ನವಪಂಚಮ ಯೋಗದಿಂದ ಈ ರಾಶಿಯವರಿಗೆ ಭರ್ಜರಿ ಧನ ಲಾಭ : ಅಷ್ಟೈಶ್ವರ್ಯ ಒಲಿದು ಬರುವ ಕಾಲ

ನವಪಂಚಮ ಯೋಗದಿಂದ ಈ ರಾಶಿಯವರಿಗೆ ಭರ್ಜರಿ ಧನ ಲಾಭ : ಅಷ್ಟೈಶ್ವರ್ಯ ಒಲಿದು ಬರುವ ಕಾಲ

ನವಪಂಚಮ ಯೋಗದಿಂದ ಈ ರಾಶಿಯವರಿಗೆ ಭರ್ಜರಿ ಧನ ಲಾಭ : ಅಷ್ಟೈಶ್ವರ್ಯ ಒಲಿದು ಬರುವ ಕಾಲ

NavaPanchama Rajayoga : ಸೆಪ್ಟೆಂಬರ್ 16ರ ಬೆಳಿಗ್ಗೆ ಗುರು ಮತ್ತು ಚಂದ್ರನ ನಡುವೆ ನವ ಪಂಚಮ ಯೋಗವು ರೂಪುಗೊಳ್ಳುತ್ತದೆ. ಈ ದಿನ ಬೆಳಿಗ್ಗೆ 10.49 ಕ್ಕೆ, ಚಂದ್ರನು ವೃಶ್ಚಿಕ ರಾಶಿಗೆ ಕಾಲಿಡುತ್ತಾನೆ. ಈ ಮೂಲಕ ಕರ್ಕ ರಾಶಿಯಲ್ಲಿ ಗುರುವಿನೊಂದಿಗೆ ನವ ಪಂಚಮ ಯೋಗವನ್ನು ರೂಪಿಸುತ್ತಾನೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಹೇಳಲಾಗುತ್ತದೆ. ಈ ಯೋಗದಿಂದಾಗಿ, ಕೆಲವು ರಾಶಿಯವರು ಆರ್ಥಿಕ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಶುಭ ಫಲಗಳನ್ನು ಪಡೆಯುವರು.

ನವಪಂಚಮ ಯೋಗದಿಂದ ಈ ರಾಶಿಯವರಿಗೆ ಶುಭಫಲ

ಗುರು ಮತ್ತು ಚಂದ್ರನ ಕಾರಣದಿಂದ ರೂಪುಗೊಳ್ಳುವ ನವಪಂಚಮ ಯೋಗವು ಅತ್ಯಂತ ಶುಭವಾಗಿರುವುದು. ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ಸಿಗುವುದು. ಬಡ್ತಿಯ ಸಾಧ್ಯತೆಯೂ ಇದೆ. ಆದಾಯ ಹೆಚ್ಚಾಗುವುದು. ಈ ರಾಶಿಯ ಉದ್ಯಮಿಗಳಿಗೆ ವ್ಯವಹಾರಗಳಲ್ಲಿ ಉತ್ತಮ ಲಾಭವಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಹಣ ಗಳಿಸುವುದಕ್ಕೆ ಹೊಸ ಅವಕಾಶಗಳು ಸಿಗುವುದು. ಹಿಂದೆ ಮಾಡಿದ ಹೂಡಿಕೆಗಳಿಂದ ಉತ್ತಮ ಲಾಭ ಸಿಗುವುದು. ಚಂದ್ರನ ಪ್ರಭಾವದಿಂದ ಈ ರಾಶಿಯ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು.

ಕರ್ಕಾಟಕ ರಾಶಿ (Cancer)

ಗುರು ಮತ್ತು ಚಂದ್ರನ ನವಪಂಚಮ ಯೋಗದಿಂದ ಕರ್ಕಾಟಕ ರಾಶಿಯವರಿಗೆ ರಾಜ ಯೋಗದಂತಹ ಫಲ ಸಿಗುವುದು. ಎದುರಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗುವುದು. ವೃತ್ತಿಜೀವನದ ಸವಾಲುಗಳಿಗೆ ಕೂಡಾ ಪರಿಹಾರ ಸಿಗುವುದು. ಎಲ್ಲಾ ಕೆಲಸಗಳನ್ನೂ ಪಾಸಿಟಿವ್‌ ಮನಸ್ಥಿತಿಯಿಂದಲೇ ಮಾಡುವಿರಿ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ವೈವಾಹಿಕ ಜೀವನವು ಹೆಚ್ಚು ಸಾಮರಸ್ಯದಿಂದ ಕೂಡಿರುವುದು. ನಿಮ್ಮ ಅಪೇಕ್ಷೆಯಂತೆ ನಿಮಗೆ ಇಷ್ಟವಿರುವ ಸ್ಥಳಕ್ಕೆ ವರ್ಗಾವಣೆಯಾಗುವುದು. ಆರ್ಥಿಕವಾಗಿ, ಈ ರಾಶಿಯವರು ಈ ಅವಧಿಯಲ್ಲಿ ತುಂಬಾ ಪ್ರಗತಿ ಕಾಣುವಿರಿ. ಕೆಲವರು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ನವಪಂಚಮ ಯೋಗದ ಸಮಯದಲ್ಲಿ, ಗುರುವು ನಿಮ್ಮ ಹನ್ನೊಂದನೇ ಮನೆಯಲ್ಲಿದ್ದರೆ, ಚಂದ್ರನು ನಿಮ್ಮ ಮೂರನೇ ಮನೆಯಲ್ಲಿರುತ್ತಾನೆ. ಇದರರ್ಥ ಆರ್ಥಿಕ ಲಾಭ ಗಳಿಸುವ ಸಾಧ್ಯತೆ ಹೆಚ್ಚಿದೆ. ಮಾಡಿರುವ ಹೂಡಿಕೆಯಿಂದ ಲಾಭವಾಗುವುದು. ಉತ್ತಮ ಲಾಭ ಗಳಿಸುವ ಅವಕಾಶ ಸಿಗುವುದು. ಈ ಯೋಗದ ಕಾರಣದಿಂದ ಅದೃಷ್ಟ ಹೆಚ್ಚಾಗುವುದು. ನೀವು ಮಾಡುವ ಕೆಲಸಗಳಿಗೆ ಎಲ್ಲರ ಮೆಚ್ಚುಗೆ ಸಿಗುವುದು. ಕೆಲವರು ಉನ್ನತ ಸ್ಥಾನಗಳಿಗೆ ಏರುವರು. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಫಲ ಸಿಗುವುದು.

ನವಪಂಚಮ ಯೋಗದ ಸಮಯದಲ್ಲಿ, ಗುರುವು ಮೀನ ರಾಶಿಯವರ ಐದನೇ ಮನೆಯಲ್ಲಿ ಮತ್ತು ಚಂದ್ರನು ಒಂಭತ್ತನೇ ಮನೆಯಲ್ಲಿ ಇರುತ್ತಾನೆ. ಇದು ನಿಮ್ಮ ಪಾಲಿನ ಅದೃಷ್ಟದಿಂದ ಕೂಡಿದ ಸಮಯ. ಪ್ರಗತಿಗೆ ಸಾಕಷ್ಟು ಅವಕಾಶಗಳು ಒಲಿದು ಬರುವುದು. ಅನಿರೀಕ್ಷಿತವಾಗಿ ಸಂಪತ್ತು ಹೆಚ್ಚಾಗುವ ಸಾಧ್ಯತೆಯಿದೆ. ಆಸ್ತಿ ಖರೀದಿಸಬಹುದು. ಮನೆ ನಿರ್ಮಾಣ ಕೆಲಸಕ್ಕೆ ಕೈ ಹಾಕಬಹುದು. ಕಳೆದುಕೊಂಡಿರುವ ಹಣ ಈ ಅವಧಿಯಲ್ಲಿ ಸಿಗುವುದು. ಹಣಕಾಸಿನ ಸಮಸ್ಯೆಗಳೆಲ್ಲಾ ನೀಗುವುದು. ಕೆಲಸದಲ್ಲಿ ಹಠಾತ್ ಬಡ್ತಿ ಸಿಗುವುದು. ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವಿರಿ. ಎಲ್ಲಾ ರೀತಿಯ ಸವಾಲುಗಳನ್ನು ಜಯಿಸಬಹುದು.

ಜಾತಕದಲ್ಲಿ ರಾಶಿ, ನಕ್ಷತ್ರಗಳ ಸ್ಥಾನ ಮತ್ತು ಪಾದಕ್ಕೆ ಅನುಗುಣವಾಗಿ ಜಾತಕ ಫಲ ಬದಲಾಗಬಹುದು. ನಿಖರವಾದ ಫಲ ಹೇಗಿರುತ್ತದೆ ಎಂದು ನೋಡಬೇಕಾದರೆ ನಿಮ್ಮ ವೈಯಕ್ತಿಕ ಜಾತಕವನ್ನು ತಜ್ಞ ಜ್ಯೋತಿಷಿಗಳ ಬಳಿ ತೋರಿಸಬೇಕಾಗುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ