ತಾಂತ್ರಿಕ ಕಾರಣ ನೀಡಿ ಪಿಂಚಣಿ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ತಾಂತ್ರಿಕ ಕಾರಣ ನೀಡಿ ಪಿಂಚಣಿ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ತಾಂತ್ರಿಕ ಕಾರಣ ನೀಡಿ ಪಿಂಚಣಿ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ದೀರ್ಘಕಾಲ ನಿರಂತರ ಸೇವೆ ಸಲ್ಲಿಸಿ, ಕಾಯಂಗೊಂಡಿರುವ ನೌಕರರಿಗೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ಪಿಂಚಣಿ ಎಂಬುದು ಕೊಡುಗೆಯೋ ಅಥವಾ ಅನುಕಂಪ ಧನವೋ ಅಲ್ಲ;ನೌಕರರು ಸಲ್ಲಿಸಿದ ಹಿಂದಿನ ಸೇವೆಗೆ ಪ್ರತಿಫಲವಾಗಿ ದೊರೆಯುವ ವೇತನ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನೌಕರರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಕೃತಕವಾಗಿ ಅಥವಾ ಆಡಳಿತಾತ್ಮಕ ಕಾರಣಗಳಿಂದ ಕೆಲವು ದಿನಗಳ ಕಾಲ ಸೇವೆಯಲ್ಲಿ ವಿರಾಮ ಉಂಟಾಗಿದ್ದರೆ, ಆ ವಿರಾಮವನ್ನು ಪಿಂಚಣಿ ಲೆಕ್ಕಾಚಾರದಿಂದ ಹೊರಗಿಡಬಾರದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ಪೀಠ ಹೇಳಿದೆ.

ಗುತ್ತಿಗೆ, ತಾತ್ಕಾಲಿಕ ಅಥವಾ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ ಅವಧಿಯನ್ನೂ ಬಳಿಕ ಅವರ ಸೇವೆ ಕಾಯಂಗೊಂಡಿದ್ದು, ಪಿಂಚಣಿಗೆ ಅರ್ಹ ಸೇವೆಯಾಗಿ ಪರಿಗಣಿಸಬೇಕು ಎಂದು ಪೀಠ ಹೇಳಿದೆ.

ಆ ಮೂಲಕ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ನೌಕರರು ಸೇವೆ ಕಾಯಂಗೊಳ್ಳುವ ಮುನ್ನ ಸಲ್ಲಿಸಿದ್ದ ಸೇವೆಯನ್ನೂ ಪಿಂಚಣಿಗೆ ಪರಿಗಣಿಸಲು ಅವಕಾಶ ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ 2020ರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರಿಂದ ಈ ನೌಕರರು 2004ರ ಜನವರಿ 1ರಿಂದ ಜಾರಿಗೆ ಬಂದ ಹೊಸ ಪಿಂಚಣಿ ಯೋಜನೆಯ ಬದಲು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸೇವೆಯನ್ನು ಕಾಯಂ ಮಾಡುವಂತೆ ಈ ಹಿಂದೆ ನಡೆದಿದ್ದ ಪ್ರಕರಣದ ವಿಚಾರಣೆಯನ್ನೇ ಆಧರಿಸಿ, ಬಳಿಕ ಪಿಂಚಣಿ ಸೌಲಭ್ಯ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನೌಕರರು ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ಬಳಿಕ ಅವರ ಸೇವೆ ಕಾಯಂಗೊಂಡರೆ, ತಾಂತ್ರಿಕ ಕಾರಣಗಳನ್ನು ಅಥವಾ ಆಡಳಿತಾತ್ಮಕವಾಗಿ ಉಂಟಾದ ಸೇವಾ ವಿರಾಮಗಳನ್ನು ಮುಂದಿಟ್ಟುಕೊಂಡು ಪಿಂಚಣಿ ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಾಲಯ ಹೇಳಿದೆ.

ನೌಕರರು ಟೈಪ್‌ರೈಟಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಒಂದು ವರ್ಷದ ಪರೀಕ್ಷಾರ್ಥ ಸೇವೆ ಪೂರ್ಣಗೊಳಿಸಬೇಕು ಅಥವಾ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಮಂಡಳಿಯ ವಾದವನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ