ಟ್ರಂಪ್ ಹೊಸ ವೀಸಾ ನಿಯಮಕ್ಕೆ ಕೋರ್ಟ್ ತಡೆ: ಭಾರತೀಯರಿಗೂ ರಿಲೀಫ್

ಟ್ರಂಪ್ ಹೊಸ ವೀಸಾ ನಿಯಮಕ್ಕೆ ಕೋರ್ಟ್ ತಡೆ: ಭಾರತೀಯರಿಗೂ ರಿಲೀಫ್

ಟ್ರಂಪ್ ಹೊಸ ವೀಸಾ ನಿಯಮಕ್ಕೆ ಕೋರ್ಟ್ ತಡೆ: ಭಾರತೀಯರಿಗೂ ರಿಲೀಫ್

ವಾಷಿಂಗ್ಟನ್: ವಿದೇಶಿ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಪತ್ರಕರ್ತರ ಉದ್ಯೋಗಾವಧಿಗೆ ಕಠಿಣ ಮಿತಿ ವಿಧಿಸುವ ಟ್ರಂಪ್ ಆಡಳಿತದ ಹೊಸ ನಿಯಮ ಜಾರಿಗೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ.

ಮ್ಯಾಸಚೂಸೆಟ್ಸ್ ಜಿಲ್ಲೆಯ ನ್ಯಾಯಾಧೀಶರು ಸೋಮವಾರ ನೀಡಿರುವ ಈ ಆದೇಶದಿಂದ ಭಾರತ ಸೇರಿದಂತೆ ವಿವಿಧ ದೇಶಗಳ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಹೊಸ ನಿಯಮ ಮಂಗಳವಾರದಿಂದ ಜಾರಿಗೆ ಬರಬೇಕಿತ್ತು. ಅದಕ್ಕೂ ಮುನ್ನವೇ ನ್ಯಾಯಾಲಯ ತಡೆ ನೀಡಿದೆ.

ಹೊಸ ನೀತಿಯಿಂದ ಅಮೆರಿಕದ ಆರ್ಥಿಕತೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಗೆ ಭಾರಿ ಹಾನಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶ ನಾಲ್ಕನೇ ಎಫ್. ಡೆನ್ನಿಸ್ ಸೇಲರ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ಹಿತಾಸಕ್ತಿ ರಕ್ಷಿಸಲು ಈ ನಿಯಮ ಅಗತ್ಯ ಎಂಬ ಸರ್ಕಾರದ ವಾದವನ್ನೂ ಅವರು ಪುರಸ್ಕರಿಸಲಿಲ್ಲ.

ನ್ಯಾಯಾಲಯ ನೀಡಿರುವ ಈ ಆದೇಶವು, ನಿಯಮದ ವಿರುದ್ಧ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸೀಮಿತಗೊಳಿಸಬೇಕು ಎಂಬ ಸರ್ಕಾರದ ವಾದವನ್ನೂ ಸೇಲರ್ ತಿರಸ್ಕರಿಸಿದ್ದಾರೆ.

ಈ ಪ್ರಕರಣವನ್ನು ‍ಪ್ರಶ್ನಿಸಿ ಸುಮಾರು 600 ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಆದರೆ ಅಮೆರಿಕದಲ್ಲಿ 5,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿವೆ ಎಂದು ನ್ಯಾಯಾಧೀಶರು ಗಮನಿಸಿದ್ದಾರೆ.

ಟ್ರಂಪ್ ಆಡಳಿತ ಜುಲೈನಲ್ಲಿ ಅಂತಿಮಗೊಳಿಸಿದ್ದ ಈ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮತ್ತು ವಿನಿಮಯ ಕಾರ್ಯಕ್ರಮದ ಸಂದರ್ಶಕರ ವೀಸಾಗಳ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಪತ್ರಕರ್ತರ ವೀಸಾಗಳಿಗೆ 240 ದಿನಗಳ ಮಿತಿ ವಿಧಿಸಲಾಗಿತ್ತು.

ಚೀನಾದ ಪತ್ರಕರ್ತರಿಗೆ 90 ದಿನಗಳ ವೀಸಾ ಅವಧಿಯನ್ನು ನಿಗದಿಪಡಿಸಲಾಗಿತ್ತು.

ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ವೀಸಾ ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ, ಅದನ್ನು ಅನುಮೋದಿಸುವುದು ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್) ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿತ್ತು. ವಿಸ್ತರಣೆ ಅರ್ಜಿಯನ್ನು ತಿರಸ್ಕರಿಸಿದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶವಿರಲಿಲ್ಲ.

ಉನ್ನತ ಶಿಕ್ಷಣ ಕ್ಷೇತ್ರ ಹಾಗೂ ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ಈ ನಿಯಮವನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ