
ತರೀಕೆರೆಯಲ್ಲಿ ರೆಡ್‌ಕ್ರಾಸ್ ಕಚೇರಿ ಶೀಘ್ರದಲ್ಲಿ ಆರಂಭ
ತರೀಕೆರೆ: ‘ವಿಶ್ವದ ಅತಿ ದೊಡ್ಡ ಸೇವಾ ಸಂಸ್ಥೆ ಭಾರತೀಯ ರೆಡ್‌ಕ್ರಾಸ್‌ನ ಆಡಳಿತ ಕಚೇರಿ ತರೀಕೆರೆಯಲ್ಲಿ ಶೀಘ್ರ ಆರಂಭವಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಪಿ.ಚಂದ್ರಶೇಖರ್ ತಿಳಿಸಿದ್ದಾರೆ.
ತರೀಕೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಡೆಸಲಾದ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಶಿವಮೊಗ್ಗ, ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಿದ್ದೆವು. ಇದೀಗ ಶಾಶ್ವತ ಪರಿಹಾರವಾಗಿ ತರೀಕೆರೆಯಲ್ಲೇ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ಈ ಮಹತ್ವದ ಯೋಜನೆ ಅಭಿಯಾನದಲ್ಲಿ ಸಾರ್ವಜನಿಕರು ಸದಸ್ಯರಾಗಿ ಸಹಕರಿಸಬಹುದು ಎಂದು ತಿಳಿಸಿದ್ದಾರೆ.
ಸಂಸ್ಥೆ ಸದಸ್ಯತ್ವಕ್ಕೆ ಬಿ.ಪಿ.ಚಂದ್ರಶೇಖರ್, ಮೊ.94822 24835, ಕಲ್ಪನಾ ಸುಧಾಮ್, ಮೊ. 99866 14842 ಸಂಪರ್ಕಿಸಬಹುದು.