ಗೌರಿಬಿದನೂರು | ಅಧಿಕಾರಿಗಳ ನಿರ್ಲಕ್ಷ್ಯ: ಪಾಳುಬಿದ್ದ ವೇ ಬ್ರಿಡ್ಜ್

ಗೌರಿಬಿದನೂರು | ಅಧಿಕಾರಿಗಳ ನಿರ್ಲಕ್ಷ್ಯ: ಪಾಳುಬಿದ್ದ ವೇ ಬ್ರಿಡ್ಜ್

ಗೌರಿಬಿದನೂರು | ಅಧಿಕಾರಿಗಳ ನಿರ್ಲಕ್ಷ್ಯ: ಪಾಳುಬಿದ್ದ ವೇ ಬ್ರಿಡ್ಜ್

ಗೌರಿಬಿದನೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ವೇ ಬ್ರಿಡ್ಜ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರು ವರ್ಷಗಳಿಂದ ಪಾಳು ಬಿದ್ದಿದೆ.

ತಾಲ್ಲೂಕಿನ ರೈತರು ಬೆಳೆದ ಬೆಳೆಗೆ ನಿಖರವಾಗಿ ತೂಕ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ 2019–20ರಲ್ಲಿ ₹20 ಲಕ್ಷ ವೆಚ್ಚದಲ್ಲಿ ವೇ ಬ್ರಿಡ್ಜ್‌ ಹಾಗೂ ಕಚೇರಿಯನ್ನು ನಿರ್ಮಿಸಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಅನುಕೂಲವಾಗಬೇಕಿದ್ದ ವೇ ಬ್ರಿಡ್ಜ್‌ ಸಂಪೂರ್ಣವಾಗಿ ಪಾಳು ಬಿದ್ದಿದೆ. ಕಚೇರಿಯ ಬಾಗಿಲು ಹಾಗೂ ಉಪಕರಣಗಳು ಗೆದ್ದಲು ತಿನ್ನುತ್ತಿವೆ.

ತಾಲ್ಲೂಕಿನಲ್ಲಿ ರೈತರು ಬೆಳೆಯುವ ರಾಗಿ, ಮೆಕ್ಕೆಜೋಳ, ದವಣ, ಪರಂಗಿ, ಬಾಳೆ, ಪ್ರತಿನಿತ್ಯ ರೈತರು ತರುವ ತರಕಾರಿ, ಪಡಿತರ ಅಕ್ಕಿ, ಅಕ್ಷರ ದಾಸೋಹ ಅಕ್ಕಿ ಸೇರಿದಂತೆ ಪಡಿತರ ಮತ್ತು ರೈತರ ಸರಕನ್ನು ತೂಕ ಮಾಡಲು ಸರ್ಕಾರದ ವತಿಯಿಂದ ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವೇ ಬ್ರಿಡ್ಜ್‌ ಸುತ್ತಲೂ ಗಿಡಗಂಟಿ ಬೆಳೆದಿದ್ದು, ಬಳಕೆ ಬಾರದಾಗಿದೆ. ಹಾಗಾಗಿ ರೈತರು ಖಾಸಗಿ ವೇ ಬ್ರಿಡ್ಜ್‌ ನಲ್ಲಿ ಹೆಚ್ಚಿನ ಹಣ ನೀಡಿ ತೂಕ ಮಾಡಿಸುವಂತಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಪ್ರತಿ ಉತ್ಪನ್ನಕ್ಕೂ ಇಂತಿಷ್ಟು ಸುಂಕ ವಸೂಲಿ ಮಾಡುತ್ತಾರೆ. ಆದರೆ, ರೈತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಹಾಗಾಗಿ ಸಂಬಂಧಪಟ್ಟವರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ವೇ ಬ್ರಿಡ್ಜ್‌ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ

ಸರ್ಕಾರ ರಾಗಿಗೆ ಬೆಂಬಲ ಬೆಲೆ ಘೋಷಿಸಿದಾಗ, ಇಲ್ಲಿನ ಅಧಿಕಾರಿಗಳು ಖಾಸಗಿಯವರ ಬಳಿ ತೂಕ ಹಾಕಿಸಿಕೊಂಡು ಬರಲು ತಿಳಿಸಿದ್ದರು. ಎಪಿಎಂಸಿ ಆವರಣದಲ್ಲಿರುವ ವೇ ಬ್ರಿಡ್ಜ್‌ನಲ್ಲಿ ತೂಕ ಹಾಕಿಸಿ ಎಂದರೆ, ಅದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಿ ಕಳಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ