ.

ಈ ಮಿಶ್ರಣವನ್ನು ಕಮೊಡ್‌ ಒಳಗೆ ಕ್ಲೀನ್‌ ಮಾಡಲು ಹಾಕುವುದಾದರೆ ವಿನೆಗರ್ ಅನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಿಡಿ. ನಂತರ ಬ್ರಷ್‌ನಿಂದ ಕಲೆ ಇರುವ ಜಾಗವನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಕೊನೆಗೆ ಫ್ಲಶ್ ಮಾಡಿ. ಇಷ್ಟಾಗಿ ಇನ್ನೂ ಸರಿಯಾಗಿ ಕ್ಲೀನ್‌ ಆಗಿಲ್ಲ ಎಂದಾದರೆ ಮತ್ತೊಮ್ಮೆ ರಿಪೀಟ್‌ ಮಾಡಿ.

ಶೌಚಾಲಯವನ್ನು ಸ್ವಚ್ಛಗೊಳಿಸಲು ಇರುವ ಬೇರೆ ಪರಿಣಾಮಕಾರಿ ವಿಧಾನಗಳು :

ಎರಡು ನಿಂಬೆಹಣ್ಣನ್ನು ಹಿಂಡಿ ಅವುಗಳ ರಸವನ್ನು ಉಪ್ಪಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಮೋಡ್‌ ಒಳಗೆ ಸುರಿಯಿರಿ. ಸುಮಾರು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬ್ರಷ್‌ನಿಂದ ಕಲೆಗಳನ್ನು ಉಜ್ಜಿ ತೊಳೆಯಿರಿ.

ಬಿಸಿನೀರು ಮತ್ತು ಅಡಿಗೆ ಸೋಡಾ :

ನೀರನ್ನು ಚೆನ್ನಾಗಿ ಕುದಿಸಿ, ಸ್ವಲ್ಪ ತಣ್ಣಗಾಗಲು ಬಿಡಿ ಮತ್ತು ಅದನ್ನು ಶೌಚಾಲಯಕ್ಕೆ ಸುರಿಯಿರಿ. ಅರ್ಧ ಕಪ್ ಅಡಿಗೆ ಸೋಡಾ ಸೇರಿಸಿ ಮತ್ತು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬ್ರಷ್‌ನಿಂದ ಉಜ್ಜಿದರೆ ಕಲೆಗಳು ಮಾಯವಾಗುವುದು.

ಬಿಳಿ ವಿನೆಗರ್ ಮತ್ತು ಅಡಿಗೆ ಸೋಡಾ:

ಒಂದು ಕಪ್ ವಿನೆಗರ್ ಅನ್ನು ಟಾಯ್ಲೆಟ್‌ ಕಮೋಡ್‌ ಒಳಗೆ ಸುರಿಯಿರಿ. ಅದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅಡಿಗೆ ಸೋಡಾವನ್ನು ಸೇರಿಸಿ ಮತ್ತು ಬ್ರಷ್‌ನಿಂದ ಚೆನ್ನಾಗಿ ಉಜ್ಜಿದರೆ ಕಲೆಗಳನ್ನು ಹೋಗಲಾಡಿಸಬಹುದು. ಈ ಮಿಶ್ರಣವು ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಗಡಸು ನೀರಿನ ಕಲೆಗಳನ್ನು ಸಂಗ್ರಹವಾಗದಂತೆ ತಡೆಯುವುದು ಹೇಗೆ ?:

ಬಚ್ಚಲು ಮನೆ ಮತ್ತು ಅಡುಗೆಮನೆಯ ನಲ್ಲಿಗಳಲ್ಲಿ ನೀರಿನ ಬಿಳು ಕಲೆಗಳು ಸಂಗ್ರಹವಾಗುವುದು ಸಾಮಾನ್ಯ. ಇದನ್ನು ತಡೆಯಲು ಕೆಲವು ಸರಳ ಸಲಹೆಗಳು ಇಲ್ಲಿವೆ.

ನಿಯಮಿತವಾಗಿ ಶುಚಿಗೊಳಿಸುವುದು :

ನೀರಿನ ಬಿಳಿ ಮತ್ತು ಮೊಂಡುತನದ ಕಲೆಗಳು ನಿರ್ಮಾಣವಾಗುವುದನ್ನು ತಡೆಯಲು ಕನಿಷ್ಠ ವಾರಕ್ಕೊಮ್ಮೆ ಶೌಚಾಲಯ, ಬಚ್ಚಲು ಮನೆ, ಅಡುಗೆಮನೆಯ ನಲ್ಲಿಯನ್ನು ಸ್ವಚ್ಛಗೊಳಿಸಿ.

ಬಿಳಿ ವಿನೆಗರ್ ಅನ್ನು ನಿಯಮಿತವಾಗಿ ಬಳಸಿ:

ಬಿಳಿ ವಿನೆಗರ್ ಅನ್ನು ಶೌಚಾಲಯದೊಳಗೆ ಸಿಂಪಡಿಸಿ ಮತ್ತು ಬ್ರಷ್‌ನಿಂದ ಸ್ಕ್ರಬ್ ಮಾಡುವ ಮೊದಲು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ವಿನೆಗರ್ ಅತ್ಯುತ್ತಮ ನೈಸರ್ಗಿಕ ಕ್ಲೀನರ್ ಆಗಿದೆ. ಇದು ಬಿಳಿ ಕಲೆ ರೂಪುಗೊಳ್ಳದಂತೆ ತಡೆಯುತ್ತದೆ.

ನೀರಿನ ಲೀಕೆಜ್‌ ಅನ್ನು ಸರಿಪಡಿಸಿ:

ಶೌಚಾಲಯದಲ್ಲಿ (bathroom) ನೀರು ಲೀಕ್‌ ಆಗುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದನ್ನು ಸರಿಪಡಿಸಿ. ನಿರಂತರವಾಗಿ ನೀರು ತೊಟ್ಟಿಕ್ಕುವುದರಿಂದ ನೀರು ವ್ಯರ್ಥವಾಗುವುದರ ಜೊತೆಗೆ, ನೀರಿನ ಕಲೆ ರೂಪುಗೊಳ್ಳುವುದು.

ಬಚ್ಚಲು ಮನೆ, ಶೌಚಾಲಯದ ಒಳಗೆ ಸರಿಯಾಗಿ ಗಾಳಿ ಸಂಚಾರ ಇರುವಂತೆ ನೋಡಿಕೊಳ್ಳಿ. ತೇವಾಂಶ ಹಾಗೆಯೇ ಉಳಿದುಕೊಂಡರೆ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುವುದು. ಇದರಿಂದ ಕೆಟ್ಟ ವಾಸನೆ ಕೂಡಾ ಬರುವುದು. ಕಿಟಕಿ ತೆರೆಯಿರಿ ಅಥವಾ ಎಕ್ಸಾಸ್ಟ್ ಫ್ಯಾನ್ ಬಳಸಿ.

ಶುಚಿಗೊಳಿಸುವ ಮಾತ್ರೆಗಳನ್ನು ಬಳಸಿ: ಕಾಲಕಾಲಕ್ಕೆ ಟ್ಯಾಂಕ್‌ನಲ್ಲಿ ಶುಚಿಗೊಳಿಸುವ ಮಾತ್ರೆಯನ್ನು ಇರಿಸಿ. ಈ ಮಾತ್ರೆಗಳು ಶೌಚಾಲಯದಲ್ಲಿ ನೀರಿನ ಕಲೆ ರೂಪುಗೊಳ್ಳದಂತೆ ತಡೆಯುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ